ಸೌತ್ ನಟಿ ಕೀರ್ತಿ ಸುರೇಶ್ (Keerthy Suresh) ಅವರು ಡಿಫರೆಂಟ್ ಎನಿಸುವಂತಹ ಪಾತ್ರಗಳಲ್ಲಿ ನಟಿಸುತ್ತಾರೆ. ಆ ಪಾತ್ರವೇ ತಾವಾಗಿ ಜೀವ ತುಂಬುತ್ತಾರೆ. ತೆಲುಗು, ತಮಿಳಿನಲ್ಲಿ ನಟಿಸಿ ಸೈ ಎನಿಸಿಕೊಂಡ ಕೀರ್ತಿ ಸುರೇಶ್ ಬಾಲಿವುಡ್‌ನಲ್ಲಿ ರಾರಾಜಿಸಬೇಕು ಎಂಬುದು ಅದೆಷ್ಟೋ ಅಭಿಮಾನಿಗಳ ಕನಸಾಗಿತ್ತು. ಇದೀಗ ಅದು ನೆರವೇರಿದೆ. ಹಿಂದಿ ಸಿನಿಮಾಗೆ ನಾಯಕಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೀರ್ತಿ ಸುರೇಶ್ ನಟನೆಯ ‘ರಾಘುತಾತ’ ಚಿತ್ರದ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಸಿಹಿಸುದ್ದಿ ಸಿಕ್ಕಿದೆ. ‘ಜವಾನ್’ (Jawan) ನಿರ್ದೇಶಕ ಅಟ್ಲೀ ಹೊಸ ಚಿತ್ರದಲ್ಲಿ ವರುಣ್ ಧವನ್‌ಗೆ ಹೀರೋಯಿನ್ ಆಗಿ ಕೀರ್ತಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?
ಇದೀಗ ವರುಣ್-ಕೀರ್ತಿ ಸುರೇಶ್ ಕಾಂಬಿನೇಷನ್‌ನ ಹೊಸ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಸಂಕ್ರಾಂತಿ ಹಬ್ಬದಂದು ಹೊಸ ಸಿನಿಮಾಗೆ ಚಿತ್ರತಂಡ ಚಾಲನೆ ನೀಡಿದೆ. ಕೀರ್ತಿ ಸುರೇಶ್, ವರುಣ್, ಅಟ್ಲೀ, ವಾಮಿಕಾ ಗಬ್ಬಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.
View this post on Instagram
ತಮನ್ನಾ, ನಯನತಾರಾ (Nayanatar) ಅವರಂತೆಯೇ ಕೀರ್ತಿ ಸುರೇಶ್ ಕೂಡ ಬಾಲಿವುಡ್‌ನಲ್ಲಿ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳ ಆಸೆಯಾಗಿತ್ತು. ಈಗ ವರುಣ್ ಧವನ್ ಚಿತ್ರದ ಮೂಲಕ ನೆರವೇರಿದೆ. ಮುಹೂರ್ತದ ಝಲಕ್ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಇನ್ನೂ ವರುಣ್-ಕೀರ್ತಿ ನಟನೆಯ ಈ ಸಿನಿಮಾ ತಮಿಳಿನ ‘ತೆರಿ’ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಸುದ್ದಿ ನಿಜಾನಾ? ಕಾದು ನೋಡಬೇಕಿದೆ. 2016ರಲ್ಲಿ ‘ತೆರಿ’ ಚಿತ್ರದಲ್ಲಿ ವಿಜಯ್ ದಳಪತಿ- ಸಮಂತಾ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.