‘ಮಹಾನಟಿ’ ಕೀರ್ತಿ ಸುರೇಶ್‌ಗೆ (Keerthy Suresh) ಬಾಲಿವುಡ್‌ನಲ್ಲಿ ಬಂಪರ್ ಅವಕಾಶವೊಂದು ಸಿಕ್ಕಿದೆ. ಮದುವೆ ಬಳಿಕ ಎರಡನೇ ಬಾಲಿವುಡ್ ಚಿತ್ರಕ್ಕೆ ನಟಿ ಸಹಿ ಹಾಕಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಡಿಂಪಲ್ ಕ್ವೀನ್ ಬಣ್ಣದ ಬದುಕಿಗೆ 12 ವರ್ಷ- ಶುಭಕೋರಿದ ದರ್ಶನ್
ಪ್ರತಿಭಾನ್ವಿತ ನಟ ರಾಜ್‌ಕುಮಾರ್ ರಾವ್ (Rajkumar Rao) ಜೊತೆ ನಟಿಸುವ ಚಾನ್ಸ್ ಕೀರ್ತಿಗೆ ಸಿಕ್ಕಿದೆ. ಒಂದೊಳ್ಳೆಯ ವಿಭಿನ್ನ ಕಥೆಯನ್ನು ಹೇಳಲು ಈ ಜೋಡಿ ಸಜ್ಜಾಗಿದೆ. ಹಾಸ್ಯಭರಿತವಾದ ಸಿನಿಮಾ ತೋರಿಸಲಿದ್ದಾರೆ. ಪತ್ನಿ ಪತ್ರಲೇಖಾ ಜೊತೆಗೂಡಿ ರಾಜ್‌ಕುಮಾರ್ ರಾವ್ ಈ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಜೂನ್ 1ರಿಂದ ಮುಂಬೈನಲ್ಲಿ ಚಿತ್ರೀಕರಣ ಆರಂಭ ಆಗಲಿದೆ. ಸದ್ಯದಲ್ಲೇ ಅಧಿಕೃತ ಅಪ್‌ಡೇಟ್ ತಿಳಿಸಲಿದೆ. ಇದನ್ನೂ ಓದಿ:ತಮಿಳಿನತ್ತ ಕೋಮಲ್- ರಗಡ್ ಲುಕ್‌ನಲ್ಲಿ ಕನ್ನಡದ ನಟ
ಕಳೆದ ಡಿಸೆಂಬರ್ 12ರಂದು ಉದ್ಯಮಿ ಜೊತೆ ಕೀರ್ತಿ ಮದುವೆಯಾದ ಬೆನ್ನಲ್ಲೇ ಅವರು ನಟಿಸಿದ ಮೊದಲ ಬಾಲಿವುಡ್ ಚಿತ್ರ ‘ಬೇಬಿ ಜಾನ್’ ತೆರೆಕಂಡಿತ್ತು. ವರುಣ್ ಧವನ್ ಜೊತೆ ನಟಿಸಿದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಹೀಗಿದ್ದರೂ ನಟಿಗೆ ಬೇಡಿಕೆ ಕಮ್ಮಿಯಾಗಿಲ್ಲ. ಕೀರ್ತಿ ನಟನೆಗೆ ಬಾಲಿವುಡ್ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ ಮತ್ತೊಂದು ಬಂಪರ್ ಅವಕಾಶ ಅವರನ್ನು ಅರಸಿ ಬಂದಿದೆ.