ಬೆಂಗಳೂರು: ಕೆಲ ಪ್ರಾದೇಶಿಕ ಪಕ್ಷಗಳು ಕಳೆದ ಚುನಾವಣೆಯಲ್ಲಿ ತನ್ನ ನಿಲುವು ಏನು ಎಂಬುದನ್ನು ಸಾಬೀತು ಮಾಡಿವೆ ಎಂದು ಹೇಳುವ ಮುಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ( K C Venugopal) ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿ (BJP) ಜೊತೆ ಹೆಚ್‍ಡಿಕೆ (HD Kumaraswamy) ದೋಸ್ತಿ ಫಿಕ್ಸ್ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಜೆಡಿಎಸ್ ಅನ್ನು ಕಳೆದ ಚುನಾವಣೆಯಲ್ಲೆ ನೋಡಿದ್ದೇವೆ ಅವರು ಯಾವ ಫ್ಲಾಟ್ ಫಾರಂ ನಲ್ಲಿ ಇದ್ದಾರೆ ಎಂದು. ಸೆಕ್ಯುಲರಿಸಂ ಮೇಲೆ ನಂಬಿಕೆ ಇರುವ ಹಾಗೂ ಸರ್ವಾಧಿಕಾರ ವಿರೋಧಿಸುವ ಯಾವ ಪಕ್ಷವನ್ನಾದರೂ ನಾವು ಸ್ವಾಗತಿಸುತ್ತೇವೆ ಎಂದರು.
Advertisement
Advertisement
ಜೂನ್ 23 ರಂದು ಪಾಟ್ನಾದಲ್ಲಿ ಯಶಸ್ವಿ ಸಭೆ ನಡೆಸಿದ್ದೆವು. ಇದು ಅದರ ಮುಂದುವರಿದ ಭಾಗ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. 26 ರಾಜಕೀಯ ಪಕ್ಷಗಳು ಸಭೆಯಲ್ಲಿ ಭಾಗವಹಿಸಲಿವೆ. ಇಂದು ಸಂಜೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ನಾಯಕರಿಗೆ ಬೋಜನ ಕೂಟ ಏರ್ಪಡಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ತಾಕತ್ತಿದ್ದರೆ ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಿ, 5 ಸ್ಥಾನ ಗೆದ್ದು ತೋರಿಸಲಿ – HDK ಬಹಿರಂಗ ಸವಾಲ್
Advertisement
Advertisement
ಕೇಂದ್ರ ಸರ್ಕಾರದ (Central Govt) ನಡೆಯ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ವೇದಿಕಯಲ್ಲಿ ಸೇರುತ್ತಿದ್ದೇವೆ. ಕೇಂದ್ರ ಸರ್ಕಾರದ ಸೇಡಿನ ನಡೆಗೆ ರಾಹುಲ್ ಗಾಂಧಿ ಅವರನ್ನ ಸಂಸತ್ ಸ್ಥಾನದಿಂದ ವಜಾ ಮಾಡಲಾಗಿದೆ. ಮಣಿಪುರದಲ್ಲಿ ಜನ ಸಾಮಾನ್ಯರು ಕಷ್ಟದಲ್ಲಿ ಸಿಲುಕಿದರು ಕೇಂದ್ರ ಗಮನ ಹರಿಸಲಿಲ್ಲ. ಈ ಸಭೆಯಲ್ಲಿ ಭವಿಷ್ಯದ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇವೆ. ಲೋಕಸಭಾ ಚುನಾವಣೆಯ ತಂತ್ರಗಾರಿಕೆ ಬಗ್ಗೆಯು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
Web Stories