ಬೆಂಗಳೂರು: ಉಪ ಚುನಾವಣೆ ಮುಗಿದ ಬಳಿಕ ಪರಾಜಿತ ಅಭ್ಯರ್ಥಿಗಳು ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ, ಸೋಲಿಗೆ ಇವಿಎಂ ಹ್ಯಾಕ್ ಅಂತಾ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇವಿಎಂ ಹ್ಯಾಕ್ ಮಾಡುವ ಮೂಲಕ ಏಕಚಕ್ರಾಧಿಪತ್ಯ ಸ್ಥಾಪನೆಗೆ ಮುಂದಾಗಿದ್ದಾರೆ.
ನನ್ನ ಸೋಲಿನ ಬಳಿಕ ಒಂದು ದಿನ ಸಿದ್ದರಾಮಯ್ಯನವರ ಮನೆಗೆ ಹೋದಾಗ ಇಂಜಿನಿಯರ್ ಕರೆಸಿ ಇವಿಎಂ ಮಿಷನ್ ಅನ್ನು ಚೆಕ್ ಮಾಡಿಸಿದ್ರು. ಇಂಜಿನಿಯರ್ ನಿಮಗೆ ಎಷ್ಟು ಗೆಲ್ಲಬೇಕು ಅಂತಾ ಕೇಳಿದರು. ಆಗ ಸಿದ್ದರಾಮಯ್ಯನವರು 7 ಕಾಂಗ್ರೆಸ್ ಮತ್ತು 3 ಬಿಜೆಪಿ ಬರಲಿ ಅಂತಾ ಬಟನ್ ಒತ್ತಿದರು. ಆಗ ಅಲ್ಲಿ ಅಷ್ಟೇ ರಿಸಲ್ಟ್ ಬಂತು. ಆಗ ಬಿಜೆಪಿ ಅವರು ಇವಿಎಂ ಹ್ಯಾಕ್ ಮಾಡಿ ಗೆದ್ದಿದ್ದಾರೆ ಅಂತಾ ಸಿದ್ದರಾಮಯ್ಯನವರೇ ಅನುಮಾನ ವ್ಯಕ್ತಪಡಿಸಿದರು.
ಅನರ್ಹರೆಲ್ಲರು ಇವಿಎಂ ಹ್ಯಾಕ್ ಮಾಡೇ ಗೆದ್ದಿರೋದು ಅಂತಾ ಕೆಬಿ ಕೋಳಿವಾಡ ಅವರು ಆರೋಪ ಮಾಡಿದ್ದಾರೆ. ಸುಪ್ರೀಂಕೋರ್ಟ್ ಅವರನ್ನ ಅನರ್ಹರು ಅಂತಾ ಹೇಳಿದೆ. ಈ ರೀತಿ ಇರಬೇಕಾದರೆ ಮೂವತ್ತು, ನಲವತ್ತು ಸಾವಿರ ಅಂತರದಲ್ಲಿ ಗೆಲ್ಲೋದಕ್ಕೆ ಹೇಗೆ ಸಾಧ್ಯ. ಇವಿಎಂ ಹ್ಯಾಕ್ ಮಾಡಿ ಅನರ್ಹರೆಲ್ಲಾ ಗೆದ್ದಿರೋದು ಎಂದು ಆರೋಪಿಸಿದರು
ಏಕ ಚಕ್ರಾಧಿಪತ್ಯ ಸ್ಥಾಪಿಸಬೇಕು ಅಂತಾ ಮೋದಿ ಮತ್ತು ಅಮಿತ್ ಶಾ ಈ ರೀತಿ ಇವಿಎಂ ಹ್ಯಾಕ್ ಮಾಡಿ ಗೆಲ್ಲುತ್ತಿದ್ದಾರೆ. ದೇಶಾದ್ಯಂತ ಇವಿಎಂ ವ್ಯವಸ್ಥೆ ಕೊನೆಯಾಗಬೇಕು. ಬ್ಯಾಲೆಡ್ ಪೇಪರ್ ಜಾರಿಗೆ ಬರಬೇಕು. ಇವಿಎಂ ಹ್ಯಾಕ್ ಆಗಿದೆ ಅಂತಾ ಇಡಿ ಕಾಂಗ್ರೆಸ್ ಪಕ್ಷವೇ ಹೇಳ್ತಿದೆ. ಇದರ ವಿರುದ್ಧ ಜನಾಂದೋಲನ ಸ್ಟಾರ್ಟ್ ಮಾಡುತ್ತೇವೆ. ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಎಲ್ಲಾ ರಾಷ್ಟ್ರದಲ್ಲೂ ಇವಿಎಂ ಬಂದ್ ಆದರೂ ನಮ್ಮ ದೇಶದಲ್ಲಿ ಇದೆ. ಮುಂದಿನ ದಿನಗಳಲ್ಲಿ ಇವಿಎಂ ವಿರುದ್ಧ ಹೋರಾಟ ಮುಂದುವರಿಸುತ್ತೆವೆ ಎಂದರು.