ತಿರುವನಂತಪುರಂ: ವಿಶ್ವಾದಂತ್ಯ ಕೊರೊನಾ ವೈರಸ್‍ಗೆ ಬಲಿಯಾದವರಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ಪವಾಡ ರೀತಿ ಕೇರಳದ ವೃದ್ಧ ದಂಪತಿ ಕೊರೊನಾ ವಿರುದ್ಧ ಹೋರಾಡಿ ಸಾವು ಗೆದ್ದಿದ್ದಾರೆ.
ಕೊರೊನಾ ಪಾಸಿಟಿವ್ ಆಗಿದ್ದ ಕೇರಳದ ಕೊಟ್ಟಾಯಂ ದಂಪತಿ, 93 ವರ್ಷದ ಥಾಮಸ್ ಮತ್ತು 88 ವರ್ಷದ ಥ್ರೆಸ್ಯಮ್ಮ ಅವರು ಗುಣಮುಖರಾಗಿದ್ದಾರೆ. ಹೀಗಾಗಿ ಅವರನ್ನು ಶುಕ್ರವಾರ ವೈದ್ಯಕೀಯ ಕಾಲೇಜು ಕೊಟ್ಟಾಯಂನಿಂದ ಡಿಸ್ಚಾರ್ಜ್ ಮಾಡಲಾಗಿದೆ.
Advertisement
Kerala: A couple in Kottayam, 93-year-old Thomas and 88-year-old Thresyamma, who were #COVID19 positive were discharged from Medical College Kottayam today after they recovered. pic.twitter.com/4PNOWDvu8w
— ANI (@ANI) April 3, 2020
Advertisement
ಇಟಲಿಯಿಂದ ಮರಳಿದ್ದ ತಮ್ಮ ಮಗ ಮತ್ತು ಕುಟುಂಬದ ಸದಸ್ಯರೊಂದಿಗೆ ಸಂಪರ್ಕಕ್ಕೆ ಬಂದ ನಂತರ ದಂಪತಿ ಸೋಂಕಿಗೆ ಒಳಗಾಗಿದ್ದರು. ದಂಪತಿ ಒಂದೆರಡು ದಿನಗಳ ಹಿಂದೆಯೇ ಗುಣಮುಖರಾಗಿದ್ದರು. ಆದಾಗ್ಯೂ ಆಸ್ಪತ್ರೆಯ ಅಧಿಕಾರಿಗಳು ಕೆಲವು ಪರೀಕ್ಷೆಗಳಿಗೆ ಉಳಿಸಿಕೊಂಡಿದ್ದರು. ಶುಕ್ರವಾರ ಸಭೆ ನಡೆಸಿದ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ದಂಪತಿಯನ್ನು ಡಿಸ್ಚಾರ್ಜ್ ಮಾಡುವ ನಿರ್ಧಾರ ಕೈಗೊಂಡಿತು.
Advertisement
ವೃದ್ಧ ದಂಪತಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿ ಆಂಬುಲೆನ್ಸ್ ಮೂಲಕ ಮತ್ತ ಮನೆ ತೆರಳಿದರು. ಇದಕ್ಕೂ ಮುನ್ನ ದಂಪತಿಯೊಂದಿಗೆ ವೃದ್ಯರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ವ್ಯಕ್ತಪಡಿಸಿದರು.