ಚಂಡೀಗಢ: ಪಂಜಾಬ್‍ಗೆ ಚಂಡೀಗಢವನ್ನು ವರ್ಗಾಯಿಸುವ ನಿರ್ಣಯದ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಅಸಮಾಧಾನ ಹೊರಹಾಕಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹರಿಯಾಣದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ
Advertisement
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್‍ಗೆ ಚಂಡೀಗಢವನ್ನು ವರ್ಗಾಯಿಸುತ್ತಿರುವುದು ಖಂಡನೀಯ ಮತ್ತು ಅವರು ಹೀಗೆ ಮಾಡಬಾರದಿತ್ತು. ಚಂಡೀಗಢವು ಹರಿಯಾಣ ಮತ್ತು ಪಂಜಾಬ್‍ನ ರಾಜಧಾನಿಯಾಗಿದೆ. ಹೀಗಾಗಿ ಕೇಜ್ರಿವಾಲ್ ಇದನ್ನು ಖಂಡಿಸಬೇಕು ಮತ್ತು ಹರಿಯಾಣದ ಜನರಲ್ಲಿ ಕ್ಷಮೆಯಾಚಿಸಬೇಕು. ಜೊತೆಗೆ ಭಗವಂತ್ ಮಾನ್ ಅವರು ಕೂಡ ಕ್ಷಮೆ ಕೇಳಬೇಕು ಎಂದು ತಿಳಿಸಿದ್ದಾರೆ.
Advertisement
ಪಂಜಾಬ್‍ನಲ್ಲಿ ಎಎಪಿ ನೇತೃತ್ವದ ಸರ್ಕಾರವು ಮೊದಲು ಸಟ್ಲೆಜ್ ಯಮುನಾ ಲಿಂಕ್ ಕಾಲುವೆ ಸಮಸ್ಯೆಯನ್ನು ಪರಿಹರಿಸುವ ಕುರಿತು ಸುಪ್ರೀಂ ಕೋರ್ಟ್‍ಗೆ ಹೋಗಬೇಕು. ಹಿಂದಿ ಮಾತನಾಡುವ ಪ್ರದೇಶಗಳನ್ನು ಹರಿಯಾಣಕ್ಕೆ ನೀಡಲಿಲ್ಲ, ಇದು ಉಳಿದ ಸಮಸ್ಯೆಗಳನ್ನು ವಿಳಂಬಗೊಳಿಸಿತು. ಹರಿಯಾಣಕ್ಕೆ ಹಿಂದಿ ಭಾಷಿಕ ಪ್ರದೇಶಗಳನ್ನು ನೀಡಲು ಸಿದ್ಧ ಅಂತ ಹೇಳಬೇಕು ಎಂದು ಖಟ್ಟರ್ ಹೇಳಿದ್ದಾರೆ. ಇದನ್ನೂ ಓದಿ: 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
Advertisement
ಪಂಜಾಬ್ ಸರ್ಕಾರ ಬಚ್ಚಾ ಪಕ್ಷ. ಅವರಿಗೆ ಸಮಸ್ಯೆಗಳ ಸಂಪೂರ್ಣ ಜ್ಞಾನವಿಲ್ಲ. ಚಂಡೀಗಢ ಮಾತ್ರ ಸಮಸ್ಯೆಯಲ್ಲ. ಅದಕ್ಕೆ ಸಂಬಂಧಿಸಿದ ಇತರ ಹಲವು ಸಮಸ್ಯೆಗಳಿವೆ. ಹಿಂದಿ ಮಾತನಾಡುವ ಪ್ರದೇಶಗಳ ಸಮಸ್ಯೆಗಳಿವೆ. ಅವರು ಅದರ ಬಗ್ಗೆ ಏನನ್ನೂ ಹೇಳಲಿಲ್ಲ. ಅದು ಸಂಭವಿಸಿದಾಗಲೆಲ್ಲಾ ಒಂದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಹರಿಯಾಣ ಸಚಿವ ಮಿನ್ ಅನಿಲ್ ವಿಜ್ ಕಿಡಿ ಕಾರಿದ್ದಾರೆ.
ಶುಕ್ರವಾರ ಚಂಡೀಗಢವನ್ನು ಕೇಂದ್ರ ಸೇವಾ ನಿಯಮಗಳಿಗೆ ಒಳಪಡಿಸುವ ಕೇಂದ್ರದ ನಿರ್ಧಾರದ ವಿರುದ್ಧ ಪಂಜಾಬ್ ಸಿಎಂ ಭಗವಂತ್ ಮಾನ್ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದರು. ಚಂಡೀಗಢವನ್ನು ಪಂಜಾಬ್‍ಗೆ ವರ್ಗಾಯಿಸಲು ಮಾನ್ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಮುಂದಿಟ್ಟಿದ್ದರು. ಕೇಂದ್ರಾಡಳಿತ ಪ್ರದೇಶ ಮತ್ತು ಇತರ ಸಾಮಾನ್ಯ ಆಸ್ತಿಗಳ ಸಮತೋಲನವನ್ನು ಹಾಳುಮಾಡಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.