Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Bengaluru Airport | 2024ರಲ್ಲಿ ದಾಖಲೆಯ 4 ಕೋಟಿ ಪ್ರಯಾಣಿಕರ ಸಂಖ್ಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | Bengaluru Airport | 2024ರಲ್ಲಿ ದಾಖಲೆಯ 4 ಕೋಟಿ ಪ್ರಯಾಣಿಕರ ಸಂಖ್ಯೆ

Bengaluru City

Bengaluru Airport | 2024ರಲ್ಲಿ ದಾಖಲೆಯ 4 ಕೋಟಿ ಪ್ರಯಾಣಿಕರ ಸಂಖ್ಯೆ

Public TV
Last updated: January 10, 2025 4:10 pm
Public TV
Share
6 Min Read
kempegowda international airport
SHARE

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) 2024ರಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಣೆಯಲ್ಲಿ (Freight Transport) ದಾಖಲೆಯ ಬೆಳವಣಿಗೆ ಕಂಡಿದೆ. 2024ರಲ್ಲಿ ಬರೋಬ್ಬರಿ 4 ಕೋಟಿ ಪ್ರಯಾಣಿಕರು ಪ್ರಯಾಣ ಬೆಳೆಸುವ ಮೂಲಕ ಜಾಗತಿಕವಾಗಿ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದು ಎಂಬ ಸ್ಥಾನಮಾನವನ್ನ ಇನ್ನಷ್ಟು ಬಲಪಡಿಸಿಕೊಂಡಿದೆ.

ಈ ಬೆಳವಣಿಗೆಯ ಮೂಲಕ ಬೆಂಗಳೂರು ವಿಮಾನ ನಿಲ್ದಾಣವು ದೈನಂದಿನ ವಿಮಾನಯಾನ ಸಂಚಾರ ನಿರ್ವಹಣೆಯಲ್ಲಿ (ATM) ಗಮನಾರ್ಹ ಏರಿಕೆ ಕಂಡಿದೆ. ಜೊತೆಗೆ, ಹೊಸ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಿಗೂ ವಿಮಾನ ಹಾರಾಟ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್‌ ಆಗಿದೆ: ಹೆಚ್‌ಡಿಕೆ ಆರೋಪ

Bengaluru Airports Terminal 2 Makes It To UNESCO Worlds Most Beautiful Airports List 2023

ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ವಾರ್ಷಿಕ ಸರಕು ಸಾಗಣೆಯು 4,96,227 ಮೆಟ್ರಿಕ್ ಟನ್ ತಲುಪುವ ಮೂಲಕ ಗರಿಷ್ಠ ದಾಖಲೆ ನಿರ್ಮಾಣವಾಗಿದೆ. ಇದು ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಭಾಗಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಎತ್ತಿ ಹಿಡಿದಿದೆ. ಈ ಬೃಹತ್‌ ಬೆಳವಣಿಗೆಯು ಬೆಂಗಳೂರಿನಿಂದ ವಾಯು ಮಾರ್ಗದ ಮೂಲಕ ಪ್ರಯಾಣಿಸುವವರಿಗೆ (Air Passengers) ಹಾಗೂ ವ್ಯಾಪಾರ ವಹಿವಾಟು ನಡೆಸುವವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೇಂದ್ರಬಿಂದು ಎಂಬ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ. ಇದನ್ನೂ ಓದಿ: ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ಕದನ – ಸಾವಿನ ಸಂಖ್ಯೆ 10ಕ್ಕೆ ಏರಿಕೆ, 1.80 ಲಕ್ಷ ಜನರ ಸ್ಥಳಾಂತರ

ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ:
2023ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆಯು 3.72 ಕೋಟಿ ಆಗಿತ್ತು. ಆದ್ರೆ 2024ರಲ್ಲಿ 4.73 ಕೋಟಿ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸಿದ್ದಾರೆ. 2024ರ ಅಕ್ಟೋಬರ್ 20 ರಂದು ಒಂದೇ ದಿನದಲ್ಲಿ 1,26,532 ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಮೂಲಕ ದಾಖಲೆ ನಿರ್ಮಾಣವಾಗಿದೆ. ಇದಷ್ಟೇ ಅಲ್ಲದೆ, ಅಕ್ಟೋಬರ್ 17, 2024 ರಂದು ವಿಮಾನಯಾನ ಸಂಚಾರ ನಿರ್ವಹಣೆಯಲ್ಲಿ 782 ಎಟಿಎಂ ಮೂಲಕ ಗರಿಷ್ಠ ದಾಖಲೆ ನಿರ್ಮಾಣವಾಗಿದೆ. ಈವರೆಗೆ ಬೆಂಗಳೂರು ವಿಮಾನ ನಿಲ್ದಾಣದ ವಿಮಾನಯಾನ ಸಂಚಾರ ನಿರ್ವಹಣೆಯಲ್ಲಿ ವಾರ್ಷಿಕ ದೈನಂದಿನ ಸರಾಸರಿ 723 ಎಟಿಎಂ ದಾಖಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

BENGALURU AIRPORT 1

2024ರ ಪ್ರಮುಖಾಂಶಗಳು
• ಬೆಂಗಳೂರು ವಿಮಾನ ನಿಲ್ದಾಣವು 2024 ರಲ್ಲಿ ಒಟ್ಟು 4.73 ಕೋಟಿ ಪ್ರಯಾಣಿಕರ ಸಂಖ್ಯೆಯನ್ನು ದಾಖಲಿಸಿದೆ.
• 2024ರ ಅಕ್ಟೋಬರ್ 20ರಂದು ಒಂದೇ ದಿನದಲ್ಲಿ 1,26,532ರ ದಾಖಲೆಯ ಪ್ರಯಾಣಿಕರು ಸಂಚರಿಸಿದ್ದಾರೆ. ಪ್ರತಿದಿನ ಸರಾಸರಿ 723 ವಿಮಾನಗಳ ಸಂಚಾರ ನಿರ್ವಹಣೆಯಾಗಿದೆ.
• ಬೆಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ, ವಾರ್ಷಿಕವಾಗಿ 21.1% ರಷ್ಟು
• 11 ಹೊಸ ದೇಶೀಯ ಸ್ಥಳಗಳು ಮತ್ತು 4 ಅಂತಾರಾಷ್ಟ್ರೀಯ ಸ್ಥಳಗಳಿಗೆ ಬೆಂಗಳೂರಿನಿಂದ ಸಂಪರ್ಕ ಕಲ್ಪಿಸಲಾಗಿದೆ.
• ಈ ವರ್ಷದಲ್ಲಿ 4,96,227 ಮೆಟ್ರಿಕ್ ಟನ್‌ಗಳ (MT) ದಾಖಲೆ ಸರಕು ಸಾಗಣೆ, ಕಾರ್ಗೋ ಟನ್‌ನಲ್ಲಿ ವಾರ್ಷಿಕ 17% ಗಮನಾರ್ಹ ಬೆಳವಣಿಗೆ ಕಂಡಿದೆ.
• 1,884 ಮೆಟ್ರಿಕ್ ಟನ್ – ಒಂದೇ ದಿನದಲ್ಲಿ ದಾಖಲೆಯಾದ ಅತಿ ಹೆಚ್ಚು ಸರಕು ಸಾಗಣೆ.

Bengaluru Kempegowda International Airport 5

ಸಂಪರ್ಕ ಮತ್ತು ಹೊಸ ಮಾರ್ಗಗಳ ಪರಿಚಯ:
ಕಳೆದ ವರ್ಷ ಡಿಸೆಂಬರ್ 31 ರಂದು ಪ್ರಕಟವಾದ ವರದಿ ಪ್ರಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 75 ದೇಶೀಯ ಮತ್ತು 30 ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸೇವೆ ಒದಗಿಸಲಾಗಿದೆ. ಈ ಮೂಲಕ ಪ್ರಯಾಣಿಕರ ಮತ್ತು ಸರಕುಗಳ ಸಾಗಣೆಗೆ ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಹೆಬ್ಬಾಗಿಲಾಗಿ ವಿಮಾನ ನಿಲ್ದಾಣವು ತನ್ನ ಸ್ಥಾನವನ್ನು ಮತ್ತಷ್ಟು ಬಲಗೊಳಿಸಿಕೊಂಡಿದೆ. ಜಾಗತಿಕ ವಿಮಾನಯಾನ ಜಾಲದಲ್ಲಿ ವರ್ಜಿನ್ ಅಟ್ಲಾಂಟಿಕ್, ಸಲಾಮ್ ಏರ್, ಮಾಂಟಾ ಏರ್ ಮತ್ತು ಫ್ಲೈ-91 ನಂತಹ ಹೊಸ ವಿಮಾನಯಾನ ಸಂಸ್ಥೆಗಳೊಂದಿಗೆ ಬೆಂಗಳೂರು ವಿಮಾನ ನಿಲ್ದಾಣ ಸಹಯೋಗ ಸಾಧಿಸಿದೆ. 2024 ರಲ್ಲಿ ದೈನಂದಿನ ಅಂತಾರಾಷ್ಟ್ರೀಯ ವಿಮಾನ ಸಂಚಾರಗಳ ಸಂಖ್ಯೆ ಸರಾಸರಿ 75 ಆಗಿತ್ತು, ಆದರೆ ಇದು 2023 ರಲ್ಲಿ ದಿನಕ್ಕೆ 62 ರಷ್ಟಿತ್ತು. ಈ ಮೂಲಕ ಅಂತಾರಾಷ್ಟ್ರೀಯ ವಿಮಾನಗಳ ಆವರ್ತನವು 21% ರಷ್ಟು ಹೆಚ್ಚಾಗಿರುವುದನ್ನು ಈ ದತ್ತಾಂಶ ಸೂಚಿಸುತ್ತದೆ.

2024ರ ಅಂತ್ಯದ ವೇಳೆಗೆ, ಇಂಡಿಗೋ ಬೆಂಗಳೂರಿನಿಂದ 46 ಸಾಪ್ತಾಹಿಕ ನಿರ್ಗಮನ ವಿಮಾನಗಳನ್ನು ಸೇರ್ಪಡೆಗೊಳಿಸಿದೆ. ಇದು ಭಾರತದಿಂದ ನಿರ್ಗಮಿಸುವ ಒಟ್ಟು 240 ಹೆಚ್ಚುವರಿ ಸಾಪ್ತಾಹಿಕ ನಿರ್ಗಮನ ವಿಮಾನಗಳ 3ನೇ ಒಂದು ಭಾಗವಾಗಿದೆ. ಈ ಮೂಲಕ, 2024ರಲ್ಲಿ ಇಂಡಿಗೋ ಭಾರತದಲ್ಲಿ ಅತಿ ಹೆಚ್ಚು ವಿಮಾನಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೇರ್ಪಡೆಗೊಳಿಸಿದೆ. ಇದನ್ನೂ ಓದಿ: ಡಿಕೆಶಿ ಎರಡೂವರೆ ವರ್ಷ ಯಾಕೆ, ಮುಂದೆ ಐದು ವರ್ಷ ಸಿಎಂ ಆಗಲಿ: ಕೆ.ಎನ್.ರಾಜಣ್ಣ

ವಿಮಾನ ನಿಲ್ದಾಣದ ಪ್ರಮುಖ ದೇಶೀಯ ಮಾರ್ಗಗಳಲ್ಲಿ ದೆಹಲಿ (DEL), ಮುಂಬೈ (BOM), ಕೋಲ್ಕತ್ತಾ (CCU), ಹೈದರಾಬಾದ್ (HYD), ಮತ್ತು ಪುಣೆ (PNQ) ಸೇರಿವೆ. ಅಲ್ಲದೇ ಹೊಸ ದೇಶಿಯ ಸ್ಥಳಗಳಿಗೆ ವಿಮಾನ ಸಂಪರ್ಕ ಆರಂಭಿಸಲಾಗಿದ್ದು, ಅಯೋಧ್ಯೆ (AYJ), ಐಜ್ವಾಲ್ (AJL), ದಿಯೋಘರ್ (DGH), ನಾಂದೇಡ್ (NDC), ಜಬಲ್ಪುರ್ (JLR), ದಿಬ್ರುಗಢ್ (DIB), ಮತ್ತು ಸಿಂಧುದುರ್ಗದಂತಹ (SDW) ಸ್ಥಳಗಳನ್ನು ಇವು ಒಳಗೊಂಡಿವೆ.

ದುಬೈ (DXB), ಸಿಂಗಾಪುರ (SIN), ಅಬುಧಾಬಿ (AUH), ದೋಹಾ (DOH), ಮತ್ತು ಲಂಡನ್ ಹೀಥ್ರೂ (LHR) ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸಂಪರ್ಕದ ಜೊತೆಗೆ, ಕೆಲವು ಹೊಸ ಅಂತಾರಾಷ್ಟ್ರೀಯ ಸ್ಥಳಗಳಿಗೆ ವಿಮಾನ ಸಂಪರ್ಕ ಕಲ್ಪಿಸಲಾಗಿದೆ. ಡೆನ್‌ಪಾಸರ್ (DPS), ಮಾರಿಷಸ್ (MRU), ಶ್ರೀಲಂಕಾ, ಮಾಲ್ಡೀವ್ಸ್‌ನ ಧಾಲುಗಳಿಗೆ (DDD) ಅಂತಾರಾಷ್ಟ್ರೀಯವಾಗಿ ಬೆಂಗಳೂರಿನಿಂದ ಹೊಸದಾಗಿ ವಿಮಾನ ಸಂಪರ್ಕ ಆರಂಭಿಸಲಾಗಿದೆ. ಇದು ಬೆಂಗಳೂರು ವಿಮಾನ ನಿಲ್ದಾಣದ ಸಂಪರ್ಕ ಹೆಚ್ಚಿಸಲು ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆ ಪೂರೈಸಲು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನವಾಗಿದೆ.

ಕಾರ್ಗೋ ವ್ಯಾಪಾರದಲ್ಲಿ ಮೈಲಿಗಲ್ಲು:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸರಕು ಸಾಗಣೆಯಲ್ಲೂ ಗಮನಾರ್ಹ ಬೆಳವಣಿಗೆ ಕಂಡಿದೆ. 2024 ರಲ್ಲಿ 4,96,227 ಮೆಟ್ರಿಕ್ ಟನ್ ಸರಕನ್ನು ಸಾಗಿಸಲು ಅನುವು ಮಾಡಿಕೊಡಲಾಗಿದೆ. 2023ಕ್ಕೆ ಹೋಲಿಸಿದರೆ, ಇದು 17% ರಷ್ಟು ಹೆಚ್ಚಳವಾಗಿದೆ. ಇನ್ನೂ ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲೂ 23% ರಷ್ಟು ಬೆಳವಣಿಗೆ ಕಂಡಿದ್ದು, ಒಟ್ಟು 3,13,981 ಮೆಟ್ರಿಕ್ ಟನ್ ಕೊಳೆಯುವ ಪದಾರ್ಥಗಳು, ಬಿಡಿ ಭಾಗಗಳು, ಎಂಜಿನಿಯರಿಂಗ್ ಸರಕು ಮತ್ತು ಇ-ಕಾಮರ್ಸ್ ಸಾಗಣೆಗೆ ಬೇಡಿಕೆ ಹೆಚ್ಚಾಗಿದೆ. ದೇಶೀಯವಾಗಿ ಸರಕುಗಳ ಸಾಗಣೆ ಪ್ರಮಾಣವು ಸಹ 9% ರಷ್ಟು ಹೆಚ್ಚಾಗಿದ್ದು, 1,82,246 ಮೆಟ್ರಿಕ್ ಟನ್ ತಲುಪಿದೆ. ಕೊಳೆಯುವ ಸರಕುಗಳು ಮತ್ತು ಇ-ಕಾಮರ್ಸ್ ಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ.

ಜುಲೈ 11, 2024 ರಂದು 1,884 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡುವ ಮೂಲಕ ಒಂದೇ ದಿನ ಅತಿ ಹೆಚ್ಚು ಸರಕು ಸಾಗಣೆ ಪ್ರಮಾಣ ದಾಖಲಾಗಿದೆ. ಕಾರ್ಗೋ ಬೆಳವಣಿಗೆಯನ್ನು ಪ್ರೇರೇಪಿಸುವ ಪ್ರಮುಖ ಸರಕುಗಳಾದ ಕೊಳೆತುಹೋಗುವ ಕೃಷಿ ಸರಕುಗಳು, ಸಿದ್ಧ ಉಡುಪುಗಳು, ಔಷಧ, ಯಂತ್ರೋಪಕರಣಗಳ ಭಾಗಗಳು, ಹಾಗೂ ಇತರೆ ಬಿಡಿಭಾಗಗಳ ಸಾಗಣೆ ಸೇವೆಯನ್ನು ಬೆಂಗಳೂರು ವಿಮಾನ ನಿಲ್ದಾಣವು ಒದಗಿಸಿದೆ.

2024 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 10.8 ದಶಲಕ್ಷ ಗುಲಾಬಿಗಳನ್ನು ಸಾಗಣೆ ಮಾಡಿದ್ದು, 2023ಕ್ಕೆ ಹೋಲಿಸಿದರೆ 14% ರಷ್ಟು ಬೆಳವಣಿಗೆ ಕಂಡಿದೆ. ಅದೇ ರೀತಿ, 822 ಮೆಟ್ರಿಕ್ ಟನ್ ಮಾವಿನ ಹಣ್ಣು ಬೆಂಗಳೂರು ವಿಮಾನ ನಿಲ್ದಾಣದಿಂದ ರಫ್ತಾಗಿದ್ದು, 2023ಕ್ಕೆ ಹೋಲಿಸಿದರೆ 20% ಹೆಚ್ಚಳ ಕಂಡಿದೆ. ಇನ್ನು, ಕೊತ್ತಂಬರಿ ಸಾಗಣೆಯಲ್ಲೂ 53% ಬೆಳವಣಿಗೆ ದಾಖಲಾಗಿದೆ.

ಪ್ರಸ್ತುತ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗ ಎರಡರಲ್ಲೂ ಕಾರ್ಯನಿರ್ವಹಿಸುವ 12 ಸರಕು ವಿಮಾನಯಾನ ಸಂಸ್ಥೆಗಳ ಸೇವೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲಭ್ಯವಿದೆ. ಪ್ರಮುಖ ರಫ್ತು ಮಾರ್ಗಗಳಲ್ಲಿ ಸಿಂಗಾಪುರ (SIN), ಲಂಡನ್ (LHR), ಫ್ರಾಂಕ್‌ಫರ್ಟ್ (FRA), ಚಿಕಾಗೊ (ORD), ಮತ್ತು ಮಸ್ಕಟ್ (MCT) ಒಳಗೊಂಡಿವೆ. ಅಗ್ರ ಆಮದು ಮಾರ್ಗಗಳಲ್ಲಿ ಶೆನ್‌ಜೆನ್ (SZX), ಸಿಂಗಾಪುರ (SIN), ಶಾಂಘೈ (PVG) ಹಾಂಗ್ ಕಾಂಗ್ (HKG), ಮತ್ತು ಫ್ರಾಂಕ್‌ಫರ್ಟ್ (FRA) ಸೇರಿವೆ.

ಒಟ್ಟಾರೆ, 2024 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ಪ್ರಯಾಣಿಕರು ಹಾಗೂ ಸರಕು ಸಾಗಣೆಯಲ್ಲಿ ಉತ್ತಮ ಬೆಳವಣಿಗೆ ಕಂಡಿದೆ. ವಿಮಾನ ನಿಲ್ದಾಣವು ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ಆದ್ಯತೆಯ ಹೆಬ್ಬಾಗಿಲಾಗಿ ಬದ್ಧತೆಯನ್ನು ಸಾಬೀತುಪಡಿಸಿದೆ. ವಿಸ್ತರಣೆ, ಕಾರ್ಯಾಚರಣೆಯ ಉತ್ಕೃಷ್ಟತೆ ಮತ್ತು ಪ್ರಯಾಣಿಕ-ಕೇಂದ್ರಿತ ಮನೋಭಾವದೊಂದಿಗೆ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಬೆಳವಣಿಗೆ ಕಾಣುವ ಭರವಸೆ ನೀಡಿದೆ.

TAGGED:Air PassengersbengaluruCargokempegowda international airportಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಬೆಂಗಳೂರುವಿಮಾನ ಪ್ರಯಾಣಿಕರುಸರಕು ಸಾಗಣೆ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Rajasthan Royals
Cricket

ಬಿಷ್ಣೋಯ್‌ ಬೆಂಕಿ ಬೌಲಿಂಗ್‌, ಧ್ರುವ್‌-ಜೈಸ್ವಾಲ್‌ ಬ್ಯಾಟಿಂಗ್‌ ಅಬ್ಬರ – ಗುಜರಾತ್‌ ವಿರುದ್ಧ ರಾಜಸ್ಥಾನ್‌ಗೆ 6 ರನ್‌ಗಳ ರೋಚಕ ಜಯ

Public TV
By Public TV
14 minutes ago
kalaburagi murder accused
Crime

ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನ – ಕಲಬುರಗಿಯಲ್ಲಿ ಕೊಲೆ ಆರೋಪಿ ಕಾಲಿಗೆ ಗುಂಡೇಟು

Public TV
By Public TV
51 minutes ago
5 Arrested For ISI Backed Blast Outside BJP Headquarters In Chandigarh
Crime

ಪಂಜಾಬ್ ಬಿಜೆಪಿ ಪ್ರಧಾನ ಕಚೇರಿ ಬಳಿ ಸ್ಫೋಟ ಪ್ರಕರಣ – ಐವರು ಅರೆಸ್ಟ್‌

Public TV
By Public TV
1 hour ago
RI CHANDRAPPA
Crime

ದಾವಣಗೆರೆ | 50,000 ಲಂಚ ಸ್ವೀಕರಿಸುವಾಗ ʻಲೋಕಾʼ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

Public TV
By Public TV
2 hours ago
Donald Trump 1
Latest

ಇರಾನ್‌ಗೆ ಉಳಿದಿರೋದು ಇನ್ನು 48 ಗಂಟೆ ಮಾತ್ರ: ಹಾರ್ಮುಜ್ ಓಪನ್ ಡೆಡ್‌ಲೈನ್ ನೆನಪಿಸಿದ ಟ್ರಂಪ್

Public TV
By Public TV
2 hours ago
Crude bomb explosion in Thirthahalli Elderly woman seriously injured
Crime

ತೀರ್ಥಹಳ್ಳಿ | ನಾಡಬಾಂಬ್‌ ಸ್ಫೋಟ – ವೃದ್ಧೆಗೆ ಗಂಭೀರ ಗಾಯ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?