ಬೆಂಗಳೂರು: ಕಿರುತೆರೆ ನಟಿ ಕಾವ್ಯಾ ಗೌಡ ಅವರು ಡಿಸೆಂಬರ್ 2ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಇದೀಗ ಬ್ಯಾಚುಲರ್ ಪಾರ್ಟಿಯಲ್ಲಿ ಎಂಜಾಯ್ ಮಾಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Advertisement
ಮಿಸ್ಟರ್ ಎಸ್ ನೀವು ನನ್ನ ಉತ್ತಮ ಸ್ನೇಹಿತ ಮತ್ತು ನನ್ನ ಪ್ರೇಮಿಯಾಗಿದ್ದೀರಿ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮಾ… ಎಂದು ಬರೆದುಕೊಂಡು ಇನ್ಸ್ಟಾಗ್ರಾಮ್ನಲ್ಲಿ ಬ್ಯಾಚುಲರ್ ಪಾರ್ಟಿಯ ಕಲರ್ ಕಲರ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
Advertisement
Advertisement
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕಾವ್ಯಾ ಮಾತನಾಡಿ ಮದುವೆಯ ಕುರಿತು ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಡೆಸ್ಟಿನಿಯನ್ನು ನಾನು ನಂಬುತ್ತೇನೆ, ನಾನು ಏನು ಅಂದುಕೊಳ್ಳುವೆನೋ ಅದೇ ರೀತಿ ಆಗುತ್ತೆ. ಹಾಗೆಯೇ ಬ್ಯಾಚುಲರ್ ಪಾರ್ಟಿ ನಡೆದಿದ್ದು, ನನ್ನ ಹುಡುಗ, ಅಕ್ಕ ಆಯೋಜಿಸಿದ್ದರು ಎಂದಿದ್ದಾರೆ. ಇದನ್ನೂ ಓದಿ: ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?
Advertisement
ನವೆಂಬರ್ 29ರಂದು ಬೆಂಗಳೂರಿನ ಜೆ ಡಬ್ಲ್ಯು ಮ್ಯಾರಿಯೇಟ್ನಲ್ಲಿ ಸಂಗೀತ್ ಮೆಹೆಂದಿ ನಡೆಯಲಿದೆ. ಡಿಸೆಂಬರ್ 1ರಂದು ಆರತಕ್ಷತೆ, ಡಿಸೆಂಬರ್ 2ರಂದು ತಾಜ್ ವೆಸ್ಟೆಂಡ್ನಲ್ಲಿ ಮದುವೆ ನಡೆಯಲಿದೆ. ಸೋಮಶೇಖರ್ರಂತಹ ಹುಡುಗನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ನಿಜಕ್ಕೂ ಅವರ ಗುಣ, ಸ್ವಭಾವ ನನಗೆ ತುಂಬ ಇಷ್ಟ. ನಾನು ಸಾಯಿಬಾಬಾ ಅವರನ್ನು ತುಂಬ ನಂಬುತ್ತೇನೆ. ನನ್ನ ಜೊತೆಗೆ ಎಲ್ಲರಿಗೂ ಒಳ್ಳೆಯದನ್ನು ಮಾಡು ಅಂತ ಕೇಳಿಕೊಳ್ಳುತ್ತೇನೆ, ಅಂತೆಯೇ ಒಳ್ಳೆಯದಾಗುತ್ತಿದೆ ಎಂದು ಭಾವಿಸುವೆ ಎಂದಿದ್ದಾರೆ. ಇದನ್ನೂ ಓದಿ: ಪ್ರಿಯತಮನನ್ನು ಪರಿಚಯಿಸಿದ ನಟಿ ಕಾವ್ಯ ಗೌಡ
ಕಳೆದ ಮೇ ತಿಂಗಳಿನಲ್ಲಿಯೇ ಮದುವೆ ನಡೆಯಬೇಕಿತ್ತು, ಕೊರೊನಾ ಎರಡನೇ ಅಲೆ ಇರೋದಕ್ಕೆ ಮದುವೆ ಮುಂದೂಡಲಾಗಿತ್ತು. ಕೊರೊನಾ ವೈರಸ್ ನಿಯಮಗಳನ್ನು ಪಾಲಿಸಿ ನಾವು ಮದುವೆಯಾಗುತ್ತಿದ್ದೇವೆ. ಸ್ಯಾಂಡಲ್ವುಡ್ನ ಕೆಲ ಕಲಾವಿದರು, ತಂತ್ರಜ್ಞರು, ಸ್ನೇಹಿತರನ್ನು ಆಹ್ವಾನಿಸಿದ್ದೇವೆ. ನಮ್ಮ ಎರಡು ಕುಟುಂಬದ ಸದಸ್ಯರು, ಆತ್ಮೀಯರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮದುವೆಯ ಕುರಿತಾಗಿ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.