ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ತಜೀಂದರ್ ಪಾಲ್ ಸಿಂಗ್ ಬಂಧನ ಖಂಡಿಸಿ ಕರ್ನಾಟಕ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ನೇತೃತ್ವದಲ್ಲಿ ಎಂಜಿ ರಸ್ತೆ ಸಮೀಪ ಇರುವ ಆಪ್ ಕಚೇರಿ ಮುಂದೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂದೀಪ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಡಳಿತ ಇಂದಿರಾಗಾಂಧಿಯ ಸರ್ವಾಧಿಕಾರಿ ಧೋರಣೆ, ತುಘಲಕ್ ದರ್ಬಾರ್ ನೆನಪಿಸುವಂತಿದೆ. ದೆಹಲಿಗೆ ಪಂಜಾಬ್ ಪೊಲೀಸ್ ಕಳ್ಸಿ ಅರೆಸ್ಟ್ ಮಾಡಿಸುವ ದುಸ್ಸಾಹಸಕ್ಕೆ ಕೈಹಾಕಿ ಎಎಪಿ ಮುಖಭಂಗ ಅನುಭವಿಸಿದೆ ಎಂದು ಪ್ರತಿಭಟನೆಯಲ್ಲಿ ಫೋಷಣೆಯನ್ನು ಕೂಗಿದರು. ಇದನ್ನೂ ಓದಿ: ಪೊಲೀಸರೇ ಕಳ್ಳರು, ಇನ್ನೂ ಕಳ್ಳತನ ಹೇಗೆ ತಪ್ಪಿಸುತ್ತಾರೆ: ಸಿದ್ದರಾಮಯ್ಯ
ಎರಡೇ ರಾಜ್ಯದಲ್ಲಿ ಅಧಿಕಾರದಲ್ಲಿರುವ ಈ ಪೊರಕೆ ಪಕ್ಷ ಇಷ್ಟೊಂದು ಹಾರಾಡುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ, ಕೇಂದ್ರದಲ್ಲಿ ಪೂರ್ಣಪ್ರಮಾಣದಲ್ಲಿ ಅಧಿಕಾರದಲ್ಲಿರುವ ನಮ್ಮ ಪಕ್ಷ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡೋದಿಲ್ಲ. ಎಎಪಿ ಕುತಂತ್ರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ಈ ರೀತಿಯಾಗಿ ಹುಚ್ಚಾಟ ಮುಂದುವರೆದರೆ ಬಿಜೆಪಿ ಪಕ್ಷದ 10 ಪಟ್ಟು ಶಾಕ್ ಎಎಪಿಗೆ ಎಲ್ಲ ರೀತಿಯಲ್ಲೂ ಕೊಡುತ್ತೆ ಎಂದರು.
ತಜೀಂದರ್ ಪಾಲ್ ಸಿಂಗ್ ತಾಯಿ ಹಾಗೂ ತಂದೆಗೆ ಹಲ್ಲೆ ಮಾಡಿರುವ ಪಂಜಾಬ್ ಪೊಲೀಸರ ಕೃತ್ಯ ಖಂಡನೀಯ. ಕೇಜ್ರಿವಾಲ್ ಓರ್ವ ಅರಾಜಕತೆ ಸೃಷ್ಟಿ ಮಾಡುವ ನಾಯಕ. ಪಂಜಾಬ್‍ನಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಇಡೀ ದೇಶ ಗೆದ್ದಂತೆ ಕೇಜ್ರಿವಾಲ್ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕಾನೂನಿನ ಅರಿವಿಲ್ಲದ ಕೇಜ್ರಿವಾಲ್‍ಗೆ ಪಾಠ ಮಾಡಬೇಕಿದೆ. ನಮ್ಮ ಪಕ್ಷದ ತಜೀಂದರ್ ಪಾಲ್ ಸಿಂಗ್ ಮೇಲಿನ ಈ ದ್ವೇಷಪೂರಿತ ವರ್ತನೆ ಕೇಜ್ರಿವಾಲ್ ಎಂತಹ ಕುತಂತ್ರಿ ಅನ್ನೋದನ್ನ ತೋರಿಸುತ್ತೆ ಎಂದು ಆಕ್ರೋಶ ಹೊರಹಾಕಿದರು.
ಖಲಿಸ್ತಾನಿಗಳ ಸಪೋರ್ಟರ್ ಈ ಕೇಜ್ರಿವಾಲ್ ಈಗಾಗಲೇ ಬಾಲ ಬಿಚ್ಚೋಕೆ ಶುರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನ ಕೇಜ್ರಿವಾಲ್‍ಗೆ ಪಾಠ ಕಲಿಸ್ತಾರೆ. ಈಗ ಹರಿಯಾಣ ಪೊಲೀಸರು ಪಂಜಾಬ್ ಪೊಲೀಸರನ್ನೇ ಬಂಧಿಸಿದ್ದಾರೆ. ಅವಿವೇಕಿ ಸಿಎಂ ಮಾತು ಕೇಳಿ ಪಂಜಾಬ್ ಪೊಲೀಸರು ಮೂರ್ಖರಾಗಿದ್ದಾರೆ ಎಂದರು. ಇದನ್ನೂ ಓದಿ: ಸಿಎಂ ಪೋಸ್ಟ್‌ಗಾಗಿ 2,500 ಕೋಟಿ ರೂ. ಬೇಡಿಕೆ ವಿಚಾರ- ತನಿಖೆಗೆ ಡಿಕೆಶಿ ಒತ್ತಾಯ