ಮೂರು ಮಾದರಿಯ ಕ್ರಿಕೆಟ್‌ನಿಂದ ಕೇದಾರ್ ಜಾಧವ್ ನಿವೃತ್ತಿ

Public TV
1 Min Read
KEDAR JADHAV

ನವದೆಹಲಿ: ಟಿ20 ವಿಶ್ವಕಪ್ 2024 ಆರಂಭವಾಗಿದ್ದು, ಜೂನ್ 5 ರಿಂದ ಐರ್ಲೆಂಡ್ ವಿರುದ್ಧದ ಪಂದ್ಯವನ್ನು ಆಡುವ ಮೂಲಕ ಭಾರತ ತಂಡ ಫೀಲ್ಡ್‌ಗಿಳಿಯಲಿದೆ. ಈ ನಡುವೆ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ (Kedar Jadhav) ನಿವೃತ್ತಿ ಘೋಷಿಸಿದ್ದಾರೆ.

ಎಂಎಸ್‌ ಧೋನಿ ರೀತಿಯಲ್ಲಿಯೇ ಕೇದಾರ್ ಜಾಧವ್ ಅವರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ನಿವೃತ್ತಿಯ ಕುರಿತು ಬಹಿರಂಗಪಡಿಸಿದ್ದಾರೆ. ಇಂದು ತಮ್ಮ ತಮ್ಮಎಕ್ಸ್‌ ಖಾತೆಯಲ್ಲಿ ನಿವೃತ್ತಿ ಘೋಷಿಸಿರುವ ಅವರು, ನನ್ನನ್ನು ಬೆಂಬಲಿಸಿದ ಮತ್ತು ಪ್ರೀತಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕೇದಾರ್ ಜಾಧವ್ ಅವರು ಎಲ್ಲಾ ಮೂರು ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

2014 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕೇದಾರ್ ಜಾಧವ್ ಪಾದಾರ್ಪಣೆ ಮಾಡಿದರು. 2014 ರ ನವೆಂಬರ್ 16‌ ರಂದು ರಾಂಚಿಯಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ODI ಆಡಿದರು. ಬಳಿಕ 2020ರ ಫೆಬ್ರವರಿ 8 ರಂದು ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ODI ಪಂದ್ಯವನ್ನು ಆಡಿದರು. ಕೇದಾರ್ ಒಟ್ಟು 73 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 1389 ರನ್ ಗಳಿಸಿರುವ ಅವರು, ಒಟ್ಟು 2 ಶತಕಗಳನ್ನು ಗಳಿಸಿದ್ದಾರೆ. ಅಲ್ಲದೇ 6 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಟಿ20ಯಲ್ಲಿ ಕೇದಾರ್ 9 ಪಂದ್ಯಗಳಲ್ಲಿ 122 ರನ್ ಗಳಿಸಿದ್ದರು.

Share This Article