‘ಮಾರ್ಟಿನ್’ ನಟ ಧ್ರುವ ಸರ್ಜಾ (Dhruva Sarja) ಸಿನಿಮಾದಲ್ಲಿ ಅದಷ್ಟೇ ಬ್ಯುಸಿ ಇದ್ದರೂ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಕೆಲಸದ ನಡುವೆಯೂ ಕುಟುಂಬಕ್ಕೂ ಸಮಯ ಮೀಸಲಿಡುತ್ತಾರೆ. ಈಗ ಪತ್ನಿ ಮತ್ತು ಮಕ್ಕಳೊಂದಿಗಿನ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸ್ವಿಮ್ ಸೂಟ್ ಧರಿಸಿ ಹಾಟ್ ಅವತಾರ ತಾಳಿದ ಚೈತ್ರಾ ಆಚಾರ್
Advertisement
2025ರ ಹೊಸ ವರ್ಷಕ್ಕೆ ಸ್ವಾಗತಿಸುತ್ತಾ ಧ್ರುವ ಫ್ಯಾಮಿಲಿ ಫೋಟೋವೊಂದನ್ನು ಶೇರ್ ಮಾಡಿ, 2024ರ ಎಲ್ಲಾ ಸುಂದರ ವಿಷಯಗಳಿಗಾಗಿ ದೇವರಿಗೆ ಧನ್ಯವಾದಗಳು ಎಂದು ಅಡಿಬರಹ ನೀಡಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್ ಕ್ಯೂಟ್ ಫ್ಯಾಮಿಲಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
Advertisement
View this post on Instagram
ಇನ್ನೂ ಮಾರ್ಟಿನ್ ಸಿನಿಮಾದ ಬಳಿಕ ‘ಕೆಡಿ’ (KD) ಚಿತ್ರದ ರಿಲೀಸ್‌ಗೆ ಧ್ರುವ ಎದುರು ನೋಡ್ತಿದ್ದಾರೆ. ಸದ್ಯ ಈ ಚಿತ್ರದ ‘ಶಿವ ಶಿವ’ ಎಂಬ ಸಾಂಗ್ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.
Advertisement
Advertisement
ಈ ಸಿನಿಮಾದಲ್ಲಿ ಧ್ರುವಗೆ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ನಾಯಕಿಯಾಗಿದ್ದಾರೆ. ಧ್ರುವ ಜೊತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಸೇರಿದಂತೆ ಅನೇಕರು ನಟಿಸಿದ್ದಾರೆ.