ಧ್ರುವ ಸರ್ಜಾ (Dhruva Sarja) ಹಾಗೂ ಪ್ರೇಮ್ (Prem) ಕಾಂಬಿನೇಷನ್‌ನ ಕೆಡಿ (KD) ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಎರಡು ವರ್ಷಗಳಿಂದ ಕೆಡಿ ಸಿನಿಮಾ ಯಾವಾಗ ಬರುತ್ತೆ ಅಂತ ಕಾದು ಕಾದು ಸುಸ್ತಾಗಿದ್ದ ಅಭಿಮಾನಿಗಳಿಗೆ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಚಿತ್ರತಂಡ.
ಹೌದು, ಕೆಡಿ ಸಿನಿಮಾ 2026ರ ಏಪ್ರಿಲ್ 30ರಂದು ತೆರೆಗೆ ಬರಲಿದೆ. ಈ ಘೋಷಣೆಯ ಜೊತೆ ಸಿನಿಮಾದ 3ನೇ ಹಾಡು `ಅಣ್ತಮ್ಮ ಜೋಡೆತ್ತು ಕಣೋʼ ಬಿಡುಗಡೆಯಾಗಿದೆ. ಮಂಜುನಾಥ್ ಸಾಹಿತ್ಯವಿರುವ ಈ ಹಾಡಿಗೆ ಧ್ವನಿಯಾಗಿದ್ದಾರೆ ನಿರ್ದೇಶಕ ಪ್ರೇಮ್. ಅಣ್ಣ ತಮ್ಮಂದಿರ ಬಾಂಧವ್ಯದ ಕುರಿತಾದ ಹಾಡು ರಿಲೀಸ್ ಆಗಿದು, ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಇದನ್ನೂ ಓದಿ: ಕಾವ್ಯ ಮನೆಯವರಿಂದ ನಿಯಮ ಉಲ್ಲಂಘನೆ; ಹೊರ ಕಳಿಸಿದ್ರಾ ಬಿಗ್ ಬಾಸ್? – ಕಣ್ಣೀರಿಟ್ಟ ಕಾವ್ಯ
ಬಹುದೊಡ್ಡ ತಾರಾಗಣವಿರುವ ಕೆಡಿ ಸಿನಿಮಾದ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಅಣ್ತಮ್ಮ ಜೋಡೆತ್ತು ಕಣೋ ಹಾಡು ಕೂಡಾ ಕಮಾಲ್ ಮಾಡಲಿದೆ. ಧ್ರುವ ಸರ್ಜಾ, ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಸೇರಿದಂತೆ ದೊಡ್ಡ ತಾರಾಗಣವಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ತಯಾರಾಗಿರುವ ಕೆಡಿ ಸಿನಿಮಾ ಏಪ್ರಿಲ್ ತಿಂಗಳಾಂತ್ಯಕ್ಕೆ ತೆರೆಗೆ ಬರಲಿದೆ.

