ಅನೈತಿಕ ಸಂಬಂಧದ ಶಂಕೆ-ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ

Public TV
1 Min Read
Husband Super Glue

-ಬೇರೆಯವರಿಗೆ ಬೆತ್ತಲೆ ಫೋಟೋ ಕಳಿಸ್ತಾಳೆ
-ಆಸ್ಪತ್ರೆಗೆ ದಾಖಲಾದಾಗ ಪ್ರಕರಣ ಬೆಳಕಿಗೆ

ಕೀನ್ಯಾ: ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪತಿ ಮಡದಿಯ ಗುಪ್ತಾಂಗಕ್ಕೆ ಅಂಟು ಹಚ್ಚಿದ್ದಾನೆ. ಪತ್ನಿ ಶೌಚಕ್ಕೆ ಹೋಗಲಾಗದೇ ಆಸ್ಪತ್ರೆಗೆ ದಾಖಲಾದಾಗ ಪ್ರಕರಣ ಬೆಳಕಿಗೆ ಬಂದಿದೆ.

36 ವರ್ಷದ ಡೇನಿಸ್ ಮುಮೊ ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ. ಪತ್ನಿ ಕೆಲಸದ ನಿಮಿತ್ ಮನೆಯಿಂದ ಹೊರಗಿದ್ದಾಗ ನಾಲ್ವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಅವರಿಗೆ ಬೆತ್ತಲೆ ಫೋಟೋಗಳನ್ನು ಕಳುಹಿಸುತ್ತಿರುತ್ತಾಳೆ. ಮನೆಯಿಂದ ಹೊರಗೆ ಪರ ಪುರುಷರೊಂದಿಗೆ ಸಂಬಂಧ ಹೊಂದುವ ಮೂಲಕ ನಮ್ಮ 10 ವರ್ಷಕ್ಕೆ ದಾಂಪತ್ಯಕ್ಕೆ ಮೋಸ ಮಾಡಿದ್ದಾಳೆ ಎಂದು ಮುಮೊ ಆರೋಪಿಸಿದ್ದಾನೆ.

145094 shutterstock 1245169660

ಕೆಲಸದ ನಿಮಿತ್ ಪತ್ನಿ ರವಾಂಡ್‍ಗೆ ತೆರಳುತ್ತಿದ್ದಳು. ಮುಮೊ ಹೊರಗಡೆ ತನ್ನ ಪತ್ನಿಗೆ ಬೇರೆಯವರೊಂದಿಗೆ ದೈಹಿಕ ಸಂಪರ್ಕ ಹೊಂದಬಾರದೆಂದು ಗುಪ್ತಾಂಗಕ್ಕೆ ಗಮ್ ಹಾಕಿದ್ದಾನೆ. ಆದರೂ ಮಹಿಳೆ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಕೊನೆಗೆ ಶೌಚಕ್ಕೂ ಹೋಗಲು ಕಷ್ಟವಾದಾಗ ಮಹಿಳೆ ಸ್ಥಳೀಯ ಆಸ್ಪತ್ರೆಗೆ ದಾಖಲಾದಾಗ ಪ್ರಕರಣ ಬೆಳಕಿಗೆ ಬಂದಿದೆ.

keenya

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಮೊನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ತಪ್ಪೊಪ್ಪಿಕೊಂಡಿರುವ ಮುಮೊ, ತಮ್ಮಿಬ್ಬರ ದಾಂಪತ್ಯ ಜೀವನ ಉಳಿಸುವದಕ್ಕಾಗಿ ಗಮ್ ಹಾಕಿದೆ ಎಂದು ಹೇಳಿಕೊಂಡಿದ್ದಾನೆ. ಸದ್ಯ ಮುಮೊ ವಿರುದ್ಧ ದೈಹಿಕ ಮತ್ತು ಮಾನಸಿಕ ಕಿರುಕುಳ, ಹಲ್ಲೆ ಅಡಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *