ಬೆಂಗಳೂರು: ಸುಮಾರು 9.65 ಲಕ್ಷ ರೂ. ಮೌಲ್ಯದ ಎರಡು ಗೋಲ್ಡ್ ಬಿಸ್ಕೆಟ್ ಮಾರಲು ಹೋದ ಏರ್‌ಪೋರ್ಟ್ ಸಿಬ್ಬಂದಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೌಚಾಲಯ ಸ್ವಚ್ಚತೆ ಕೆಲಸ ಮಾಡುವ ಅಂಜಪ್ಪ ಬಂಧಿತ ಆರೋಪಿ. ಅಂಜಪ್ಪ ಚಿಂತಾಮಣಿ ತಾಲೂಕು ಶೆಟ್ಟಿಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಚಿಂತಾಮಣಿ ನಗರದ ಬಾಲಾಜಿ ಜ್ಯೂವೆಲ್ಲರ್ಸ್‍ನಲ್ಲಿ ತನ್ನ ಬಳಿ ಇದ್ದ ಚಿನ್ನದ ಬಿಸ್ಕೆಟ್‍ಗಳನ್ನು ಮಾರಾಟ ಮಾಡಲು ಮುಂದಾಗಿದ್ದನು. ಸುಮಾರು 9.65 ಲಕ್ಷ ರೂ. ಮೌಲ್ಯದ 232 ಗ್ರಾಂ ತೂಕದ ಎರಡು ಚಿನ್ನದ ಬಿಸ್ಕೆಟ್ ಗಳನ್ನು ಮಾರಾಟ ಮಾಡಲು ಅಂಜಪ್ಪ ಹೋಗಿದ್ದನು.
Advertisement
Advertisement
ಈ ವೇಳೆ ಅನುಮಾನಗೊಂಡ ಚಿನ್ನದಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಚಿಂತಾಮಣಿ ಪೊಲೀಸರು ಅಂಜಪ್ಪನನ್ನು ಬಂಧಿಸಿದ್ದಾರೆ. ಅಲ್ಲದೇ ಅಂಜಪ್ಪ ಬಳಿ ಒಟ್ಟು 6 ಚಿನ್ನದ ಬಿಸ್ಕೆಟ್‍ಗಳು ಪತ್ತೆಯಾಗಿದೆ. ಏರ್‌ಪೋರ್ಟ್‌ನಲ್ಲಿ ಅಪರಿಚಿತ ವ್ಯಕ್ತಿಗಳು ತನಗೆ ಚಿನ್ನದ ಬಗ್ಗೆ ಮಾಹಿತಿ ಕೊಟ್ಟಿದ್ದರು ಎಂದನು. ಕಸ್ಟಮ್ಸ್ ಅಧಿಕಾರಿಗಳಿಗೆ ಹೆದರಿ ಅಂಜಪ್ಪಗೆ ಅಪರಿಚಿತರು ಚಿನ್ನದ ಬಿಸ್ಕೆಟ್ ನೀಡಿ ಪರಾರಿಯಾಗಿದ್ದರು. ಏರ್‌ಪೋರ್ಟ್‌ನಿಂದ ಹೊರಬಂದ ಬಳಿಕ ಚಿನ್ನವನ್ನು ವಾಪಸ್ ಕೊಡುವಂತೆ ಹೇಳಿದ್ದರು, ಆದರೆ ಅಂಜಪ್ಪ ಚಿನ್ನವನ್ನು ವಾಪಸ್ ಕೊಡದೆ ತಾನೇ ಇಟ್ಟುಕೊಂಡಿದ್ದನು.