ಕಿರುತೆರೆಯ ಬ್ಯೂಟಿ ಕಾವ್ಯಶ್ರೀ, ಮಂಗಳಗೌರಿ(Mangalagowri) ಆಗಿ ಮೋಡಿ ಮಾಡಿದ್ದರು. ಇದೀಗ ದೊಡ್ಮನೆಯಲ್ಲಿ ಕಮಾಲ್ ಮಾಡುತ್ತಿರುವ ಕಾವ್ಯ ಬಿಗ್ ಬಾಸ್‌ಗೆ(Bigg Boss) ಬಹುದೊಡ್ಡ ಬೇಡಿಕೆ ಇಟ್ಟಿದ್ದಾರೆ. ಎಲ್ರೂ ಜೋಡಿಯಾಗಿ ಓಡಾಡುತ್ತಾರೆ. ನಂಗೂ ಜೋಡಿ ಬೇಕು ಎಂದು ಹೊಸ ಬೇಡಿಕೆ ಇಟ್ಟಿದ್ದಾರೆ.
ಕಾವ್ಯಶ್ರೀ ಗೌಡ(Kavyashree Gowda) ತಮ್ಮದೇ ಶೈಲಿಯಲ್ಲಿ ದೊಡ್ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಎಲ್ಲರ ಜೊತೆ ಬರೆಯುತ್ತಾ ಹಾಸ್ಯಪ್ರಜ್ಞೆಯಿಂದ ಮನೆಯವರ ಮನಗೆದ್ದಿದ್ದಾರೆ. ಇತ್ತೀಚೆಗೆ ಕಾವ್ಯ ಆಡಿರುವ ಮಾತು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಸಾಮಾನ್ಯವಾಗಿ ಸ್ಪರ್ಧಿಗಳ ಮಧ್ಯೆ ಕಂಫರ್ಟ್ ಜೋನ್ ಇದ್ದ ಕಡೆ ಜೋಡಿಯಾಗಿ ಕಾಲ ಕಳೆಯುತ್ತಾರೆ. ಈ ವಿಷ್ಯವಾಗಿ ಇದೀಗ ರಾಕೇಶ್, ಕಾಲೆಳೆದು ಕಾಮಿಡಿ ಮಾಡಿದ್ದಾರೆ. ಇದನ್ನೂ ಓದಿ:ಭಾರತ್ ಜೋಡೋ ಪಾದಯಾತ್ರೆ – ಕೈ-ಕೈ ಹಿಡಿದು ಹೆಜ್ಜೆ ಹಾಕಿದ ರಾಹುಲ್, ರಮ್ಯಾ
ಕಾವ್ಯಶ್ರೀ ಮತ್ತು ರಾಕೇಶ್ ನಡುವೆ ಒಳ್ಳೆಯ ಬಾಂದವ್ಯವಿತ್ತು. ರಾಕಿ ಅನ್ನು ಅಣ್ಣ ಎಂದು ಕರೆಯುತ್ತಿದ್ದರು. ಆದರೆ ಈಗ ರಾಕೇಶ್ ಹೆಚ್ಚಾಗಿ ಅಮೂಲ್ಯ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಎಲ್ಲರ ಗಮನಕ್ಕೂ ಬಂದಿದೆ ಇದೇ ವಿಷಯದ ಬಗ್ಗೆ ಕಾವ್ಯಶ್ರೀ(Kavyashree Gowda) ಹಾಸ್ಯಮಯವಾಗಿ ಮಾತನಾಡಿ ಎಲ್ಲರನ್ನೂ ನಗಿಸಿದ್ದಾರೆ.
ಇಲ್ಲಿ ಎಲ್ಲರೂ ಜೋಡಿಯಾಗಿ ಓಡಾಡುತ್ತಾರೆ. ನಂಗೂ ಒಂದು ಜೋಡಿ ಬೇಕು. ಆಟ ಆಡುವಾಗಲೂ ನಾನು ಸಿಂಗಲ್. ಗ್ರೂಪಲ್ಲಿ ಇದ್ದರೂ ನಾನು ಸಿಂಗಲ್ ಎಂದು ತಮ್ಮ ಬೇಡಿಕೆಯನ್ನ ಹಾಸ್ಯದ ರೂಪದಲ್ಲಿ ನಟಿಸಿ, ಎಲ್ಲರನ್ನೂ ನಗಿಸಿದ್ದಾರೆ. ನನಗೂ ಒಬ್ಬ ಜೋಡಿ ಬೇಕು ಎಂದು ಕಾವ್ಯ ಹೊಸ ಬೇಡಿಕೆಯನ್ನ ಇಟ್ಟಿದ್ದಾರೆ.