ನವದೆಹಲಿ: ಅನುಕರಣೀಯ ಸೇವೆ ಗುರುತಿಸಿ, ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ 463 ಸಿಬ್ಬಂದಿಗೆ ʻಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕʼ (Kendriya Grihmantri Dakshata Padak) ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ವಿವಿಧ ಭದ್ರತಾ ಪಡೆಗಳಲ್ಲಿರುವ ಪೊಲೀಸ್ ಅಧಿಕಾರಿಗಳ ಅತ್ಯುತ್ತಮ ಸೇವೆ, ಕೊಡುಗೆಗಳನ್ನು ಗುರುತಿಸಲು, ವೃತ್ತಿಪರ ಗುಣಮಟ್ಟವನ್ನು ಉತ್ತೇಜಿಸಲು ಕೊಡಮಾಡುವ ಪ್ರತಿಷ್ಠಿತ ಪದಕ ಇದಾಗಿದೆ.
ಕರ್ನಾಟಕದ 7 ಮಂದಿಗೆ ಪದ:
ದೇಶದ ವಿವಿಧ ಭದ್ರತಾ ಪಡೆಗಳಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ 6 ಪೊಲೀಸ್ ಅಧಿಕಾರಿಗಳು ಹಾಗೂ ಓರ್ವ ಎಫ್‌ಎಸ್‌ಎಲ್ ಅಧಿಕಾರಿಯೂ ಸೇರಿದ್ದಾರೆ. ಇದನ್ನೂ ಓದಿ: ಮೊದಲು ನಗರ ನಕ್ಸಲರ ವಿರುದ್ಧ ಹೋರಾಡಬೇಕು – ವಿಪಕ್ಷಗಳ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ
ಕರ್ನಾಟಕದ ಅಧಿಕಾರಿಗಳಾದ ಡಿವೈಎಸ್ಪಿ, ಐಎಸ್ಡಿ ಬಸವರಾಜ್, ಬೆಂಗಳೂರು ನಗರ ಎಸಿಪಿ ರಮೇಶ್ ವಿ.ಎಲ್, ರಾಯಚೂರು ಜಿಲ್ಲೆ ಇನ್ಸ್ಪೆಕ್ಟರ್ ಉಮೇಶ್ ಕಾಂಬ್ಲೇ, ಸಿಐಡಿ ಇನ್ಸ್ಪೆಕ್ಟರ್ ನರೇಂದ್ರ ಬಾಬು, ಹಾಸಜನ ಜಿಲ್ಲೆ ಇನ್ಸ್ಪೆಕ್ಟರ್ ವಸಂತ ಕೆ.ಎಂ, ಉತ್ತರಕನ್ನಡ ಜಿಲ್ಲೆಯ ಇನ್ಸ್ಪೆಕ್ಟರ್ ರಮೇಶ್ ಹೆಚ್ ಹನಾಪುರ್, ಬೆಳಗಾವಿ ಜಿಲ್ಲೆಯ ಡಾ.ಪ್ರವೀಣ್ ಸಂಗ್ನಲ್ ಮಠ್ ಅವರು ಪದಕಕ್ಕೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಆರ್.ಆರ್ ನಗರ ದರ್ಶನ್ ನಿವಾಸದ ಬಳಿ ಪೊಲೀಸರ ಬಿಗಿ ಭದ್ರತೆ – ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ
ಪದಕದ ವಿಶೇಷತೆ ಏನು?
2024ರ ಫೆಬ್ರವರಿ 1ರಂದು ಕೇಂದ್ರೀಯ ಗೃಹದಕ್ಷತಾ ಪದಕವನ್ನು ಸ್ಥಾಪಿಸಲಾಗಿದೆ. ಕರ್ತವ್ಯದಲ್ಲಿ ಉನ್ನತ ಕೊಡುಗೆ ನೀಡಿದ ಪೊಲೀಸ್ ಪಡೆಗಳು, ಭದ್ರತಾ ಸಂಸ್ಥೆ, ಗುಪ್ತಚರ ವಿಭಾಗ, ಶಾಖೆ, ರಾಜ್ಯದ ವಿಶೇಷ ಶಾಖೆ, ಯುಟಿ ಸದಸ್ಯರಿಗೆ ಈ ಪದಕ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ ʻಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕʼವು ಎಲ್ಲಾ ಪೊಲೀಸ್ ಸಿಬ್ಬಂದಿಯ ನೈತಿಕತೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಬಣ್ಣಿಸಲಾಗಿದೆ.