ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಿರೂಪಣೆಯ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮ ಪುನಃ ಆರಂಭಗೊಂಡಿದೆ. ಈ ಬಾರಿಯೂ ಕಾರ್ಯಕ್ರಮದಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದ್ದು, ‘ಕರ್ಮವೀರ್’ ಎಂಬ ವಿಶೇಷ ಸಂಚಿಕೆಗಳು ಈ ಬಾರಿ ಪ್ರಸಾರಗೊಳ್ಳಲಿವೆ. ಮೊದಲ ಕರ್ಮವೀರ್ ಸಂಚಿಕೆ ಶುಕ್ರವಾರ ಪ್ರಸಾರವಾಗಿದ್ದು, ಸ್ಪರ್ಧಿಯಾಗಿ ಆಗಮಿಸಿರುವ ಸಮಾಜ ಸೇವಕಿ ಸಿಂಧುತಾಯಿ ಸಪ್ಕಾಲ್ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಅಮಿತಾಬ್ ಬಚ್ಚನ್ ವಿಶೇಷ ಅತಿಥಿಯನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ‘ಅನಾಥ ಮಕ್ಕಳ ತಾಯಿ’ ಎಂದು ಗುರುತಿಸಿಕೊಳ್ಳುವ ಸಿಂಧುತಾಯಿ ಈ ಬಾರಿ ಕೌನ್ ಬನೇಗಾ ಕರೋಡಪತಿಗೆ ಅಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಂಧುತಾಯಿ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ನೋಡುಗರೊಂದಿಗೆ ಹಂಚಿಕೊಂಡಿದ್ದಾರೆ. ಕೆಬಿಸಿಯಲ್ಲಿ ಸಿಂಧುತಾಯಿ ತಮ್ಮ ಕಥೆಯನ್ನು ಹೇಳಿದಾಗ ಕೇಳುಗರ ರೋಮ ರೋಮಾಂಚನವಾಗಿದೆ.
Advertisement
Sindhutai's struggle resulted in a better life for thousands of orphans. Hear her story in her own words on #KBC, tonight at 9 PM.@SrBachchan pic.twitter.com/UfTanHr0H2
— sonytv (@SonyTV) August 23, 2019
Advertisement
ನಾನು 20 ವರ್ಷದವಳಿದ್ದಾಗ ಅತ್ತೆ ನನ್ನನ್ನು ಮನೆಯಿಂದ ಹೊರಹಾಕಿದರು. 10 ದಿನದ ಮಗಳು ಮಮತಾಳೊಂದಿಗೆ ಮನೆಯಿಂದ ಹೊರಬಂದಾಗ ಅಮ್ಮ ಸಹ ನನ್ನನ್ನು ಸೇರಿಸಿಕೊಳ್ಳಲಿಲ್ಲ. ಪುಟ್ಟ ಕಂದನನ್ನು ಕರೆದುಕೊಂಡು ಎಲ್ಲಿಗೆ ಹೋಗೋದು? ಎಲ್ಲಿ ಇರಬೇಕು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡವು. ಕೊನೆಗೆ ರೈಲಿನಲ್ಲಿ ಹಾಡು ಹಾಡುವ ಜೀವನ ಆರಂಭಿಸಿದೆ. ಹಗಲಿನಲ್ಲಿ ರೈಲಿನಲ್ಲಿ ಮಗಳೊಂದಿಗೆ ಹಾಡು ಹೇಳಿ, ರಾತ್ರಿ ಸ್ಮಶಾನದಲ್ಲಿ ಉಳಿದುಕೊಳ್ಳುತ್ತಿದೆ. ಒಮ್ಮೆ ದೇಶದಲ್ಲಿ ಎಷ್ಟೋ ಮಕ್ಕಳಿಗೆ ಅಮ್ಮ ಇರಲ್ಲ. ಅಂತಹ ಅನಾಥ ಮಕ್ಕಳಿಗೆ ಅಮ್ಮನ ಅವಶ್ಯಕತೆ ಇರುತ್ತದೆ. ಈ ಯೋಚನೆ ಬಂದ ದಿನವೇ ಅನಾಥ ಮಕ್ಕಳನ್ನು ನನ್ನ ಜೊತೆ ಇರಿಸಿಕೊಳ್ಳಲು ಆರಂಭಿಸಿದೆ ಎಂದು ಸಿಂಧುತಾಯಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
Advertisement
The movie portrayed Sindhutai's life story and how her nurturing brought about a positive change in the life of many orphan children. Watch #KBC, tonight at 9 PM. @SrBachchan pic.twitter.com/cUvgkIC8UY
— sonytv (@SonyTV) August 23, 2019
Advertisement
ಇದೂವರೆಗೂ ಸಿಂಧುತಾಯಿ 1,200 ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ. ಸದ್ಯ 36 ಸೊಸೆಯಂದಿರು, 272 ಅಳಿಯಂದಿರು ಮತ್ತು 450ಕ್ಕೂ ಹೆಚ್ಚು ಮೊಮ್ಮಕ್ಕಳೊಂದಿಗೆ ವಾಸವಾಗಿದ್ದಾರೆ. ಯಾರಿಗೆ ತಾಯಿ ಇಲ್ಲವೋ ಅವರಿಗೆಲ್ಲ ನಾನು ಅಮ್ಮನಾಗುತ್ತಾನೆ ಎಂದು ಸಿಂಧುತಾಯಿ ಹೇಳುತ್ತಿರುತ್ತಾರೆ. ರೈಲ್ವೇ ಟ್ರ್ಯಾಕ್ ನಲ್ಲಿ ಸಿಕ್ಕ ದೀಪಕ್ ಸಿಂಧುತಾಯಿ ದತ್ತು ಪಡೆದ ಮೊದಲ ಮಗು.
And here comes the Hooter! Well that's sad but Sindhutai played wonderfully!#KBC11 #KBCKaramVeer
— sonytv (@SonyTV) August 23, 2019
ಸಿಂಧುತಾಯಿ ಅವರ ಸೇವೆಗೆ 750ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ. 2013ರಲ್ಲಿ ಐಕಾನಿಕ್ ಮದರ್ ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಸಿಂಧುತಾಯಿ ಅವರನ್ನು ಗೌರವಿಸಲಾಗಿದೆ. 2010ರಲ್ಲಿ ಮಹಾರಾಷ್ಟ್ರ ಸರ್ಕಾರದ ಅಹಿಲ್ಯಾಬಾಯಿ ಹೋಲ್ಕರ್, 2012ರಲ್ಲಿ ಸಿಎನ್‍ಎನ್-ಐಬಿಎನ್ ಮತ್ತು ರಿಲಯನ್ಸ್ ಫೌಂಡೇಶನ್ ವತಿಯಿಂದ ನೀಡಲಾಗುವ ‘ರಿಯಲ್ ಹೀರೋ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2018ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂ ದ್ ಅವರು ‘ನಾರಿ ಶಕ್ತಿ’ ಅವಾರ್ಡ್ ನೀಡಿ ಗೌರವಿಸಲಾಗಿದೆ.
WOW!! Sindhutai won Rs. 25,00,000!! RT to show your love and support to her #KBC11 #KBCKaramVeer
— sonytv (@SonyTV) August 23, 2019
ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಸಿಂಧುತಾಯಿ ಮಗಳು ಮಮತಾ ಜೊತೆ ಸೀಟ್ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಿಂಧುತಾಯಿ 25 ಲಕ್ಷ ರೂ. ಗಳಿಸಿದ್ದಾರೆ.