ನವದೆಹಲಿ: ನೂತನ ಸಂಸತ್ ಭವನ (New Parliament) ಸೆಂಟ್ರಲ್ ವಿಸ್ತಾ (Central Vista) ದ ಉದ್ಘಾಟನೆಗೆ ಕೌಂಟ್‍ಡೌನ್ ಶುರುವಾಗಿದೆ. ಇಂದು (ಭಾನುವಾರ) ಬೆಳಗ್ಗೆ 7.30ರಿಂದ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇತ್ತ ಸಂಸತ್ ಭವನದ ಉದ್ಘಾಟನೆಯ ಮುನ್ನಾ ದಿನ ರಾಜದಂಡ `ಸೆಂಗೋಲ್’ ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಗೆ ಹಸ್ತಾಂತರ ಮಾಡಲಾಗಿದೆ.
#WATCH PM Modi and Lok Sabha Speaker Om Birla begin pooja for the inauguration of the new Parliament building
The puja ceremony will continue for about an hour. After the puja, the PM will receive the 'Sengol' and install it in the new Parliament. pic.twitter.com/S13eVwZZD3
— ANI (@ANI) May 28, 2023
Advertisement
ಇದೀಗ ಮೋದಿಯವರು ಐತಿಹಾಸಿಕ ರಾಜದಂಡ ಪ್ರತಿಷ್ಠಾಪನೆ ಮಾಡಿದ್ದಾರೆ. ಲೋಕಸಭೆ ಸ್ಪೀಕರ್ ಕುರ್ಚಿ ಪಕ್ಕದಲ್ಲಿ ರಾಜದಂಡ ಅಳವಡಿಸಲಾಗಿದ್ದು, ಸುದೀರ್ಘ ಇತಿಹಾಸ ಹೊಂದಿರುವ ಚಿನ್ನದ ರಾಜದಂಡ ಇದಾಗಿದೆ. ಭಾರತಕ್ಕೆ ಅಧಿಕಾರ ಹಸ್ತಾಂತರ ಪ್ರತೀಕವಾಗಿದ್ದ ಸೆಂಗೊಲ್, 75 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ವಿಶೇಷ ಮಾನ್ಯತೆ ಪಡೆದಿದೆ. ಇದನ್ನೂ ಓದಿ: 2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?
Advertisement
ಸಂಸತ್ ಭವನ ಉದ್ಘಾಟನೆಗೆ ರಾಜ್ಯದ ಪುರೋಹಿತರ ನೇತೃತ್ವ ವಹಿಸಿದ್ದು, ಶೃಂಗೇರಿಯ ಶಾರದಾ ಪೀಠದ ಪುರೋಹಿತರಿಂದ ಬೆಳಗ್ಗೆ 7:30ರಿಂದಲೇ ಹೋಮ, ಪೂಜಾ ಕೈಂಕರ್ಯ ಆರಂಭವಾಗಿದೆ. ಪ್ರಧಾನಿ ಮೋದಿ ಸಮ್ಮುಖದಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆದಿದೆ. 2020ರಲ್ಲಿ ಅಡಿಗಲ್ಲು ಪೂಜೆಯನ್ನು ಪುರೋಹಿತರು ನೆರವೇರಿಸಿದ್ದಾರೆ.
Advertisement
#WATCH | PM Modi and Lok Sabha Speaker Om Birla pay floral tributes to Mahatma Gandhi at the Parliament House, ahead of the inauguration of the new building pic.twitter.com/NCt7kf5xQj
— ANI (@ANI) May 28, 2023
Advertisement
ಸೆಂಗೊಲ್ ಮಹತ್ವವೇನು?
ಬ್ರಿಟಿಷ್ ಇಂಡಿಯಾದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರು ನೆಹರೂ ಅವರ ಜೊತೆ ಯಾವ ರೀತಿ ಹಸ್ತಾಂತರ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ಚೋಳರ ಇತಿಹಾಸವನ್ನು ತಿಳಿದಿದ್ದ ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ಸೆಂಗೊಲ್ ನೀಡುವ ಮೂಲಕ ಹಸ್ತಾಂತರಿಸಬಹುದು ಎಂದು ಸಲಹೆ ನೀಡಿದ್ದರು. ಈ ಸಲಹೆ ನೆಹರೂ ಅವರಿಗೆ ಇಷ್ಟವಾಯಿತು. ಇದನ್ನೂ ಓದಿ: ಬಾಗಲಕೋಟೆಯಲ್ಲಿದೆ ಸೆಂಗೊಲ್ ರಾಜದಂಡ ಹೋಲುವ ಕಲಾಕೃತಿ – ಏನಿದರ ವಿಶೇಷತೆ?
ಭಾರತದ ಸ್ವಾತಂತ್ರ‍್ಯವನ್ನು ಗುರುತಿಸುವ ರಾಜದಂಡವನ್ನು ತಯಾರಿಸುವ ಹೊಣೆಯನ್ನು ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ವಹಿಸಿದ್ದರು. ಇವರು ತಮಿಳುನಾಡಿನ ಪ್ರಮುಖ ಮಠವಾದ ತಿರುವಾಡುತುರೈ ಅಧೀನಂ ಮಠವನ್ನು ಸಂಪರ್ಕಿಸಿದರು. ಆ ಮಠದ ಶ್ರೀಗಳು ಇದರ ಜವಾಬ್ದಾರಿಯನ್ನು ತೆಗೆದುಕೊಂಡರು. ಮದ್ರಾಸಿನ ಆಭರಣ ವ್ಯಾಪಾರಿಯಾಗಿದ್ದ ವುಮ್ಮಿಡಿ ಬಂಗಾರು ಚೆಟ್ಟಿ ಅವರು ಸೆಂಗೋಲನ್ನು ತಯಾರಿಸಿದ್ದು, ಇದು ಐದು ಅಡಿ ಉದ್ದ ಮತ್ತು ನ್ಯಾಯವನ್ನು ಸಂಕೇತಿಸುವ ‘ನಂದಿ’ಯನ್ನು ಹೊಂದಿದೆ.
ವರದಿಗಳ ಪ್ರಕಾರ, ಮಠದ ಹಿರಿಯ ಅರ್ಚಕರು ಮೊದಲು ರಾಜದಂಡವನ್ನು ಮೌಂಟ್‌ಬ್ಯಾಟನ್‌ಗೆ ನೀಡಿದ್ದರು. ನಂತರ ರಾಜದಂಡವನ್ನು ಪಡೆದ ಗಂಗಾಜಲವನ್ನು ಸಿಂಪಡಿಸಿದರು. 1947ರ ಆಗಸ್ಟ್ 14 ರಂದು ಪಂಡಿತ್ ಜವಾಹರಲಾಲ್ ನೆಹರು ಅವರು ಹಲವಾರು ನಾಯಕರು ಮತ್ತು ಉನ್ನತ ಗಣ್ಯರ ಸಮ್ಮುಖದಲ್ಲಿ ಸೆಂಗೊಲ್ ಅನ್ನು ಸ್ವೀಕರಿಸಿದರು. ಇದು ಬ್ರಿಟಿಷರಿಂದ ಸ್ವತಂತ್ರ ಭಾರತದ ಜನರಿಗೆ ಅಧಿಕಾರದ ವರ್ಗಾವಣೆಯನ್ನು ಸಂಕೇತಿಸುತ್ತದೆ. ಭಾರತ ಸ್ವಾತಂತ್ರ‍್ಯ ಗಳಿಸಿದ ಮಧ್ಯರಾತ್ರಿಯ 15 ನಿಮಿಷಗಳ ಮೊದಲು ಈ ಸ್ಮರಣೀಯ ಘಟನೆಗಳು ನಡೆದಿತ್ತು. ಪ್ರಧಾನಿ ನೆಹರೂ ರಾಜದಂಡವನ್ನು ಸ್ವೀಕರಿಸುತ್ತಿದ್ದಂತೆ ವಿಶೇಷ ಗೀತೆಯನ್ನು ಮೊಳಗಿಸಲಾಯಿತು. ಇದನ್ನೂ ಓದಿ: ಮೋದಿ ಕನಸಿನ ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಉಳಿತಾಯವಾಗಲಿದೆ 1,000 ಕೋಟಿ ವಾರ್ಷಿಕ ಬಾಡಿಗೆ
ತಮಿಳು ಸಂಸ್ಕೃತಿಯಲ್ಲಿ ಚೋಳ ಸಾಮ್ರಾಜ್ಯದ ಕಾಲದಿಂದಲೂ ಸೆಂಗೊಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ನೂತನ ಸಂಸತ್ ಭವನದಲ್ಲಿರುವ ಲೋಕಸಭಾ ಸ್ಪೀಕರ್ ಪೀಠದ ಬಳಿ ರಾಜದಂಡ ಇಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.