ಭರವಸೆಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ರೂಪಾ ರಾವ್ (Rupa Rao) `ಕೆಂಡ’ (Kenda) ಚಿತ್ರದ ಮೂಲಕ ನಿರ್ಮಾಪಕಿಯಾಗಿ ರೂಪಾಂತರಗೊಂಡಿದ್ದಾರೆ. ಇದರ ಆಸುಪಾಸಲ್ಲಿ ಈಗಾಗಲೇ ಒಂದಷ್ಟು ಕುತೂಹಲಕರ ವಿಚಾರಗಳೂ ಜಾಹೀರಾಗಿವೆ. ಇದೀಗ ಕೆಂಡ ಚಿತ್ರತಂಡದ ಕಡೆಯಿಂದ ಮತ್ತೊಂದು ಸಮ್ಮೋಹಕ ವಿಚಾರ ಹೊರಬಂದಿದೆ. ಆ ಸುದ್ದಿಯೇ ನಿರ್ದೇಶಕರಾಗಿ ಸಹದೇವ್ ಕೆಲವಡಿಯವರ (Sahadev Kelavadi) ಪ್ರಥಮ ಹೆಜ್ಜೆ ಅದೆಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಸಾಕ್ಷೀಕರಿಸುವಂತಿದೆ. ಅಂದಹಾಗೆ, ಕೆಂಡ ಚಿತ್ರದ ಅಸಲೀ ಕಸುವನ್ನು ಮೆಚ್ಚಿಕೊಂಡಿರುವ ಅಂತಾರಾಷ್ಟ್ರೀಯ ಸಿನಿಮಾ ನಿರ್ಮಾಣ ಸಂಸ್ಥೆಯಾದ ಕಿಲ್ಜಾಯ್ ಫಿಲಂಸ್ ಸಹನಿರ್ಮಾಣದ ಸಾಥ್ ಕೊಟ್ಟಿದೆ. ಇದರೊಂದಿಗೆ ಕೆಂಡ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಪ್ರೇಮಿಗಳನ್ನು ಪರಿಣಾಮಕಾರಿಯಾಗಿ ತಲುಪಿಕೊಳ್ಳಲಿದೆ.
Advertisement
ಇದು ನಿಜಕ್ಕೂ ಕನ್ನಡದ ಪ್ರೇಕ್ಷಕರೆಲ್ಲ ಥ್ರಿಲ್ ಆಗುವಂಥಾ ಸುದ್ದಿ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಪ್ರಭೆ ರಾಜ್ಯದ ಗಡಿ ದಾಟಿ ವ್ಯಾಪಿಸಿಕೊಳ್ಳುತ್ತಿದೆ. ಕೆಂಡ ಚಿತ್ರದ ಮೂಲಕ ದಾಖಲಾಗಿರುವ ಈ ದಾಖಲೆ, ಆ ಪ್ರಭೆಗೆ ಮತ್ತಷ್ಟು ಮೆರುಗು ತಂದಿರೋದರಲ್ಲಿ ಅತಿಶಯವೇನೂ ಇಲ್ಲ. ಕಿಲ್ಜಾಯ್ ಫಿಲಂಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ, ಘನತೆ ಹೊಂದಿರುವ ನಿರ್ಮಾಣ ಸಂಸ್ಥೆ. ನ್ಯೂಯಾರ್ಕ್ ಹಾಗೂ ಬರ್ಲಿನ್ ಮೂಲದ ಈ ಸಂಸ್ಥೆ ಆಸ್ಕರ್ ನಂಥಾ ಪ್ರಶಸ್ತಿ ಪಡೆದುಕೊಂಡ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಇದರ ಕಡೆಯಿಂದ ಹಲವಾರು ಪ್ರತಿಭಾನ್ವಿತ ನಿರ್ದೇಶಕರು ಪ್ರವರ್ಧಮಾನಕ್ಕೆ ಬಂದಿದ್ದಾರೆ.
Advertisement
Advertisement
ಇಂಥಾ ಸಂಸ್ಥೆ ಬಹಳಷ್ಟು ಇಷ್ಟಪಟ್ಟು ಕೆಂಡ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಅದಲ್ಲದೇ ಬಹು ಹೆಮ್ಮೆಯಿಂದ ಆ ವಿಚಾರವನ್ನು ಅಧಿಕೃತವಾಗಿ ಘೋಶಿಸಿದೆ. ಈ ಸಂಸ್ಥೆ ವ್ಯಾವಹಾರಿಕವಾಗಿ ಮುಂದುವರೆಯ ಬೇಕೆಂದರೆ ಸಾಕಷ್ಟು ಕಟ್ಟುನಿಟ್ಟಾದ ಮಾನದಂಡಗಳನ್ನು ಕಾಯ್ದುಕೊಂಡಿದೆ. ಅದೆಲ್ಲದರಲ್ಲಿ ನಿರ್ದೇಶಕ ಸಹದೇವ್ ಕೆಲವಡಿ ಪಾಸ್ ಆಗಿದ್ದಾರೆ.
Advertisement
ಒಟ್ಟಾರೆ ಸಿನಿಮಾವನ್ನು ಸಹದೇವ್ ಕಟ್ಟಿಕೊಟ್ಟಿರುವ ರೀತಿ ನೋಡಿ ಈ ಸಂಸ್ಥೆಯ ಮಂದಿ ಖುಷಿಗೊಂಡಿದ್ದಾರೆ. ಇದು ಕೆಂಡ ಚಿತ್ರತಂಡದಲ್ಲಿ ಹೊಸಾ ಹುರುಪು ಮೂಡಿಸಿದೆ. ಈ ಮೂಲ ಕಿಲ್ಜಾಯ್ ಸಂಸ್ಥೆಯ ಮೂಲಕ ಕೆಂಡ ವಿಶ್ವಾದ್ಯಂತ ನಿಗಿನಿಸೋದು ಗ್ಯಾರೆಂಟಿ. ಇದರ ಜೊತೆ ಜೊತೆಗೇ ಸಹದೇವ್ ಕೆಲವಡಿ ನಿರ್ದೇಶಕರಾಗಿ ವಿಶ್ವಮಟ್ಟದಲ್ಲಿ ಗಮನ ಸೆಳೆಯುವ ಲಕ್ಷಣಗಳೂ ದಟ್ಟವಾಗಿವೆ. ಈ ಪಲ್ಲಟದಿಂದಾಗಿ ರೂಪಾ ರಾವ್ ಮತ್ತು ಸಹದೇವ್ ಕೆಲವಡಿ ಸಾರಥ್ಯದ ಅಮೇಯುಕ್ತಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಗೂ ಮತ್ತಷ್ಟು ಕಸುವು ತುಂಬಿದೆ