ಪಣಜಿ: ಗೋವಾದಲ್ಲಿ ಆಮ್ ಅದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಸ್ಥಳೀಯರಿಗೆ ಖಾಸಗಿ ಕ್ಷೇತ್ರದಲ್ಲಿ ಶೇ.80 ರಷ್ಟು ಉದ್ಯೋಗಗಳನ್ನು ಮೀಸಲಿಡುವುದಾಗಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನಲೆ ಪ್ರಚಾರಕ್ಕೆ ತೆರಳಿದ್ದ ಅವರು ಯುವ ಜನತೆಗೆ ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ. ಯುವ ಮತಗಳ ಮೇಲೆ ಕಣ್ಣಿಟ್ಟಿರುವ ಅರವಿಂದ್ ಕೇಜ್ರಿವಾಲ್ ನಿರುದ್ಯೋಗ ಸಮಸ್ಯೆಯನ್ನು ಚುನಾವಣಾ ಅಸ್ತ್ರ ಮಾಡಿಕೊಂಡಿದ್ದಾರೆ.
Advertisement
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೋವಾದಲ್ಲಿ ಸರ್ಕಾರಿ ಉದ್ಯೋಗ ರಾಜಕಾರಣಿಗಳ ಸಂಬಂಧಿಗಳಿಗೆ ಮೀಸಲಾಗಿದೆ. ಸಾಮಾನ್ಯ ಯುವಕರು ಇಲ್ಲಿ ಸರ್ಕಾರ ನೌಕರಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
Advertisement
Advertisement
ಒಂದು ವೇಳೆ ಗೋವಾದಲ್ಲಿ ಆಮ್ ಅದ್ಮಿ ಅಧಿಕಾರಕ್ಕೆ ಬಂದಲ್ಲಿ ಸಾಮಾನ್ಯ ಯುವಕರಿಗೆ ಸರ್ಕಾರಿ ಹುದ್ದೆ ಹೊಂದಬಹುದು. ಖಾಸಗಿ ಕ್ಷೇತ್ರದ ಶೇ.80ರಷ್ಟು ನೌಕರಿಗಳನ್ನು ಸ್ಥಳೀಯರಿಗೆ ಮೀಸಲಿಡುವ ಕಾನೂನು ತರಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದರು.
ಪ್ರತಿ ಮನೆಗೆ ಒಂದು ಉದ್ಯೋಗ ನೀಡಲಾಗುವುದು, ಉದ್ಯೋಗ ಸಿಗುವವರೆಗೂ 3000 ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿದ ಅವರು, ಕೊರೊನಾದಿಂದ ಉದ್ಯೋಗ ಕಳೆದುಕೊಂಡ ಪ್ರವಾಸೋದ್ಯಮ ವಲಯದ ಜನರಿಗೆ, ಹಾಗೂ ಗಣಿಗಾರಿಕೆ ನಿಷೇಧದಿಂದ ನಿರುದ್ಯೋಗಿಗಳಾದ ಜನರಿಗೆ 5,000 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ನನಗೆ ಎರಡು ಬಾರಿ ರಾಜ್ಯಸಭಾ ಸೀಟ್ ಆಫರ್ ಬಂದಿತ್ತು: ಸೋನು ಸೂದ್
Why vote for "Duplicate" when you can vote for the "Original"?
– CM @ArvindKejriwal on BJP's CM Sawant COPYING Free water & Doorstep services scheme of Delhi Govt#KejriwalKiJobGuarantee pic.twitter.com/jIdThu7mym
— AAP (@AamAadmiParty) September 21, 2021
ಗೋವಾ ಸಿಎಂ ಪ್ರಮೋದ್ ಸಾವಂತ್ ದೆಹಲಿ ಸರ್ಕಾರದ ಯೋಜನೆಗಳನ್ನು ನಕಲು ಮಾಡಿ ಮನೆ ಬಾಗಿಲಿಗೆ ಸೇವೆ ಕಾರ್ಯಕ್ರಮ ಆರಂಭಿಸಿದ್ದಾರೆ. ನಕಲಿ ಸರ್ಕಾರಕ್ಕೆ ಏಕೆ ಮತ ಹಾಕುಬೇಕು ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್