ನಟಿ ಕಾವ್ಯಾ ಗೌಡ (Kavya Gowda) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆಯ 2ನೇ ವರ್ಷದ ಆ್ಯನಿವರ್ಸರಿಯಂದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನ (Pregnancy) ನಟಿ ತಿಳಿಸಿದ್ದಾರೆ. ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡು ಅಭಿಮಾನಿಗಳಿಗೆ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ತಿಳಿಸಿದ್ದಾರೆ.
Advertisement
ಈ ಖುಷಿ ಸುದ್ದಿಯನ್ನು ಗೌಪ್ಯವಾಗಿಡಲು ಸಾಕಷ್ಟು ಸಮಯದಿಂದ ಪ್ರಯತ್ನಿಸಿದ್ದೇವೆ. ಕೊನೆಗೂ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಹೇಳೋದಕ್ಕೆ ಖುಷಿಯಿದೆ. 2024ರಲ್ಲಿ ಮಗುವಿನ ಆಗಮನ ಆಗಲಿದೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement
ಡಿಸೆಂಬರ್ 2, 2021ರಂದು ಉದ್ಯಮಿ ಸೋಮಶೇಖರ್ ಜೊತೆ ಕಾವ್ಯಾ ಗೌಡ ಮದುವೆಯಾದರು. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಅದ್ದೂರಿಯಾಗಿ ಹಸೆಮಣೆ (Wedding) ಏರಿದ್ದರು. ಕುಟುಂಬದವರು ಸಮ್ಮತಿಸಿದ ಮದುವೆಗೆ ನಟಿ ಗ್ರೀನ್ ಸಿಗ್ನಲ್ ನೀಡಿದ್ದರು. ಇದನ್ನೂ ಓದಿ:ಉತ್ತರಕಾಶಿ ಘಟನೆ ಕುರಿತು ಸಿನಿಮಾ: 14ಕ್ಕೂ ಹೆಚ್ಚು ಶೀರ್ಷಿಕೆ ನೋಂದಣಿ
Advertisement
ಕಳೆದ ಮೇನಲ್ಲಿ ಅದ್ದೂರಿಯಾಗಿ ಮನೆ ಗೃಹಪ್ರವೇಶ ಮಾಡಿದ್ದರು ಕಾವ್ಯಾ- ಸೋಮಶೇಖರ್ ದಂಪತಿ. ನಟನೆ ಬಿಟ್ಟು ಸಂಪೂರ್ಣವಾಗಿ ವೈವಾಹಿಕ ಬದುಕಿನಲ್ಲಿ ನಟಿ ಬ್ಯುಸಿಯಾಗಿದ್ದರು. ಇದೀಗ 2ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ನಟಿ ಖುಷಿ ಸುದ್ದಿ ನೀಡಿದ್ದಾರೆ.
ಮೀರಾ ಮಾಧವ, ಗಾಂಧಾರಿ, ರಾಧಾ ರಮಣ (Radha Ramana), ‘ಬಕಾಸುರ’ ಸಿನಿಮಾ ಸೇರಿದಂತೆ 150ಕ್ಕೂ ಹೆಚ್ಚು ಆ್ಯಡ್ ಶೂಟ್‌ನಲ್ಲಿ ಕಾವ್ಯಾ ಗೌಡ ನಟಿಸಿದ್ದಾರೆ.