– ಗಿಲ್ಲಿಗೆ ಮೊಟ್ಟೆ ಕೇಳಿದಾಗ ಕೊಡು ಎಂದ ಕಾವ್ಯ ಅಮ್ಮ
ಬಿಗ್ ಬಾಸ್ (Bigg Boss) ಮನೆಯಲ್ಲಿ ಫ್ಯಾಮಿಲಿ ವೀಕ್ ರಂಗೇರಿದೆ. ದೊಡ್ಮನೆಯ ಕ್ಯೂಟ್ ಜೋಡಿ ಗಿಲ್ಲಿ-ಕಾವ್ಯ ಮನೆಯವರು ಒಟ್ಟಿಗೆ ಆಗಮಿಸಿರುವುದು ಮನೆಯ ಕಳೆ ಹೆಚ್ಚಿಸಿದೆ. ಎಲ್ಲರನ್ನೂ ಜಾಸ್ತಿ ಗೋಳಾಡಿಸಬೇಡ ಅಂತ ಗಿಲ್ಲಿಗೆ (Gilli) ತಂದೆ-ತಾಯಿ ಕಿವಿಮಾತು ಹೇಳಿದ್ದಾರೆ. ಗಿಲ್ಲಿಯನ್ನು ಮಾತ್ರ ಬಿಟ್ಕೊಡ್ಬೇಡ ಅಂತ ಕಾವ್ಯಗೆ ಅಮ್ಮ ಬುದ್ದಿಮಾತು ಹೇಳಿದ್ದಾರೆ.
ಬಿಳಿ ಶರ್ಟ್-ಪಂಚೆ ಹಾಕ್ಕೊಂಡು, ಕೋಲು ಹಿಡಿದುಕೊಂಡು ಮನೆಗೆ ಖಡಕ್ ಹಳ್ಳಿ ಯಜಮಾನನ ಸ್ಟೈಲಲ್ಲಿ ಗಿಲ್ಲಿ ತಂದೆ ಎಂಟ್ರಿ ಕೊಡ್ತಾರೆ. ‘ಎಲ್ಲಿ ನನ್ನ ಟಗರು ಮರಿ ಕಾಣ್ತಿಲ್ಲ’ ಅಂತ ಬಂದು ಮಗನನ್ನು ಕಂಡ ಕೂಡಲೇ ಕೋಲಿನಿಂದ ಹಿಗ್ಗಾಮುಗ್ಗ ಬಾರಿಸುತ್ತಾರೆ. ಇದು ತಂದೆ-ಮಗನ ಸಲುಗೆಯ ನಡೆಯಂತೆ ಕಂಡುಬರುತ್ತದೆ. ನಂತರ ಗಿಲ್ಲಿ ತಾಯಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ. ಗಿಲ್ಲಿ ತಲೆಗೆ ಎಣ್ಣೆ ಹಚ್ಚಿ, ಸ್ನಾನ ಮಾಡಿಸಿ ಜುಬ್ಬ-ಪೈಜಾಮ ಉಡುಗೆ ತೊಡಿಸಿ ಮದುಮಗನಂತೆ ರೆಡಿ ಮಾಡ್ತಾರೆ. ನಂತರ ಎಲ್ಲರ ಜೊತೆ ಬೆರೆತು ಮಾತಾಡ್ತಾರೆ. ಇದನ್ನೂ ಓದಿ: ಗಿಲ್ಲಿಗೆ ಕೋಲಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ತಂದೆ
ಇದೇ ಸಮಯಕ್ಕೆ ಕ್ಯಾಪ್ಟನ್ ರೂಮ್‌ನಲ್ಲಿ ಮತ್ತು ಮತ್ತೊಂದು ಕೋಣೆಯಲ್ಲಿ ಕಾವ್ಯ (Kavya) ತಾಯಿ ಮತ್ತು ಸಹೋದರ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ಕಾವ್ಯ ತನ್ನ ಆಟದ ಬಗ್ಗೆ ತಾಯಿ ಬಳಿ ವಿಚಾರಿಸ್ತಾರೆ. ‘ತುಂಬಾ ಚೆನ್ನಾಗಿ ಆಟ ಆಡ್ತಿದ್ದೀಯಾ.. ಹೀಗೆ ಮುಂದುವರಿಸು’ ಅಂತ ಕಾವ್ಯಗೆ ತಾಯಿ ಸಲಹೆ ಕೊಡ್ತಾರೆ. ‘ಗಿಲ್ಲಿಯನ್ನು ಮಾತ್ರ ಬಿಟ್ಕೊಡ್ಬೇಡ.. ಅವನು ನಿನ್ನ ಎಲ್ಲೂ ಬಿಟ್ಕೊಟ್ಟಿಲ್ಲ.. ನೀನೇ ಅವನನ್ನ ಗೋಳು ಹೊಯ್ಕೊತೀಯಾ’ ಅಂತ ಮಗಳಿಗೆ ತಾಯಿ ತಿಳಿ ಹೇಳ್ತಾರೆ. ‘ಅವನು ಮೊಟ್ಟೆ ಕೇಳ್ದಾಗ ಕೊಡು.. ದೊಡ್ಡವರನ್ನ ನೋಡ್ಕೊಂಡು ಮಾತಾಡು’ ಅಂತ ಸಲಹೆ ಕೊಡ್ತಾರೆ.
ಕಾವ್ಯ ಸಹೋದರ ಆರಂಭದಲ್ಲಿ ಗಿಲ್ಲಿಯನ್ನು ಮಾತಾಡಿಸದೇ ಎಲ್ಲರನ್ನೂ ಮಾತಾಡಿಸ್ತಾರೆ. ಆಗ, ‘ಇವರೇನು ನನಗೆ ಡಾಚಕ್’ ಕೊಡ್ತಾರಲ್ಲ ಅಂತ ಗಿಲ್ಲಿ ಹೇಳ್ತಾರೆ. ಕಾವ್ಯ ಸಹೋದರ ಗಿಲ್ಲಿಯ ತಂದೆ-ತಾಯಿಯನ್ನು ಮಾತನಾಡಿಸಿ, ಕೊನೆಗೆ ಗಿಲ್ಲಿ ಜೊತೆ ಮಾತಾಡ್ತಾರೆ. ಇದನ್ನೂ ಓದಿ: ಬಿಗ್ ಬಾಸ್‌ನಲ್ಲಿ ನನ್ನ ಮಗ ಇರ್ಲಿಲ್ಲ ಅಂದಿದ್ರೆ ಗಿಲ್ಲಿಗೆ ವೋಟ್ ಹಾಕ್ತಿದ್ದೆ: ಗಿಲ್ಲಿ ಕಾಮಿಡಿ ಇಷ್ಟ ಅಂದ್ರು ಧನುಷ್ ತಾಯಿ

