ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಫ್ರೆಂಡ್ ಆಗಿದ್ದ ಗಿಲ್ಲಿಯನ್ನೇ ನಾಮಿನೇಟ್ ಮಾಡಿ ಕಾವ್ಯ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಹೌಸ್ ‘ವಿಲನ್’ ಮನೆಯಾಗಿ ಬದಲಾದಾಗಿನಿಂದ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ.
ಕಾವ್ಯ ನಾಮಿನೇಷನ್ ನಿರ್ಧಾರ ಮನೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ರಜತ್ ಬಂದಾಗಿನಿಂದ ಗಿಲ್ಲಿ ಜೊತೆಗಿದ್ದಾರೆ. ಇಬ್ಬರನ್ನೂ ಕಾವ್ಯ ನಾಮಿನೇಟ್ ಮಾಡಿದ್ದಾರೆ. ತಮ್ಮಿಬ್ಬರ ವಿಚಾರವಾಗಿ ಮನೆಯವರು ವರ್ತಿಸುತ್ತಿರುವ ರೀತಿಗೆ ರಜತ್ ಕೆಂಡಾಮಂಡಲರಾಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಧ್ರುವಂತ್ ಜೊತೆ ಜಗಳ ಮಾಡಿಕೊಂಡಿದ್ದಾರೆ. ಇದರ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ.
ಕಾವ್ಯ ನಾಮಿನೇಶನ್ ಲಿಸ್ಟಿನಲ್ಲಿ ಗಿಲ್ಲಿ & ರಜತ್!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/6atS1BfcjO
— Colors Kannada (@ColorsKannada) December 9, 2025
ಮನೆ ಈಗ ಬಿಗ್ ಬಾಸ್ ಬದಲಿಗೆ ‘ವಿಲನ್’ ಹಿಡಿತದಲ್ಲಿದೆ. ವಿಲನ್ ಮನೆಯಲ್ಲಿನ ರೂಲ್ಸ್‌ಗಳನ್ನೇ ಬದಲಾಯಿಸಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಕೂಡ ಇಟ್ಟಿದ್ದಾರೆ. ಅದರಂತೆ ಕಾವ್ಯ ತನ್ನ ಸರದಿಯಲ್ಲಿ ಗಿಲ್ಲಿ ಮತ್ತು ರಜತ್ ಇಬ್ಬರನ್ನು ನಾಮಿನೇಟ್ ಮಾಡಿದ್ದಾರೆ. ಅದಕ್ಕೆ ಕಾರಣ ಕೊಡುವಾಗ ಕಾವ್ಯ ಮೇಲೆ ರಜತ್ ರೇಗಾಡಿದ್ದಾರೆ.
ಧ್ರುವಂತ್ ಮಾತಿಗೂ ರಜತ್ ಕೋಪಗೊಂಡಿದ್ದಾರೆ. ಏಕವಚನದಲ್ಲೇ ಕೂಗಾಡಿ ರಂಪ ಮಾಡಿದ್ದಾರೆ. ಜಗಳ ತಾರಕಕ್ಕೇರಿ ಇಬ್ಬರೂ ಹೊಡೆದಾಟಕ್ಕೆ ಮುಂದಾಗಿದ್ದಾರೆ. ಈ ವೇಳೆ, ಇತರೆ ಸ್ಪರ್ಧಿಗಳನ್ನು ಇಬ್ಬರನ್ನೂ ಸಮಾಧಾನಪಡಿಸಲು ಮುಂದಾಗಿದ್ದಾರೆ. ವಿಲನ್ ಎಂಟ್ರಿ ಕೊಟ್ಟಿರೋ ಮನೆಯಲ್ಲಿ ಇನ್ನೂ ಏನೇನಾಗುತ್ತೆ ಎಂಬುದು ಕುತೂಹಲ ಮೂಡಿಸಿದೆ.

