ಬೆಂಗಳೂರು: ಗುಪ್ತಾಂಗದಲ್ಲಿ 1ಕೆಜಿ 144 ಗ್ರಾಂ ಡ್ರಗ್ಸ್ ಅಡಗಿಸಿಟ್ಟುಕೊಂಡು ಸಾಗಿಸುತ್ತಿದ್ದ ಕೀನ್ಯಾ (Kenya) ಮೂಲದ ಮಹಿಳೆಯನ್ನು (Woman) ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಬಂಧಿಸಿದ್ದಾರೆ. ಮಹಿಳೆ ಡ್ರಗ್ಸ್ ಸಾಗಿಸುವ ಬಗ್ಗೆ ಖಚಿತ ಮಾಹಿತಿ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ ಇಥಿಯೋಪಿಯಾದ ರಾಜಧಾನಿ ಅಡಿಸ್ ಅಬಬಾದಿಂದ ನಗರದ (Bengaluru) ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ಮಹಿಳೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ 1 ಕೆಜಿ 144 ಗ್ರಾಂ ತೂಕದ 12 ಕೋಟಿ ರೂ. ಮೌಲ್ಯದ ಕೊಕೇನ್ ಮಹಿಳೆಯ ಗುಪ್ತಾಂಗದಲ್ಲಿ ಅಡಗಿಸಿಟ್ಟುಕೊಂಡಿರುವುದು ಪತ್ತೆಯಾಗಿದೆ. ಕ್ಯಾಪ್ಸೂಲ್ ಮಾದರಿಯಲ್ಲಿ ಕೊಕೇನ್ ಅಡಗಿಸಿಟ್ಟುಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಎಂಎಲ್‌ಎ ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಉದ್ಯಮಿಗೆ ಚೈತ್ರಾ ಮೋಸ ಮಾಡಿದ್ದು ಹೇಗೆ? ಪೂರ್ಣ ಕಥೆ ಓದಿ
ಈ ಸಂಬಂಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಅದನ್ನು ಎಲ್ಲಿಗೆ ಕೊಂಡೊಯ್ಯಲು ಯತ್ನಿಸಿದ್ದಳು ಎಂಬುದರ ಬಗ್ಗೆ ತನಿಖೆಯ ನಂತರ ತಿಳಿಯಲಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲು
Web Stories