ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಹಳ್ಳ ಹಿಡಿದಿದ್ದ ಪೊಲೀಸ್ ಸಬ್‌ಇನ್ಸ್ಪೆಕ್ಟರ್ (Police Sub Inspector) ಪರೀಕ್ಷೆ (Exam) ಕೊನೆಗೂ ಮಂಗಳವಾರ ಸಾಂಗವಾಗಿ ನಡೆದಿದೆ.
ಕೊನೆಯ ಬಾರಿ 2020ರಲ್ಲಿ 545 ಪಿಎಸ್‌ಐ ಹುದ್ದೆಗಳ ಪರೀಕ್ಷೆ ನಡೆದು ಅಕ್ರಮವಾದ ಹಿನ್ನೆಲೆ ಸಿಐಡಿ ತನಿಖೆ ನಡೆದು ನೇಮಕಾತಿ (Recruitment) ಎಡಿಜಿಪಿ ಸೇರಿ ನೂರಾರು ಜನ ಜೈಲು ಪಾಲಾಗಿದ್ದರು. ನ್ಯಾಯಬದ್ಧವಾಗಿ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂದು ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಪೊಲೀಸ್ ನೇಮಕಾತಿ ಬೋರ್ಡ್ ಹೊರತುಪಡಿಸಿ ಬೇರೆ ಯಾವುದಾದರು ಪರೀಕ್ಷಾ ಪ್ರಾಧಿಕಾರದಿಂದ ಮರುಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಇದನ್ನೂ ಓದಿ: ಶ್ರೀರಾಮ ಅವರಪ್ಪನ ಮನೆ ಆಸ್ತಿನಾ? – ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಡಿಕೆಶಿ
117 ಸೆಂಟರ್‌ಗಳಲ್ಲಿ 4,4000 ಅಭ್ಯರ್ಥಿಗಳು ಇಂದು (ಮಂಗಳವಾರ) ಪರೀಕ್ಷೆ ಬರೆದಿದ್ದಾರೆ. ಎಕ್ಸಾಮ್ ಸೆಂಟರ್‌ಗೆ ಫುಲ್ ಶರ್ಟ್ ಧರಿಸಿ ಬಂದ ಅಭ್ಯರ್ಥಿಗಳ ಶರ್ಟ್ ಕಟ್ ಮಾಡಿ ಒಳಗೆ ಬಿಡಲಾಗಿದೆ. ಬೆಲ್ಟ್ ಶೂ ಧರಿಸಿ ಬಂದವರನ್ನೂ ಕೂಡ ಒಳಗೆ ಬಿಟ್ಟಿಲ್ಲ. ಬಳೆ ಧರಿಸಿ ಬಂದ ಮಹಿಳಾ ಅಭ್ಯರ್ಥಿಗಳಿಂದ ಬಳೆ ತೆಗೆಸಲಾಗಿದೆ. ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸಹ ಒಳಗೆ ಬಿಟ್ಟಿಲ್ಲ. ಇದನ್ನೂ ಓದಿ: 11 ದಿನಗಳ ಕಾಲ ಮೋದಿ ಉಪವಾಸ ಮಾಡಿದ್ದೇ ಅನುಮಾನ: ವೀರಪ್ಪ ಮೊಯ್ಲಿ
ಪರೀಕ್ಷೆ ನಡೆಯುವ ಸೆಂಟರ್‌ನ 200 ಮೀಟರ್‌ವರೆಗೆ 144 ಸೆಕ್ಷನ್ ಜಾರಿ ಮಾಡಿ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. 9:30ಕ್ಕೆ ಅಭ್ಯರ್ಥಿಗಳನ್ನು ಎಕ್ಸಾಮ್ ಹಾಲ್‌ಗೆ ಬಿಟ್ಟು ಎರಡೂ ಪತ್ರಿಕೆಗಳು ಮುಗಿದ ಬಳಿಕ ಮಧ್ಯಾಹ್ನ 2:30ಕ್ಕೆ ಹೊರಗೆ ಬಿಡಲಾಗಿದೆ. ಈ ಮೂಲಕ ಈ ಬಾರಿ ಯಾವುದೇ ಅಕ್ರಮ, ಅನುಮಾನ ಗೊಂದಲಗಳಿಗೆ ಅವಕಾಶ ನೀಡದಂತೆ ಕೆಇಎ (KEA) ಪರೀಕ್ಷೆ ನಡೆಸಿದೆ. ಇದನ್ನೂ ಓದಿ: ಬಿಜೆಪಿಯವರು ಬೀದಿ ಬೀದಿಯಲ್ಲಿ ರಾಮನನ್ನು ಆಟ ಆಡಿಸಿದ್ದಾರೆ: ಮಧು ಬಂಗಾರಪ್ಪ