ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ಅರ್ಜಿ ಸಲ್ಲಿಸದ ಹಾಗೂ ಯುಜಿನೀಟ್-24 ರಲ್ಲಿ (UG NEET – 24) ಅರ್ಹತೆ ಪಡೆದವರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬುಧವಾರ ತನ್ನ ವೆಬ್‌ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.
ರಾಜ್ಯ ಮತ್ತು ಹೊರ ರಾಜ್ಯದ ಅರ್ಹ ಅಭ್ಯರ್ಥಿಗಳು ಮಾತ್ರ ಆಗಸ್ಟ್ 9ರ ಒಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅದರ ನಂತರ ಬರುವವರಿಗೆ ಅವಕಾಶ ಇರುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ (H Prasanna) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ನೀಡಲು ಮುಹೂರ್ತ ಫಿಕ್ಸ್: ಸಿಎಂ ವಿರುದ್ಧ ಆರ್.ಅಶೋಕ್ ವಾಗ್ದಾಳಿ
Advertisement
Advertisement
ಕೆಇಎ ವೆಬ್ ಪೋರ್ಟಲ್‌ನಲ್ಲಿ (KEA Web Portal), ಯುಜಿನೀಟ್-24ಕ್ಕೆ ಹೊಸದಾಗಿ ನೋಂದಣಿ ಮಾಡುವ ಲಿಂಕ್ ಅನ್ನು ಆಯ್ಕೆ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಬೇಕು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ತಲೆಗೂದಲು ಕಟ್, ರಕ್ತ ಹೊರತೆಗೆತ, ಕಠಿಣ ವ್ಯಾಯಾಮ, ಆಹಾರದಿಂದ ದೂರ – ತೂಕ ಇಳಿಸಲು ಏನೆಲ್ಲಾ ಮಾಡಿದ್ರು ವಿನೇಶ್?
Advertisement
ಕೆಇಎ ಮೂಲಕವೇ ಹಂಚಿಕೆ:
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ (Ayush Courses) ಪ್ರವೇಶಕ್ಕೆ ಎಲ್ಲ ವಿಧದ (ಖಾಸಗಿ, ಎನ್‌ಆರ್‌ಐ, ಆಡಳಿತ ಮಂಡಳಿಗಳ ಸೀಟುಗಳೂ ಸೇರಿದಂತೆ) ಸೀಟುಗಳನ್ನು ಕೆಇಎ ಮೂಲಕವೇ ಹಂಚಿಕೆ ಮಾಡಲಾಗುತ್ತದೆ. ಕೊನೇ ಹಂತದಲ್ಲಿ ಬಾಕಿ ಉಳಿಯುವ ಸೀಟುಗಳನ್ನು ಕೂಡ ಕೆಇಎ ಮೂಲಕವೇ ಮಾಡಲಾಗುತ್ತದೆ. ಈ ಸಂಬಂಧ ರಾಷ್ಟ್ರೀಯ ವೈದ್ಯಕೀಯ ಮಂಡಳಿಯ (NMC) ಸ್ಪಷ್ಟ ನಿರ್ದೇಶನ ಇದೆ ಎಂದು ಪ್ರಸನ್ನ ಅವರು ತಿಳಿಸಿದರು.