Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಠ್ಯ ಪುಸ್ತಕದಲ್ಲಿ ಕೆಳದಿ ರಾಣಿ ಚೆನ್ನಮ್ಮನ ಹೋರಾಟದ ಕತೆ ಅಳವಡಿಸಲು ಚಿಂತನೆ: ಬೊಮ್ಮಾಯಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪಠ್ಯ ಪುಸ್ತಕದಲ್ಲಿ ಕೆಳದಿ ರಾಣಿ ಚೆನ್ನಮ್ಮನ ಹೋರಾಟದ ಕತೆ ಅಳವಡಿಸಲು ಚಿಂತನೆ: ಬೊಮ್ಮಾಯಿ

Bengaluru City

ಪಠ್ಯ ಪುಸ್ತಕದಲ್ಲಿ ಕೆಳದಿ ರಾಣಿ ಚೆನ್ನಮ್ಮನ ಹೋರಾಟದ ಕತೆ ಅಳವಡಿಸಲು ಚಿಂತನೆ: ಬೊಮ್ಮಾಯಿ

Public TV
Last updated: February 28, 2022 5:04 pm
Public TV
Share
3 Min Read
BASAVARJ BOMMAI PROGRAM
SHARE

ಬೆಂಗಳೂರು: ಕಿತ್ತೂರು ರಾಣಿ ಚೆನ್ನಮ್ಮನಂತೆ ಕೆಳದಿ ರಾಣಿ ಚೆನ್ನಮ್ಮನವರ ಹೋರಾಟ, ಕ್ಷಮಾಗುಣಗಳು ಆದರ್ಶನೀಯವಾಗಿದ್ದು, ಈ ಕುರಿತು ಪಠ್ಯದಲ್ಲಿ ಅಳವಡಿಸುವ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

BASAVARJ BOMMAI PROGRAM 1

ಗೃಹ ಕಛೇರಿ ಕೃಷ್ಣದಲ್ಲಿ ಕೆಳದಿ ರಾಣಿ ಚೆನ್ನಮ್ಮನ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಮೂರು ಬಾರಿ ಮೊಘಲರು ಆಕ್ರಮಣ ಮಾಡಿದರೂ, ನಂತರ ಪ್ರಾಣ ಭಿಕ್ಷೆ ಬೇಡಿ ಬಂದಾಗ ಮೊಘಲ್ ಸಾಮ್ರಾಜ್ಯದ ಶಿವಾಜಿ ಮಗ ರಾಜಾರಾಮನಿಗೆ ಆಶ್ರಯ ನೀಡಿ ಕ್ಷಮಿಸಿದ ಹೃದಯ ವೈಶಾಲ್ಯತೆ ಒಬ್ಬ ಮಹಿಳೆ ಕಂದಾಚಾರವನ್ನು ಬಿಟ್ಟು ಪ್ರಗತಿಪರವಾದ ಚಿಂತನೆಗಳಿಂದ ಆ ಕಾಲದಲ್ಲಿ ತನ್ನ ಗಟ್ಟಿ ನಿಲುವನ್ನು ತೋರಿದ ರೀತಿ, ದೂರದೃಷ್ಟಿ, ಕ್ಷಮಾಗುಣ ಹೊಂದಿರುವುದು ರೋಮಾಂಚನಕಾರಿಯಾಗಿದೆ. ಇದನ್ನೂ ಓದಿ: ಅಮೆರಿಕ ಮಾದರಿ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ: ನಿತಿನ್ ಗಡ್ಕರಿ ಭರವಸೆ

ಮುಂದಿನ ಪೀಳಿಗೆಯ ಮಕ್ಕಳಿಗೆ ಇವರ ಬಗ್ಗೆ ತಿಳಿಸುವ ಅಗತ್ಯವಿದೆ. ಹೀಗಾಗಿ ಕೆಳದಿ ರಾಣಿ ಚೆನ್ನಮ್ಮನವರ ಬಗ್ಗೆ ಪಠ್ಯದಲ್ಲಿ ಅಳವಡಿಸುವ ಬಗ್ಗೆ ಶಿಕ್ಷಣ ಇಲಾಖೆಯ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

BASAVARJ BOMMAI PROGRAM 2

ಇದಕ್ಕೂ ಮೊದಲು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಮರಾಠಿಯಲ್ಲಿನ ಮೂಡಿಲಿಪಿಯ ಬಗ್ಗೆ ಅಧ್ಯಯನ ಕೈಗೊಳ್ಳುವ ಮೂಲಕ ಕನ್ನಡ ಸಾಹಿತ್ಯ ಕೃಷಿಗೆ ನೆರವಾಗಬೇಕು. ನಮಗೆ ಬಹಳಷ್ಟು ಸಾಹಿತ್ಯ ಸಿಕ್ಕಿರುವುದು ಮರಾಠಿಯಲ್ಲಿ. ಹೀಗಾಗಿ ಮರಾಠಿಯಲ್ಲಿನ ಪುಸ್ತಕಗಳು ಕನ್ನಡಕ್ಕೆ ಅನುವಾದ ಆಗುತ್ತಿವೆ. ಹೀಗಾಗಿ ಮರಾಠಿಯ ಮೂಡಿಲಿಪಿಯ ಬಗ್ಗೆ ಅಧ್ಯಯನ ಕ್ರಮ ಕ್ರಮಕೈಗೊಳ್ಳಬೇಕು ಎಂದರು.

ರಾಜಾರಾಂ ಮೋಹನರಾಯ್ ಅವರಿಗೂ ಮೊದಲೇ ಅಂದರೆ 350 ವರ್ಷಗಳ ಹಿಂದೆಯೇ ಸತಿ ಸಹಗಮನ ಪದ್ಧತಿಯ ವಿರುದ್ಧ ಹೋರಾಡಿದ ಧೀರೆ ಕೆಳದಿ ರಾಣಿ ಚೆನ್ನಮ್ಮ. ಸುಮಾರು ಮುನ್ನೂರಾ ಐವತ್ತು ವರ್ಷಗಳ ಹಿಂದೆಯೇ ಕರ್ನಾಟಕ-ಮಹಾರಾಷ್ಟ್ರದ ನಡುವೆ ಸಾಮರಸ್ಯ ಮೆರೆದವರು ಕೆಳದಿ ರಾಣಿ ಚೆನ್ನಮ್ಮ. ಇವರ ಹೋರಾಟ, ಪ್ರಾಣಿ ಭಿಕ್ಷೆ ಬೇಡಿ ಬಂದ ಮೊಘಲರು, ಮರಾಠಿಗರಿಗೆ ಚೆನ್ನಮ್ಮ ತೋರಿದ ಮಾನವೀಯತೆ ಹೀಗೆ ಕೆಳದಿ ಪರಂಪರೆಯನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಅಂತಹ ಪರಂಪರೆಯ ಕರ್ನಾಟಕ ನಮ್ಮದು ಎಂಬುದು ಹೆಮ್ಮೆಯ ಸಂಗತಿ. ಹೀಗಾಗಿ ಕೆಳದಿ ರಾಣಿ ಚೆನ್ನಮ್ಮ ಅವರ ಹೆಸರನ್ನು ಮತ್ತಷ್ಟು ಚಿರಸ್ಥಾಯಿಗೊಳಿಸುವ ಕೆಲಸ ಸರಕಾರದಿಂದ ಆಗಬೇಕು ಎಂದು ಶ್ರೀಗಳು ಮನವಿ ಮಾಡಿದರು. ಇದನ್ನೂ ಓದಿ: ನಿಪ್ಪಾಣಿಯಿಂದ ಕಿತ್ತೂರುವರೆಗಿನ ರಾಷ್ಟ್ರೀಯ ಪಕ್ಕದಲ್ಲಿ ಜಲಶಕ್ತಿ ನಿರ್ಮಾಣ: ಬೊಮ್ಮಾಯಿ

ಕೆಳದಿ ಮತ್ತು ಸಾಗರದ ಮಧ್ಯೆ ಒಂದು ಅಧ್ಯಯನ ಪೀಠ ಆಗಬೇಕು. ಅದು ಕುವೆಂಪು ವಿವಿ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತಿರಬೇಕು. ಪ್ರತಿ ವರ್ಷ ಫೆ.27ರಂದು ರಾಜ್ಯಾದ್ಯಂತ ಕೆಳದಿ ರಾಣಿ ಚೆನ್ನಮ್ಮ ನವರ ಜಯಂತಿಯನ್ನು ಆಚರಿಸಬೇಕು. ಅವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಹೀಗಾಗಿ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮನವರ ಹೆಸರಿಡಬೇಕು ಎಂದು ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ ಶ್ರೀಗಳು, ಕೆಳದಿ ಮತ್ತು ಕಾಶಿಗೆ ಸಂಬಂಧಿಸಿದಂತೆ ಕಾಶಿಯಲ್ಲಿ ಒಂದು ಸ್ಮಾರಕ ನಿರ್ಮಾಣ ಆಗಬೇಕಿದೆ. ಈ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.

ಇದೇ ದಿನ ಪಲ್ಸ್ ಪೋಲಿಯೋ ಹಾಗೂ ಕೆಳದಿ ಚೆನ್ನಮ್ಮನವರ 350ನೇ ಪಟ್ಟಾಭಿಷೇಕದ ಸಂಭ್ರಮವನ್ನು ಆಚರಿಸುವುದು ಖುಷಿಯ ಸಂಗತಿ. ಇಂದಿನ ಕಾರ್ಯಕ್ರಮದಲ್ಲಿ ಹೆಣ್ಣು ಮಗುವಿಗೆ ಪಲ್ಸ್ ಪೋಲಿಯೋ ಹನಿ ಹಾಕಿ ಉದ್ಘಾಟಿಸಿದ್ದು, ಚೆನ್ನಮ್ಮನಿಗೆ ಪಲ್ಸ್ ಪೋಲಿಯೋ ಹನಿ ಹಾಕಿದಂತಾಯಿತು ಎಂದು ಸ್ವಾಮೀಜಿಯವರು ನುಡಿದರು. ಇದನ್ನೂ ಓದಿ: ವಿದ್ಯುತ್ ಪೂರೈಕೆ ಉಚಿತವಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ : ನಿತಿನ್ ರಾವತ್

ಶ್ರೀಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದ ಸಿಎಂ, ಕೆಳದಿಯ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು. ಜೊತೆಗೆ ಮುಂದಿನ ವರ್ಷ ಕೆಳದಿಯಲ್ಲಿ ಚೆನ್ನಮ್ಮನವರ ಪಟ್ಟಾಭಿಷೇಕ ಆಚರಣೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ್ ನಿರಾಣಿ, ಡಾ.ಸುಧಾಕರ್, ಪಂಚಮಸಾಲಿ ಸಮುದಾಯದ ಗಣ್ಯರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

TAGGED:Basavaraj BommaiKeladi Chennammaಕೆಳದಿ ರಾಣಿ ಚೆನ್ನಮ್ಮಬಸವರಾಜ ಬೊಮ್ಮಾಯಿ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Auto Driver
Bengaluru City

ಬೆಂಗಳೂರು ಜೀವನಾಡಿ ಸಾರಥಿಗಳಿಗೆ ಸಂಕಷ್ಟ – ನಸುಕಿನಲ್ಲೇ ಕ್ಯೂ ನಿಂತ್ರೂ ಸಿಗ್ತಿಲ್ಲ ಆಟೋ ಗ್ಯಾಸ್

Public TV
By Public TV
14 minutes ago
INS Aridhaman
Latest

ನ್ಯೂಕ್ಲಿಯರ್ ಸಾಮರ್ಥ್ಯದ 3ನೇ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಅರಿದಮನ್ ಭಾರತೀಯ ಸೇನೆಗೆ ಸೇರ್ಪಡೆ

Public TV
By Public TV
32 minutes ago
Russia India
Latest

ಭಾರತಕ್ಕೆ ಬೇಕಾದ ತೈಲ, ಎಲ್‌ಎನ್‌ಜಿ ಪೂರೈಕೆಗೆ ಉತ್ಪಾದನೆ ಜಾಸ್ತಿ ಮಾಡಲು ಸಿದ್ಧ: ಭಾರತಕ್ಕೆ ರಷ್ಯಾ ಭರವಸೆ

Public TV
By Public TV
42 minutes ago
Oman Tankers
Latest

ಇರಾನ್‌ ಸಮುದ್ರ ಬಳಸದೇ ಹಾರ್ಮುಜ್ ಜಲಸಂಧಿ ಪ್ರವೇಶಿಸಿದ ಮೂರು ಒಮಾನ್ ಹಡಗುಗಳು

Public TV
By Public TV
1 hour ago
Justice Santosh Hegde
Bengaluru City

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸ್ವಸ್ಥ – ಆಸ್ಪತ್ರೆಗೆ ದಾಖಲು

Public TV
By Public TV
1 hour ago
Iranian Crude Oil
Latest

ಭಾರತದತ್ತ ಹೊರಟಿದ್ದ ಇರಾನ್ ಕಚ್ಚಾ ತೈಲ ಹೊತ್ತ ಹಡಗು ಚೀನಾದತ್ತ ಪ್ರಯಾಣ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?