ನೈರೋಬಿಯ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೀನ್ಯಾ (Kenya) ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಭಾನುವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ನೈರೋಬಿಯ (Nairobi)ಬೀದಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು, ಪಾದಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಯೊಂದಿಗೆ ಭೀಕರವಾಗಿ ಗಾಳಿಯೂ ಬೀಸುತ್ತಿದ್ದು, ಜನರು ಸಂಕಷ್ಟ ಸಿಲುಕಿಕೊಂಡಿದ್ದಾರೆ. ರಸ್ತೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ವಾಹನಗಳು ನೀರಿನಲ್ಲಿ ನಿಂತು ಹೋಗಿವೆ.ಇದನ್ನೂ ಓದಿ: ಮೋದಿಗೆ ಯುದ್ಧಕ್ಕಿಂತ ಬಿಹಾರ ಚುನಾವಣೆ ಮುಖ್ಯ: ಪ್ರಿಯಾಂಕ್ ಖರ್ಗೆ ಕಿಡಿ
ಮೇ 5ರಂದು ಕೀನ್ಯಾ ಹವಾಮಾನ ಇಲಾಖೆ ಭಾರೀ ಮಳೆ ಹಾಗೂ ತಾಪಮಾನದ ಮುನ್ಸೂಚನೆಯನ್ನು ನೀಡಿದ್ದು, ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿತ್ತು. ಮೇ 6 ರಿಂದ 12ರವರೆಗೆ ಸೆಂಟ್ರಲ್ ಹೈಲ್ಯಾಂಡ್ಸ್, ಲೇಕ್ ವಿಕ್ಟೋರಿಯಾ ಬೇಸಿನ್, ರಿಫ್ಟ್ ಕಣಿವೆಯ ಕೆಲವು ಭಾಗಗಳು, ಕರಾವಳಿ, ಪಶ್ಚಿಮ ಮತ್ತು ವಾಯುವ್ಯ ಕೀನ್ಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿ ಮಾಡಿತ್ತು.
ಸದ್ಯ ಕೀನ್ಯಾ ಅನಿರೀಕ್ಷಿತ ಹವಾಮಾನವನ್ನು ಎದುರಿಸುತ್ತಿದ್ದು, ರೈತರು, ವಾಹನ ಚಾಲಕರು ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ನಿವಾಸಿಗಳು ಸ್ಥಳೀಯ ಅಧಿಕಾರಿಗಳು ನೀಡುವ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.ಇದನ್ನೂ ಓದಿ: ಲಂಡನ್‌ನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್- ಜ್ಯೂ.ಎನ್‌ಟಿಆರ್ ಆಕ್ರೋಶ