ಮಂಡ್ಯ: ಇಲ್ಲಿನ (Mandya) ಕೆರಗೋಡಿನ (Keragodu) ವಿವಾದಿತ ಅರ್ಜುನ ಸ್ತಂಭದಲ್ಲಿ ಹಾರಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಇಂದು ಬೆಳ್ಳಂ ಬೆಳಗ್ಗೆ ಮಂಡ್ಯ ಜಿಲ್ಲಾಡಳಿತ ಪೊಲೀಸರ ಭದ್ರತೆಯಲ್ಲಿ ಇಳಿಸಿ ಹೊಸ ತ್ರಿವರ್ಣ ಧ್ವಜವನ್ನು ಹಾರಿಸಿದೆ.
ಜ.28 ರಂದು ಕೆರಗೋಡಿನ ಅರ್ಜುನ ಸ್ತಂಭದಲ್ಲಿದ್ದ ಹನುಮ ಧ್ವಜವನ್ನು ( Keragodu Hanuman Flag Controversy) ಕೆಳಗಿಳಿಸಿ ಆತುರಾತುವಾಗಿ ರಾಷ್ಟ್ರ ಧ್ವಜವನ್ನು ಹಾರಿಸಿತ್ತು. ಈ ವೇಳೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಕೆರಗೋಡಿನ ಗ್ರಾಮಸ್ಥರ ತೀವ್ರ ವಿರೋಧದ ನಡುವೆ ಮಂಡ್ಯ ಜಿಲ್ಲಾಡಳಿತ ಅಂದು ರಾಷ್ಟ್ರ ಧ್ವಜವನ್ನು ಹಾರಿಸಲಾಗಿತ್ತು. ಈ ವೇಳೆ 108 ಅಡಿಯ ಅರ್ಜುನ ಸ್ತಂಭಕ್ಕೆ ಚಿಕ್ಕದಾದ ಧ್ವಜವನ್ನು ಜಿಲ್ಲಾಡಳಿತ ಹಾರಿಸಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಪೂರ್ವ ಮುಂಗಾರಿನ ಅಬ್ಬರ – 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಇದಾದ ಬಳಿಕ ಕೆರಗೋಡು ಗ್ರಾಮಸ್ಥರು 108 ಅಡಿಯ ಸ್ತಂಭಕ್ಕೆ ಚಿಕ್ಕದಾದ ಧ್ವಜ ಹಾಕುವ ಮೂಲಕ ಜಿಲ್ಲಾಡಳಿತ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ಇದಾದ ಬೆನ್ನಲ್ಲೇ ಇಂದು (ಮೇ.21) ಜಿಲ್ಲಾಡಳಿತ ಮಳೆ ಹಾಗೂ ಬಿಸಿಲಿಗೆ ಧ್ವಜ ಬಣ್ಣ ಕಡಿಮೆ ಆಗಿದೆ ಮತ್ತು ಒಂದು ಗಂಟಿನಿಂದ ಧ್ವಜ ಹಾರಾಡುತ್ತಿಲ್ಲ ಎಂಬ ಕಾರಣ ಹೇಳಿ ಹೊಸ ಧ್ವಜ ಹಾರಿಸಿದೆ.
ಮುಂಜಾನೆ ಕೆರಗೋಡು ಗ್ರಾಮಕ್ಕೆ ಬಂದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ಕೈಗೊಂಡರು. ಬಳಿಕ 6:45ರ ವೇಳೆಯಲ್ಲಿ ಹಳೆದ ರಾಷ್ಟ್ರ ಧ್ವಜ ಇಳಿಸಿ ಎಡಿಸಿ ನಾಗರಾಜ್ ಅವರು ಹೊಸ ಧ್ವಜಾರೋಹಣ ಮಾಡಿದರು. ಇದನ್ನೂ ಓದಿ: ಮಂಗಳೂರಿನ ಸಮುದ್ರ ತೀರದಲ್ಲಿ ಹೈಅಲರ್ಟ್- ಉಡುಪಿಯಲ್ಲಿ ಸಮುದ್ರ ಪ್ರಕ್ಷುಬ್ದ