– ರಕ್ಷಣಾ ತಂಡಕ್ಕೆ ಕೈಮುಗಿದು ಧನ್ಯವಾದ ಅರ್ಪಿಸಿದ ಐದಾಲಿ
ಕಾರವಾರ: ಕುಮಟಾ ತಾಲೂಕಿನ ಕುಡ್ಲೇ ಬೀಚ್‌ನಲ್ಲಿ (Kudle Beach) ಮುಳುಗುತಿದ್ದ ವಿದೇಶಿ ಮಹಿಳೆಯನ್ನು (Woman) ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.
ಕಜಕಿಸ್ತಾನ ಮೂಲದ (Kazakhstan) ಐದಾಲಿ (25) ರಕ್ಷಣೆಗೊಳಗಾದ ಮಹಿಳೆ. ದಂಪತಿ ಕುಡ್ಲೆ ಬೀಚ್‌ನಲ್ಲಿ ಈಜಲು ಹೋದಾಗ ಐದಾಲಿ ಅಲೆಗೆ ಸಿಲುಕಿದ್ದರು. ಕೂಡಲೇ ಅಲ್ಲಿದ್ದ ರಕ್ಷಣಾ ಸಿಬ್ಬಂದಿ ಅವರುನ್ನು ಕಾಪಾಡಿದ್ದಾರೆ. ಇದನ್ನೂ ಓದಿ: ಮುರ್ಡೇಶ್ವರ ಕಡಲಲ್ಲಿ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ವ್ಯಕ್ತಿ
ರಕ್ಷಣಾ ಸಿಬ್ಬಂದಿ ಮಂಜುನಾಥ್ ಹರಿಕಂತ್ರ, ಗಿರೀಶ್ ಗೌಡ, ನಾಗೇಂದ್ರ ಎಂಬವರು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಗೋಕರ್ಣ (Gokarna ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಗೆಳೆಯನ ಬರ್ತ್‌ಡೇ ಸಂಭ್ರಮದಲ್ಲಿದ್ದ ಯುವಕ ಹೊಳೆಗೆ ಕಾಲುಜಾರಿ ಬಿದ್ದು ನೀರುಪಾಲು


