ಬಾಲಿವುಡ್ ನಟ ಸಂಜಯ್ ದತ್ (Sanjay Dutt) ‘ಕೆಜಿಎಫ್ 2’ (KGF 2) ಚಿತ್ರದ ಸಕ್ಸಸ್ ನಂತರ ಕನ್ನಡದ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಿದ್ದಾರೆ. ಹೀಗಿರುವಾಗ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಕೆಡಿ’ ಸಿನಿಮಾದ ಲುಕ್ ರಿವೀಲ್ ಆಗಿದೆ. ‘ಢಾಕ್ ದೇವ’ನಾಗಿ ಅಧೀರ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ‘ಕೆಡಿ’ ಸಿನಿಮಾದಲ್ಲಿ (KD Film) ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ತಲೆಗೆ ಪೊಲೀಸ್ ಹ್ಯಾಟ್ ಧರಿಸಿ ವಿಭಿನ್ನ ಲುಕ್‌ನಲ್ಲಿ ನಟ ಢಾಕ್ ದೇವನಾಗಿ ಮಿಂಚಿದ್ದಾರೆ. ನಟನ ಲುಕ್‌ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
View this post on Instagram
ಅಂದಹಾಗೆ, 70ರ ದಶಕದ ಗ್ಯಾಂಗ್‌ಸ್ಟರ್ ಕುರಿತ ನೈಜ ಕಥೆಯನ್ನೇ ಸಿನಿಮಾ ರೂಪದಲ್ಲಿ ತಂದಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ರೆಟ್ರೋ ಲುಕ್‌ನಲ್ಲಿ ಈ ‘ಕೆಡಿ’ ಚಿತ್ರ ಮೂಡಿ ಬಂದಿದೆ.ಮಲ್ಟಿ ಸ್ಟಾರ್‌ಗಳು ಇರುವ ಈ ಸಿನಿಮಾ ಭಿನ್ನವಾಗಿ ಮೂಡಿ ಬಂದಿದೆ.
ಧ್ರುವ ಸರ್ಜಾ, ಸಂಜಯ್ ದತ್ ಜೊತೆ ರೀಷ್ಮಾ ನಾಣಯ್ಯ, ರವಿಚಂದ್ರನ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಬಹುಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದ್ದು, ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿದೆ.