ಬೆಂಗಳೂರು: ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದಾನೆ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಂಟ್ರೋಲ್ ರೂಮ್‍ಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈ ಹಿನ್ನೆಲೆ ಪೊಲೀಸರು ಪರಿಶೀಲಿಸಿದ್ದು, ಯಾವುದೇ ಬಾಂಬ್ ಸುಳಿವು ಸಿಕ್ಕಿರಲಿಲ್ಲ.
Advertisement
Advertisement
ಕರೆ ಬಂದ ನಂಬರ್ ಪತ್ತೆಗೆ ಮುಂದಾದ ಪೊಲೀಸರಿಗೆ ಆರೋಪಿಯು ವಿಧಾನಸೌಧದ ಶಾಂತಿನಗರದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡಿದ್ದು, ಅವನು ಹೇಳಿದ ಕಾರಣ ಕೇಳಿ ಶಾಕ್ ಆಗಿದ್ದಾರೆ. ಆರೋಪಿಯೂ, ತನ್ನ ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಕೆಂಪೇಗೌಡ ಏರ್‌ಪೋರ್ಟ್‍ಗೆ ಬಾಂಬ್ ಬೆದರಿಕೆ ಕರೆ
Advertisement
Advertisement
ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಶಿಷ್ ಗುಪ್ತ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ಆರೋಪಿಯಾಗಿದ್ದು, ಅವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುಭಾಶಿಷ್ ಗುಪ್ತ ಈ ಹಿಂದೆ ಏರ್‌ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ.
ಏನಿದು ಸೇಡಿನ ಕಥೆ?
ಸುಭಾಶಿಷ್‍ನ ಅಕ್ಕ ಮತ್ತು ಬಾವನ ನಡುವೆ 10 ವರ್ಷಗಳ ಹಿಂದೆ ಜಗಳವಾಗಿತ್ತು. ಇಬ್ಬರಿಗೂ ವಿಚ್ಛೇದನ ಸಹ ಆಗಿತ್ತು. ಇದಕ್ಕೆ ಸುಭಾಶಿಷ್ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ. ಈ ಹಿನ್ನೆಲೆ ಶುಕ್ರವಾರ ಮುಂಜಾನೆ 3:30ಕ್ಕೆ ಆರೋಪಿ ತನ್ನ ಬಾವನ ಹೆಸರು ಹೇಳಿ ಕಂಟ್ರೋಲ್ ರೂಮ್‍ಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ.
ಸುಭಾಶಿಷ್ ವಿಚ್ಛೇದನ ನೀಡಿದ್ದ ಭಾವನನ್ನು ಪೊಲೀಸರು ಅರೆಸ್ಟ್ ಮಾಡುತ್ತಾರೆ ಎಂದುಕೊಂಡಿದ್ದ. ಆದರೆ ಪೊಲೀಸರು ಆರೋಪಿಯ ಜಾಲವನ್ನು ಹಿಡಿದು ಸುಭಾಶಿಷ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಳೆ ರೌಂಡ್ಸ್ ಬಿಟ್ಟು ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ ಸಿಎಂ
ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಶಾನ್ಯ ವಿಭಾಗ ಪೊಲೀಸರಿಂದ ಆರೋಪಿಯ ವಿಚಾರಣೆ ನಡೆಯುತ್ತಿದೆ. ಬಳಿಕ ವಿಧಾನಸೌಧ ಪೊಲೀಸರ ವಶಕ್ಕೆ ಆರೋಪಿಯನ್ನು ಹಸ್ತಾಂತರಿಸಲಾಗಿದೆ.