ಅಲ್ಲು ಅರ್ಜುನ್ ಹೊಸ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ

Public TV
1 Min Read
Keerthy Suresh

ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಸದ್ಯ ‘ಪುಷ್ಪ 2’ (Pushpa 2) ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಲೇ ಇವೆ. ಅದರಲ್ಲಿ ಅವರ ಮುಂಬರುವ ಪ್ರಾಜೆಕ್ಟ್ ಬಗ್ಗೆ ಸಖತ್ ಸುದ್ದಿ ಆಗುತ್ತಿದ್ದು, ‘ಜವಾನ್’ (Jawan) ಡೈರೆಕ್ಟರ್ ಅಟ್ಲೀ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

actor allu 1

ಅಲ್ಲು ಅರ್ಜುನ್ ಮತ್ತು ಅಟ್ಲಿ ಒಟ್ಟಾಗುತ್ತಿರುವುದೇ ಒಂದು ಕ್ರೇಜ್ ಕ್ರಿಯೇಟ್ ಆಗಿದೆ. ಈ ಸಿನಿಮಾಗೆ ನಾಯಕಿ ಕೂಡ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರು ಈ ಚಿತ್ರಕ್ಕೆ ನಾಯಕಿಯಂತೆ. ಈಗಾಗಲೇ ಅಟ್ಲೀ ಅವರ ಜೊತೆ ಕೀರ್ತಿ ಮಾತನಾಡಿದ್ದಾರಂತೆ.

allu arjun 1

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ಗೆ (Sharukh Khan) ಅಟ್ಲೀ ನಿರ್ದೇಶನ ಮಾಡಿದ ಮೇಲೆ ಅವರ ರೇಂಜ್ ಬದಲಾಗಿದೆ. ನಿರ್ದೇಶನದ ಮೊದಲ ಹಿಂದಿ ಸಿನಿಮಾ ಜವಾನ್ ಸೂಪರ್ ಡೂಪರ್ ಹಿಟ್ ಆಗಿದೆ. ಜವಾನ್ ಸಕ್ಸಸ್ ಬೆನ್ನಲ್ಲೇ ಅಲ್ಲು ಅರ್ಜುನ್ ಜೊತೆ ಅಟ್ಲೀ (Atlee) ಕೈಜೋಡಿಸಿದ್ದಾರೆ.

 

ಈಗಾಗಲೇ ಹೈದರಾಬಾದ್‌ಗೆ ತೆರಳಿ ಅಲ್ಲು ಅರ್ಜುನ್‌ಗೆ (ಕಥೆ ಹೇಳಿ ಬಂದಿದ್ದಾರಂತೆ ಅಟ್ಲೀ. ಇಬ್ಬರೂ ಕೂಡ ಹೊಸ ಪ್ರಾಜೆಕ್ಟ್ ಬಗ್ಗೆ ಗ್ರೀನ್ ಸಿಗ್ನಲ್ ಕೊಡದೇ ಗಪ್‌ಚುಪ್ ಆಗಿದ್ದಾರೆ. ‘ಜವಾನ್’ (Jawan) ಸಿನಿಮಾಗಿಂತ ವಿಭಿನ್ನ ಕಥೆಯನ್ನೇ ಅಟ್ಲೀ ರೆಡಿ ಮಾಡಿದ್ದಾರಂತೆ.‌ ಮೂಲಗಳ ಪ್ರಕಾರ, ಪುಷ್ಪ 2 ನಂತರ ಅಟ್ಲೀ ಜೊತೆ ಅಲ್ಲು ಅರ್ಜುನ್‌ ಸಿನಿಮಾ ಮಾಡ್ತಾರೆ ಅನ್ನೋದು ಇನ್‌ಸೈಡ್‌ ಸುದ್ದಿ.

Share This Article