ಬೆಂಗಳೂರು: ಶಾಲಾ ಪಠ್ಯದಲ್ಲಿ ಯಾವ ಪಾಠ ಸೇರಿಸಬೇಕು. ಯಾವುದು ಬೇಡ ಎಂಬ ವಿವಾದ ಸದ್ಯಕ್ಕೆ ತೆರೆ ಕಾಣುವಂತಿಲ್ಲ. ಇಷ್ಟದಿನ ಟಿಪ್ಪು ಪಠ್ಯ, ಭಗತ್‍ಸಿಂಗ್, ಹೆಡ್ಗೆವಾರ್ ಪಠ್ಯ ಅಂತೆಲ್ಲ ಶಾಲಾ ಪಠ್ಯ ವಾರ್ ನಡೆಯುತ್ತಿತ್ತು. ಈಗ ಇದರ ಪಟ್ಟಿಗೆ ಮತ್ತೊಂದು ಸೇರ್ಪಡೆಗೊಳುತ್ತಿದೆ.
Advertisement
ಹೌದು, ಬೆಂಗಳೂರು ಹೇಗೆ ನಿರ್ಮಾಣವಾಯಿತು. ಬೆಂಗಳೂರು ಕಟ್ಟಲು ಕೆಂಪೇಗೌಡರ ಶ್ರಮ ಏನು ಎಂಬುವುದನ್ನು ತಿಳಿದುಕೊಳ್ಳಲು ಬೆಂಗಳೂರು ಕಟ್ಟಿದ ನಾಡಪ್ರಭು ‘ಕೆಂಪೇಗೌಡರ ಜೀವನ ಚರಿತ್ರೆʼ ಪಠ್ಯ ಸೇರ್ಪಡೆಗೊಳಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಆರಾಧ್ಯ ದೈವ ಸದ್ಗುರು ಸಿದ್ಧರೂಡ ಜಾತ್ರೆಯ ವಿಶೇಷ ಏನು? ಜಾತ್ರೆಯ ಇತಿಹಾಸ ಹಿನ್ನಲೆ ಕುರಿತು ‘ಹುಬ್ಬಳ್ಳಿಯ ಸಿದ್ದರೂಢ ಜಾತ್ರೆ’ ಪಠ್ಯ ಮತ್ತು ಮೋದಿಯವರ ‘ವೋಕಲ್ ಫಾರ್ ಲೋಕಲ್ ಮಂತ್ರ’ ಮತ್ತು ‘ಆತ್ಮನಿರ್ಭರ್ ಭಾರತ್’ವನ್ನು ಸೇರ್ಪಡೆಗೊಳಿಸಲಾಗಿದೆ. 74ನೇ ಸ್ವಾತಂತ್ರ ದಿನದಂದು ಪ್ರಧಾನಿ ಮೋದಿ ಅವರ ವೋಕಲ್ ಫಾರ್ ಲೋಕಲ್ ಮಂತ್ರವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದರು. ಇದನ್ನೂ ಓದಿ: ವಾರಣಾಸಿ ಜಿಲ್ಲಾ ಕೋರ್ಟ್‍ನಲ್ಲಿ ಕಾಶಿ ಮಸೀದಿ ವಿಚಾರಣೆ – ಜ್ಞಾನವಾಪಿ ಮಸೀದಿಯಲ್ಲಿ ಮತ್ತೊಂದು ಶಿವಲಿಂಗ?
Advertisement
Advertisement
ಸ್ಥಳೀಯವಾಗಿ ಕುಶಲ ಕರ್ಮಿಗಳು ತಯಾರಿಸುವ ಉತ್ಪನ್ನಗಳನ್ನು ಬಳಕೆಗೆ ಉತ್ತೇಜಿಸುವ “ಸ್ವದೇಶಿ ಸೂತ್ರದ ಸರಳ ಹಬ್ಬ” ಪಠ್ಯ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಸ್ವದೇಶಿ ವಸ್ತುಗಳ ಕುರಿತು ಸ್ವಾತಂತ್ರ್ಯ ಹೋರಾಟಗಾರ ಕಾಲದಲ್ಲಿ ಹಬ್ಬ ಹರಿದಿನಗಳಲ್ಲಿ ಹೇಗೆ ಇತ್ತು ಎಂದು ಉಲ್ಲೇಖಿಸಲಾಗಿದೆ. ಭಗತ್ ಸಿಂಗ್ ಪಠ್ಯ ಕೈ ಬಿಟ್ಟಿರುವ ಬಗ್ಗೆ ದೊಡ್ಡ ವಿವಾದವಾಗಿತ್ತು. ಆದರೆ ಭಗತ್ ಸಿಂಗ್ ಪಠ್ಯ ಕೈ ಬಿಟ್ಟಿಲ್ಲ. ಚಿಂತಕ ಚಕ್ರವರ್ತಿ ಸೂಲಿಬೆಲಿ ಅವರು ರಚಿಸಿರುವ ‘ಭಗತ್ ಸಿಂಗ್’ರ ಕುರಿತಾದ ತಾಯಿ ಭಾರತೀಯ ಅಮರ ಯೋಧರು ಪಾಠ ಸೇರ್ಪಡೆ ಮಾಡಲಾಗಿದೆ. ಇದನ್ನೂ ಓದಿ: ಜನರಲ್ ಟಿಕೆಟ್‍ಗಾಗಿ ರೈಲು ಪ್ರಯಾಣಿಕರ ನೂಕಾಟ
Advertisement
10 ನೇ ತರಗತಿ ಕನ್ನಡ ಪಠ್ಯದಲ್ಲಿ ಸ್ವಾಮಿ ವಿವೇಕಾನಂದರ ಉದಾತ್ತ ಚಿಂತನೆಗಳ ಪೂರಕ ಪಾಠ ಇತ್ತು. ಈಗ ಸ್ವಾಮಿ ವಿವೇಕಾನಂದರ ಜೊತೆ ಅಂಬೇಡ್ಕರ್ ಮತ್ತು ಗಾಂಧಿಯವರ ಕುರಿತ ಉದಾತ್ತ ಚಿಂತನೆಗಳನ್ನು ಸೇರಿಸಲಾಗಿದೆ. ಚನ್ನಭೈರಾದೇವಿ ಕನ್ನಡ ರಾಣಿಯ ಬಗ್ಗೆ ಮೊದಲ ಪಠ್ಯ ಸೇರ್ಪಡೆ ಮಾಡಲಾಗಿದೆ. ಮಂಜೇಶ್ವರ ಗೋವಿಂದ ಪೈ ಅವರ ನಾನು ಪ್ರಾಸ ಬಿಟ್ಟ ಕಥೆ ಪಠ್ಯ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಪಂಜೆ ಮಂಗೇಶರಾಯರ “ಸೀಗಡಿ ಯಾಕೆ ಒಣಗಲಿಲ್ಲ” ಮಕ್ಕಳ ಕಥೆ ಸೇರ್ಪಡೆ ಮಾಡಲಾಗಿದೆ.