ಮಂಗಳೂರು: ಕೋಮು ಗಲಭೆಯಿಂದ ಹೊತ್ತಿ ಉರಿದಿದ್ದ ಮಂಗಳೂರಿನಲ್ಲಿ ಮತ್ತೊಂದು ನಿಗೂಢ ಸಾವು ಹಲವು ಅನುಮಾನ, ವಿವಾದಗಳಿಗೆ ಕಾರಣವಾಗಿದೆ. ಶಿಕ್ಷಣಕ್ಕೆ ಹೆಸರಾದ ಆಳ್ವಾಸ್ ಸಂಸ್ಥೆಯಲ್ಲಿ ಬ್ಯಾಡ್ಮಿಂಟನ್ ವಿದ್ಯಾರ್ಥಿನಿ ಕಾವ್ಯಶ್ರೀ ಸಾವು ಹತ್ತು ಹಲವು ಪ್ರಶ್ನೆಗಳನ್ನು ಎತ್ತಿದೆ.
ಈ ನಡುವೆ ವಿದ್ಯಾರ್ಥಿನಿ ಸಾವಿನ ನ್ಯಾಯಾಕ್ಕಾಗಿ ಇದೀಗ ಪ್ರತಿಭಟನೆಗಳು ಆರಂಭಗೊಂಡಿವೆ. ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರಿನ ನೆಹರೂ ಮೈದಾನದಲ್ಲಿ ಮೊಂಬತ್ತಿ ಉರಿಸಿ ಮೌನ ಪ್ರತಿಭಟನೆ ನಡೆಸಿತು. ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ, ಸಾವಿನ ತನಿಖೆಯನ್ನು ಸರಿಯಾಗಿ ನಡೆಸಬೇಕೆಂದು ಒತ್ತಾಯಿಸಿದ್ರು.
Advertisement
Advertisement
ಅಲ್ಲದೇ ಕಾವ್ಯಾ ಸಾವಿನಲ್ಲಿ ದೈಹಿಕ ಶಿಕ್ಷಕ ಪ್ರವೀಣ್ ಕುಮಾರ್ ಕೈವಾಡ ಇರೋ ಆರೋಪ ಕೇಳಿಬಂದಿದ್ರಿಂದ ಮಂಪರು ಪರೀಕ್ಷೆ ಮಾಡಬೇಕೆಂದು ಒತ್ತಾಯಿಸಿದ್ರು. ಇನ್ನು ಕಾವ್ಯಾ ನಿಗೂಢ ಸಾವಿನ ತನಿಖೆಯನ್ನು ಸೂಕ್ತವಾಗಿ ನಡೆಸಬೇಕೆಂದು ಪಿಎಫ್‍ಐ ಕಾರ್ಯಕರ್ತರು ಮೂಡಬಿದ್ರೆಯಲ್ಲಿ ಪ್ರತಿಭಟನೆ ನಡೆಸಿದ್ರು. ಇಷ್ಟೇ ಅಲ್ಲ ದೂರದ ಬಹರೈನ್‍ನಲ್ಲೂ ಪ್ರತಿಭಟನೆ ನಡೆದಿದ್ದು, ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಿಫಾ ಘಟಕ ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯಿಸಿದೆ.
Advertisement
Advertisement
ಕಾವ್ಯ ಸಾವು ಸಹಜವೋ? ಕೊಲೆಯೋ? ಎಂಬ ಪ್ರಶ್ನೆ ಮೂಡಿದ್ದು, ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದ ಬೆನ್ನಲ್ಲೇ ಆಳ್ವಾಸ್ ಶಿಕ್ಷಣ ಸಂಸ್ಥೆ ಜುಲೈ 20ರ ಹಾಸ್ಟೆಲ್‍ನ ಸಿಸಿಟಿವಿ ದೃಶ್ಯವನ್ನ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?
ದೃಶ್ಯ 1: ಬೆಳಗ್ಗೆ 6.03ಕ್ಕೆ ಕಾಲೇಜಿನ ಆವರಣದಲ್ಲಿ ಓಡಾಟ
ದೃಶ್ಯ 2: ಬೆಳಗ್ಗೆ 6.42ಕ್ಕೆ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಟ
ದೃಶ್ಯ 3: ಬೆಳಗ್ಗೆ 9.48ಕ್ಕೆ ಶಾಲೆಗೆ ಬಂದಿದ್ದು
ಮಧ್ಯಾಹ್ನ 3.34ಕ್ಕೆ ಶಾಲೆಯಿಂದ ಹೋಗುತ್ತಿರುವುದು
https://www.youtube.com/watch?v=RoCUPTp54LM
ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರೋ ಮೂಡಬಿದಿರೆಯ ಆಳ್ವಾಸ್‍ನ 10 ತರಗತಿ ವಿದ್ಯಾರ್ಥಿನಿ ಕಾವ್ಯಶ್ರೀ ಜುಲೈ 20ರಂದು ನಿಗೂಢವಾಗಿ ಸಾವನ್ನಪ್ಪಿದ್ರು. ಸ್ಪೋಟ್ರ್ಸ್ ಕೋಟಾದಲ್ಲಿ ಸೀಟ್ ಪಡೆದಿದಿದ್ದ ಕಾವ್ಯ, ಬ್ಯಾಡ್ಮಿಂಟನ್‍ನಲ್ಲಿ ನ್ಯಾಷನಲ್ ಲೆವೆಲ್ ಚಾಂಪಿಯನ್ ಆಗಿದ್ರು. ಮಗಳು ಕಾವ್ಯ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಆಳ್ವಾಸ್ ಮಾತ್ರ ದನ್ನ ಅಲ್ಲಗಳೀತಿದೆ. ಇದರ ಮಧ್ಯೆ ಜುಲೈ 20ರಂದು ಶಾಲೆಗೆ ಬಂದಿದ್ದ ಕಾವ್ಯ, ಬ್ಯಾಡ್ಮಿಂಟನ್ ಆಡಿರೋದೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನ ಕಟೀಲು ನಿವಾಸಿಯಾಗಿರೋ ಕಾವ್ಯ ಪೋಷಕರು ಕಾಲೇಜಿನಲ್ಲೇ ಕೊಲೆ ಮಾಡಲಾಗಿದೆ ಅಂತ ಆರೋಪಿಸಿದ್ರು.
ಸಾಯುವ ಮೊದಲ ದಿನ ಸಂತೋಷದಿಂದ ಮಾತನಾಡಿದವಳು, ನಾಳೆಯಿಂದ ಬೆಳಗ್ಗೆ ನಾಲ್ಕು ಗಂಟೆಯಿಂದ ಟ್ರೈನಿಂಗ್ ಬರಲು ಪಿಟಿ ಮೇಷ್ಟ್ರು ಪ್ರವೀಣ್ ತಿಳಿಸಿದ್ದಾರೆ ಅಂತ ಹೇಳಿದ್ದಳು. ಆದ್ರೆ ಆತ್ಮಹತ್ಯೆ ಮಾಡಿಕೊಂಡಳು ಅಂದ್ರೆ ನಂಬೋದಿಕ್ಕೆ ಆಗತ್ತಾ ಅಂತ ಕಾವ್ಯಾ ತಾಯಿ ಬೇಬಿ ಮತ್ತು ತಂದೆ ಲೋಕೇಶ್ ಪ್ರಶ್ನೆ ಮಾಡ್ತಿದ್ದಾರೆ. ಮಂಗಳೂರು ಕಮಿಷನರ್‍ಗೂ ಕಂಪ್ಲೆಂಟ್ ಕೊಟ್ಟಿದ್ದಾರೆ.
ಈ ನಡುವೆ ಕಾವ್ಯ ಸಾವು ಹಲವು ಪ್ರಶ್ನೆ ಹುಟ್ಟಿಹಾಕಿದೆ:
* ಹಾಸ್ಟೆಲ್‍ನೊಳಗೆ ನೇಣು ಹಾಕಲು ಸೀರೆ ಸಿಕ್ಕಿದ್ದು ಹೇಗೆ..?
* ಹೆತ್ತವರು ಬರುವ ಮೊದಲೇ ಮೃತದೇಹವನ್ನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು ಯಾಕೆ..?
* ಟ್ರಾಕ್ ಸೂಟ್‍ನಲ್ಲೇ ಮೃತದೇಹ ಇದ್ದದ್ದು ಯಾಕೆ..?
* ಮುಂಜಾನೆ 4 ಗಂಟೆಗೆ ದೈಹಿಕ ಶಿಕ್ಷಕ ತರಬೇತಿಗೆ ಕರೆದದ್ದು ಯಾಕೆ..?
ಈ ನಡುವೆ ಆಳ್ವಾಸ್ ಸಂಸ್ಥೆ, ಜುಲೈ 20ರಂದು ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಆಕೆಯದ್ದು ಕೊಲೆಯಲ್ಲ ಎಂದು ಹೇಳುತ್ತಿದೆ.