ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಮತ್ತೋರ್ವ ಪ್ರಯಾಣಿಕನಿಗೆ ಶಂಕಿತ ಕೊರೊನಾ ಸೊಂಕು ಪತ್ತೆಯಾಗಿದೆ.
ಹೀಗಾಗಿ ಶಂಕಿತ ಸೋಂಕಿತ ಪ್ರಯಾಣಿಕನನ್ನ ವಶಕ್ಕೆ ಪಡೆದು ಆರೋಗ್ಯಾಧಿಕಾರಿಗಳು ದಿಗ್ಬಂಧನ ವಿಧಿಸಿದ್ದಾರೆ. ಪ್ರಯಾಣಿಕನನ್ನ ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಯಾಣಿಕನ ಲಗೇಜ್ ಸಮೇತ 108 ಅಂಬುಲೆನ್ಸ್ ಮೂಲಕ ಸೋಂಕಿಗೆ ಗುರಿಯಾಗಿರುವ ಶಂಕಿತ ಪ್ರಯಾಣಿಕನನ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಆಂಧ್ರದ ಟೆಕ್ಕಿಗೆ ಕೊರೊನಾ : ಬೆಂಗ್ಳೂರಲ್ಲಿ ಲ್ಯಾಂಡ್ ಆಗಿದ್ರೂ ಪತ್ತೆ ಆಗಲಿಲ್ಲ ಯಾಕೆ?
Advertisement
Advertisement
ಈ ಪ್ರಯಾಣಿಕ ಯಾರು? ಎಲ್ಲಿಂದ ಬಂದಿದ್ದಾರೆ ಎಂಬ ಮಾಹಿತಿಯನ್ನ ಗೌಪ್ಯವಾಗಿ ಇಡಲಾಗಿದೆ. ಅಂದಹಾಗೆ ಕೊರೊನಾ ಪ್ರಕರಣಗಳನ್ನ ಪತ್ತೆ ಹಚ್ಚಲು ಕೆಐಎಎಲ್‍ನಲ್ಲಿ 24 ಗಂಟೆಗಳ ಕಾಲ ನಿರಂತರ 13 ದೇಶಗಳಿಂದ ಬರುತ್ತಿರುವ ಎಲ್ಲಾ ಪ್ರಯಾಣಿಕರ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಇದನ್ನೂ ಓದಿ: ಬೀ ಕೇರ್ ಫುಲ್: ಕೊರೊನಾ ಲಕ್ಷಣ ಏನು? ಹೇಗೆ ಹರಡುತ್ತದೆ? ಮುಂಜಾಗೃತ ಕ್ರಮ ಏನು?
Advertisement
Advertisement
ಈ ವೇಳೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾದರೆ ಕೂಡಲೇ ಅವರನ್ನ ವಶಕ್ಕೆ ಪಡೆದು ಅಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಈ ಅಂಬುಲೆನ್ಸ್ ಬಳಿ ಹಾಗೂ ಶಂಕಿತ ಸೋಂಕಿತ ವ್ಯಕ್ತಿ ಬಳಿ ಯಾರನ್ನ ಸುಳಿದಾಡಲು ಬಿಡದೆ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.