ಬೆಂಗಳೂರು: ಮಂಡ್ಯ, ಮೈಸೂರಲ್ಲಿರುವ ಮೃತ್ರಿ ಕಗ್ಗಂಟು ವಿಚಾರದ ಗೊಂದಲವನ್ನ ಕೂಡಲೇ ಬಗೆಹರಿಸಬೇಕು. ಯಾವುದೇ ಕಾರಣಕ್ಕೂ ಮೈತ್ರಿಗೆ ಧಕ್ಕೆ ಆಗಬಾರದು ಎಂದು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೈ ನಾಯಕರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಮಂಡ್ಯ, ಮೈಸೂರಲ್ಲಿರುವ ಗೊಂದಲವನ್ನ ಕೂಡಲೇ ಬಗೆಹರಿಸಿ. ಹೈಕಮಾಂಡ್ ತೀರ್ಮಾನ ಪಾಲನೆಯಾಗುತ್ತಿಲ್ಲ ಎಂದು ಕೆ.ಸಿ ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಡ್ಯದ ನಮ್ಮ ಮುಖಂಡರಿಗೆ ಸೂಚನೆ ಕೊಡಿ. ಯಾವುದೇ ಕಾರಣಕ್ಕೂ ಮೈತ್ರಿಗೆ ಧಕ್ಕೆ ಆಗಬಾರದು ಎಂದು ಮುಖಂಡರುಗಳಿಗೆ ವೇಣುಗೋಪಾಲ್ ಸೂಚನೆ ನೀಡಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಸಮಾವೇಶವನ್ನು ಸಮರ್ಥವಾಗಿ, ಅದ್ಧೂರಿಯಾಗಿ ನಡೆಯುವಂತೆ ಜಾಗೃತೆ ವಹಿಸಿ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಇವತ್ತು ಸಭೆ ಕರೆದಿದ್ದೇನೆ, ಎಲ್ಲವನ್ನೂ ಸರಿ ಮಾಡುತ್ತೇನೆ. ಮೈಸೂರಲ್ಲಿಯೂ ಗೊಂದಲ ಇದೆ. ಸರಿ ಮಾಡುವ ಪ್ರಯತ್ನ ನಡೆದಿದೆ ಎಂದು ಮಾಜಿ ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತ ತುಮಕೂರಲ್ಲಿಯೂ ಗೊಂದಲವಿತ್ತು. ಅದನ್ನು ಸರಿ ಮಾಡಿದ್ದೇವೆ. ಈಗ ದೇವೇಗೌಡರ ಗೆಲುವಿಗೆ ಯಾವುದೇ ಅಡ್ಡಿಯಿಲ್ಲ ಎಂದು ಡಿಸಿಎಂ ಪರಮೇಶ್ವರ್ ಮಾಹಿತಿಯನ್ನು ವೇಣುಗೋಪಾಲ್ ಅವರಿಗೆ ತಿಳಿಸಿದ್ದಾರೆ.
ಏನಿದು ಗೊಂದಲ?
ಹೈಕಮಾಂಡ್ ಸೂಚನೆ ಮೇರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿದೆ. ನಾಯಕರ ಮಧ್ಯೆ ಮೈತ್ರಿಯಾಗಿದ್ದರೂ ಕಾರ್ಯಕರ್ತರ ನಡುವೆ ಮೈತ್ರಿಯಾಗಿಲ್ಲ. ಪರಿಣಾಮ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಿಖಿಲ್ ಪರ ಪ್ರಚಾರಕ್ಕೆ ಹಿಂದೇಟು ಹಾಕಿದ್ದರೆ, ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ವಿಜಯ್‍ಶಂಕರ್ ಪರವಾಗಿ ಪ್ರಚಾರ ನಡೆಸಲು ಒಪ್ಪುತ್ತಿಲ್ಲ. ಹೀಗಾಗಿ ಮೈತ್ರಿ ಈಗ ಕಗ್ಗಂಟಾಗಿದ್ದು, ದೋಸ್ತಿ ನಾಯಕರು ಎಷ್ಟೇ ಸಭೆ ಮಾಡಿದರೂ ಕಾರ್ಯಕರ್ತರು ಮಾತ್ರ ಒಟ್ಟಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಈ ಮೃತ್ರಿ ಗೊಂದಲಕ್ಕೆ ಹೈಕಮಾಂಡ್ ಎಂಟ್ರಿಯಾಗಿದೆ.
https://www.youtube.com/watch?v=gOiC_apXmQg