ಆರ್.ಆರ್.ಆರ್ ಸಿನಿಮಾದ ಹಾಡಿಗಾಗಿ ಆಸ್ಕರ್ ಪ್ರಶಸ್ತಿ ಪಡೆದಿರುವ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ (MM Keeravani) ಇದೀಗ ಚಂದ್ರಮುಖಿ 2 ಚಿತ್ರಕ್ಕೂ ಮ್ಯೂಸಿಕ್ ಮಾಡುತ್ತಿದ್ದಾರೆ. ಇದೊಂದೇ ಸಿನಿಮಾಗಾಗಿ ಅವರು ಬರೋಬ್ಬರಿ 10 ಹಾಡುಗಳನ್ನು ಕಂಪೋಸ್ ಮಾಡಿದ್ದಾರಂತೆ. ಹತ್ತೂ ಹಾಡುಗಳು ಸಿನಿಮಾದ ಪ್ರಮುಖ ಘಟ್ಟಗಳಲ್ಲಿ ಬರುತ್ತವೆ ಎನ್ನುವುದು ವಿಶೇಷ.
Advertisement
ಅತೀ ನಿರೀಕ್ಷೆ ಮೂಡಿಸಿರುವ ‘ಚಂದ್ರಮುಖಿ 2’ (Chandramukhi 2) ಸಿನಿಮಾದ ಒಂದೊಂದೇ ಮೊದಲ ನೋಟಗಳು (First Look) ಅನಾವರಣಗೊಳ್ಳುತ್ತಿವೆ. ಮೊನ್ನೆಯಷ್ಟೇ ರಾಘವ್ ಲಾರೆನ್ಸ್ ಫಸ್ಟ್ ಲುಕ್ ರಿಲೀಸ್ ಮಾಡಿತ್ತು ಚಿತ್ರತಂಡ. ಇದೀಗ ಕಂಗನಾ ರಣಾವತ್ ಅವರ ಮೊದಲ ನೋಟವನ್ನು ಬಿಡುಗಡೆ ಮಾಡಿ, ಕುತೂಹಲ ಮೂಡಿಸಿದ್ದಾರೆ ನಿರ್ದೇಶಕರು. ಈ ಸಿನಿಮಾದಲ್ಲಿ ಕಂಗನಾ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮದುವೆ ಮುನ್ನ ಅಭಿಮಾನಿಗಳಿಗೆ ಹರ್ಷಿಕಾ-ಭುವನ್ ಕೊಟ್ಟರು ಗುಡ್ ನ್ಯೂಸ್
Advertisement
Advertisement
ಕಂಗನಾ ರಣಾವತ್ (Kangana Ranaut) ಅವರು ಇತ್ತೀಚಿಗೆ ‘ಎಮರ್ಜೆನ್ಸಿ’ (Emergency) ಚಿತ್ರದ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದರು. ಈ ಬೆನ್ನಲ್ಲೇ ತಮ್ಮ ಫ್ಯಾನ್ಸ್‌ಗೆ ಕಂಗನಾ ಸಿಹಿಸುದ್ದಿ ನೀಡಿದ್ದಾರೆ. ಚಂದ್ರಮುಖಿಯಾಗಿ ನಟಿ ಅಭಿಮಾನಿಗಳ ಮುಂದೆ ಬರೋದ್ದಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಫಸ್ಟ್ ಲುಕ್ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.
Advertisement
ಸೌತ್ ಸಿನಿ ದುನಿಯಾದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಭತ್ತಳಿಕೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ‘ಚಂದ್ರಮುಖಿ-2’ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್ ಕೊರಿಯೋಗ್ರಾಫರ್ ರಾಘವ್ ಲಾರೆನ್ಸ್ (Raghav Lawrence), ಬಾಲಿವುಡ್ ಬ್ಯೂಟಿ ಕಂಗನಾ ನಟನೆಯ ಈ ಚಿತ್ರ ಸೆಪ್ಟಂಬರ್ 19ರ ಗಣೇಶ್ ಚತುರ್ಥಿಗೆ ಸ್ಪೆಷಲ್ ಆಗಿ ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ. ಖ್ಯಾತ ಹಿರಿಯ ನಿರ್ದೇಶಕ ಪಿ.ವಾಸು ನಿರ್ದೇಶನದ 65ನೇ ಚಿತ್ರ ಚಂದ್ರಮುಖ-2 ಚಿತ್ರವಾಗಿದೆ.
2015ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ‘ಚಂದ್ರಮುಖಿ’ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ನಟ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಹಿಟ್ ಲೀಸ್ಟ್ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರುತ್ತಿದೆ. ನಿರೀಕ್ಷೆಯನ್ನು ಹೆಚ್ಚಿಸಿದೆ. ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಆಸ್ಕರ್ ಅವಾರ್ಡ್ ವಿನ್ನರ್ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ.
Web Stories