ಫ್ಯಾಮಿಲಿ ವೀಕ್‌ನಲ್ಲಿ ಬಿಗ್ ಬಾಸ್ ಮನೆಯ ಮೂಲ ನಿಯಮ ಉಲ್ಲಂಘಿಸಿ ಕಾವ್ಯ ಯಡವಟ್ಟು ಮಾಡಿಕೊಂಡಿದ್ದಾರೆ. ಮನೆಯಲ್ಲಿ ತಾಯಿ-ಸಹೋದರನ ಜೊತೆ ಹೆಚ್ಚು ಹೊತ್ತು ಮಾತನಾಡುವ ಅವಕಾಶವನ್ನು ಕಳೆದುಕೊಂಡಂತಿದೆ. ನಿಯಮ ಉಲ್ಲಂಘಿಸಿದ್ದಕ್ಕೆ ಮನೆಯ ಮುಖ್ಯದ್ವಾರ ತೆರೆದು, ಹೊರಹೋಗುವಂತೆ ಕಾವ್ಯ ಮನೆಯವರಿಗೆ ಬಿಗ್ ಬಾಸ್ ಸೂಚನೆ ಕೊಟ್ಟಿದ್ದಾರೆ.
ಕಾವ್ಯ ತನ್ನ ಮನೆಯವರ ಜೊತೆ ಆಟದ ಬಗ್ಗೆ ವಿಚಾರಿಸಿಕೊಳ್ತಾರೆ. ಗೇಮ್ ಸ್ಟ್ರಾಟಜಿ ಕುರಿತು ಚರ್ಚಿಸುತ್ತಾರೆ. ಸೋಷಿಯಲ್ ಮೀಡಿಯಾ ಹ್ಯಾಂಡ್ಲಿಂಗ್ ಬಗ್ಗೆಯೂ ಸಹೋದರನ ಜೊತೆ ಮಾತಾಡ್ತಾರೆ. ಈ ಸಂಬಂಧ ಸಹೋದರ ಒಂದಷ್ಟು ಸಲಹೆ ಕೊಡ್ತಾರೆ.
ಕಾವ್ಯ ಮನೆಯವರಿಂದ ಬಿಗ್‍ಬಾಸ್ ಮನೆಯ ಮೂಲ ನಿಯಮ ಉಲ್ಲಂಘನೆ.
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/1LMb5Bcyfz
— Colors Kannada (@ColorsKannada) December 25, 2025
‘ಎಲ್ಲಾ ಚೆನ್ನಾಗಿ ಹೋಗ್ತಿದೆ.. ನೀನೇನು ತಲೆ ಕೆಡಿಸ್ಕೊಳ್ಳೋಕೆ ಹೋಗ್ಬೇಡ. ನಿನ್ನ ಮತ್ತು ಗಿಲ್ಲಿ ಫ್ರೆಂಡ್‌ಶಿಪ್ ನೆಕ್ಸ್ಟ್ ಲೆವೆಲ್‌ನಲ್ಲಿದೆ. ನಾಮಿನೇಷನ್‌ನಿಂದ ಗಿಲ್ಲಿ ಹೆಸರು ತೆಗೆದುಹಾಕು. ಗಿಲ್ಲಿಯಿಂದಾನೇ ಕಾವ್ಯ ಅಂತ ನಿಂಗೆ ಆಗದೇ ಇರೋರೆ ಹೇಳ್ತಿರೋದು’ ಅಂತೆಲ್ಲ ಕಾವ್ಯ ಜೊತೆಗೆ ತಾಯಿ-ಸಹೋದರ ಮಾತನಾಡ್ತಾರೆ.
ಬಿಗ್ ಬಾಸ್ ಮನೆಯ ಮೂಲ ನಿಯಮ ಉಲ್ಲಂಘಿಸುವಂತಹ ಮಾತನಾಡಿದ್ದಾರೆಂದು ಬಿಗ್ ಬಾಸ್ ಶಿಕ್ಷೆ ಕೊಡ್ತಾರೆ. ಮುಖ್ಯದ್ವಾರ ತೆರೆದು ಮನೆಯಿಂದ ಹೊರಗೆ ಹೋಗುವಂತೆ ಸೂಚನೆ ಕೊಡ್ತಾರೆ. ಕಾವ್ಯ ಕ್ಷಮೆ ಕೇಳಿದರೂ ಬಿಡಲ್ಲ. ಕೊನೆಗೆ ಕಾವ್ಯ ಕಣ್ಣೀರಿಡುತ್ತಾರೆ.

