ಬೆಂಗಳೂರು: ಸಿಇಟಿ ಪ್ರಶ್ನೆ ಪತ್ರಿಕೆ ಗೊಂದಲ ಹಿನ್ನೆಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯ ಅವರನ್ನು ಸರ್ಕಾರ ಎತ್ತಂಗಡಿ ಮಾಡಿದೆ.
ಕೆಇಎ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ IAS ಅಧಿಕಾರಿ ಪ್ರಸನ್ನ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಕೆಇಎ ಇಡಿಯಾಗಿ ಪ್ರಸನ್ನ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ – ಮೇ ತಿಂಗಳಲ್ಲೇ 172 ಕೇಸ್ ದಾಖಲು!
ಈ ವರ್ಷದ CET ಪರೀಕ್ಷೆಯಲ್ಲಿ 50 ಕ್ಕೂ ಹೆಚ್ಚು ಪ್ರಶ್ನೆ ಔಟ್ ಆಫ್ ಸಿಲಬಸ್‌ನಿಂದ ಕೇಳಲಾಗಿತ್ತು. ಕೆಇಎ ಎಡವಟ್ಟಿನಿಂದ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆ ಆಗಿತ್ತು. ಜೊತೆಗೆ ಸರ್ಕಾರಕ್ಕೂ ಮುಜುಗರ ಆಗಿತ್ತು. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ರಚನೆ ಮಾಡಿ ಔಟ್ ಆಫ್ ಸಿಲಬಸ್ ಪ್ರಶ್ನೆ ಬಿಟ್ಟು ಮೌಲ್ಯಮಾಪನ ಮಾಡಲು ಉನ್ನತ ಶಿಕ್ಷಣ ಇಲಾಖೆ ಆದೇಶ ಮಾಡಿತ್ತು.
CET ಪ್ರಶ್ನೆ ಪತ್ರಿಕೆ ಲೋಪ ಹಿನ್ನೆಲೆ ರಮ್ಯಾ ಅವರ ವಿರುದ್ಧ ಕ್ರಮಕ್ಕೆ ಎಬಿವಿಪಿ ಸಂಘಟನೆ ಸೇರಿ ಹಲವು ಸಂಘಟನೆಗಳು, ಪೋಷಕರ ಸಮೂಹಗಳು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ KAEಯಿಂದ ರಮ್ಯಾರನ್ನು ಸರ್ಕಾರ ವರ್ಗಾವಣೆ ಮಾಡಿದೆ. ರಮ್ಯಾ ಅವರ ಬದಲಿಗೆ IAS ಅಧಿಕಾರಿ ಪ್ರಸನ್ನ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರು