ಬೆಂಗಳೂರು: ಕುಖ್ಯಾತ ಚೈನ್ ಸ್ನ್ಯಾಚರ್ ಅಚ್ಯುತ್ ಕುಮಾರ್ ಪತ್ನಿಗಾಗಿ ಕೆಂಗೇರಿ ಪೊಲೀಸರು ಮೂರು ತಿಂಗಳಿನಿಂದ ಹುಡುಕಾಟ ನಡೆಸುತ್ತಿದ್ದಾರೆ.
ಸರಗಳ್ಳ ಅಚ್ಯುತ್ ಕುಮಾರ್ ಪತ್ನಿ ಮಹಾದೇವಿಗಾಗಿ ಕೆಂಗೇರಿ ಪೊಲೀಸರು ಬಲೆ ಬೀಸಿದ್ದು, ಮೂರು ತಿಂಗಳಿನಿಂದ ನಿರಂತರವಾಗಿ ಮಹಾದೇವಿಗಾಗಿ ಹುಡುಕಾಟ ನಡಸುತ್ತಿದ್ದಾರೆ. ಆರೋಪಿ ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ ಮಾಡುವಂತೆ ಪತಿಯನ್ನು ಒತ್ತಾಯಿಸಿದ್ದಳು. ಆದರೆ ಆರೋಪಿ ಪತಿ ಅಚ್ಯುತ್ ಕುಮಾರ್ ಮೇಲೆ ಗುಂಡೇಟು ಬೀಳುತ್ತಿದ್ದಂತೆ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದಾಳೆ. ಇದನ್ನೂ ಓದಿ: ಸರಗಳ್ಳನ ಮೇಲೆ ಶೂಟೌಟ್- ಚಿನ್ನದ ಸರದ ಗಣಿಯೇ ಪತ್ತೆ
ಮಹಾದೇವಿ ಐಷಾರಾಮಿ ಜೀವನಕ್ಕಾಗಿ ಮೊದಲ ಪತಿಗೆ ಕೈಕೊಟ್ಟು ಅಚ್ಯುತ್ ಕುಮಾರ್ ನನ್ನು ಮದುವೆಯಾಗಿದ್ದಳು. ಅಷ್ಟೇ ಅಲ್ಲದೇ ಮಹಾದೇವಿ ದಿನಕ್ಕೆ ಕನಿಷ್ಟ ಮೂರ್ನಾಲ್ಕು ಸರಗಳ್ಳತನ ಮಾಡಲೇಬೇಕೆಂದು ಗಂಡನಿಗೆ ತಾಕೀತು ಮಾಡಿದ್ದಳು. ಹೆಂಡತಿ ಮಾತಿನಂತೆಯೇ ಅಚ್ಯುತ್ ಕುಮಾರ್ ಕಳ್ಳತನ ಮಾಡುತ್ತಿದ್ದನ್ನು ಎನ್ನುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: 150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ
ಒಂದೇ ವರ್ಷದಲ್ಲಿ ಅಚ್ಯುತ್ ಕುಮಾರ್ ಸುಮಾರು ಒಂದೂವರೆ ಕೋಟಿ ರೂ. ಬೆಲೆ ಬಾಳುವಷ್ಟು ಸರಗಳ್ಳತನ ಮಾಡಿದ್ದನು. ಆದರೆ ಮೂರು ತಿಂಗಳ ಹಿಂದೆ ನೈಸ್ ರೋಡ್ ಬಳಿ ಆರೋಪಿ ಅಚ್ಯುತ್ ಕಾಲಿಗೆ ಗುಂಡು ಹಾರಿಸಿ ಆತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಅಂದಿನಿಂದಲೂ ಪತ್ನಿ ಮಹಾದೇವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಅಚ್ಯುತ್ ಕುಮಾರ್ ವಿರುದ್ಧ ಸುಮಾರು ಬೆಂಗಳೂರಿನಲ್ಲಿ 70 ಸರಗಳ್ಳತನ ಕೇಸ್ ಗಳು ದಾಖಲಾಗಿದೆ. ಆದರೆ ರಾಜ್ಯದ ಇತರ ಜಿಲ್ಲೆಗಳೂ ಸೇರಿ ಒಟ್ಟು 150 ಕ್ಕೂ ಹೆಚ್ಚು ಕೇಸ್ ಆರೋಪಿ ಅಚ್ಯುತ್ ಮೇಲೆ ದಾಖಲಾಗಿದೆ. ಅಷ್ಟೇ ಅಲ್ಲದೇ ಬಂಧನಕ್ಕೂ ಮುನ್ನ ತುಮಕೂರಿನಲ್ಲಿ ಮೂರು ಕಡೆ ಸರಗಳ್ಳತನ ಮಾಡಿದ್ದನು. ಜೂನ್ 17 ರಂದು ಸರಗಳ್ಳ ಅಚ್ಯುತ್ ಕುಮಾರ್ ನನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv