ಆಂಡ್ರ್ಯೂ ವಿಷಯಕ್ಕೆ ಸ್ನೇಹಿತ ಶಶಿ ಮೇಲೆ ಕವಿತಾ ಗರಂ

Public TV
1 Min Read
shashi kavitha collage

ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-6ರಲ್ಲಿ ಕವಿತಾ ತಮ್ಮ ಸ್ನೇಹಿತ ಶಶಿ ಮೇಲೆ ಗರಂ ಆಗಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ಬಾರಿ ‘ಬಿಗ್‍ಬಾಸ್ ನಗರ’ ಟಾಸ್ಕ್ ನೀಡಿದರು. ಈ ಟಾಸ್ಕ್ ನಲ್ಲಿ ಬಿಗ್ ಬಾಸ್ ಆಂಡ್ರ್ಯೂ ಹಾಗೂ ನಯನ ಅವರನ್ನು ನಿಯಮ ರೂಪಿಸುವ ಅಧಿಕಾರಿಯಾಗಿ ಮಾಡಿದರು. ನವೀನ್ ಹಾಗೂ ಅಕ್ಷತಾರನ್ನು ಆಟೋ ಚಾಲಕರಾಗಿ ಮಾಡಿ ಮನೆಯ ಉಳಿದ ಸದಸ್ಯರನ್ನು ನಾಗರಿಕರಾಗಿ ಮಾಡಿದರು.

ಈ ಟಾಸ್ಕ್ ನಲ್ಲಿ ಅಡುಗೆ ವಿಷಯಕ್ಕಾಗಿ ಅಧಿಕಾರಿಗಳ ಹಾಗೂ ನಾಗರಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಂಡ್ರ್ಯೂ ತಮಗೆ ಇಷ್ಟ ಬಂದಂತೆ ನಿಯಮಗಳನ್ನು ರೂಪಿಸುತ್ತಿದ್ದರು. ಈ ನಿಯಮಗಳ ಬಗ್ಗೆ ಧ್ವನಿ ಎತ್ತದೆ ಆಂಡ್ರ್ಯೂ ಮಾತಿಗೆ ಒಪ್ಪಿಗೆ ನೀಡಿದ್ದು ಯಾಕೆ ಎಂದು ಪ್ರಶ್ನಿಸಿ ಕವಿತಾ ಶಶಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

shashi kavitha 4

ನಿಯಮ ರೂಪಿಸುವ ಅಧಿಕಾರಿಯಾಗಿದ್ದ ಆಂಡ್ರ್ಯೂ ತನಗೆ ಇಷ್ಟ ಬಂದಂತೆ ನಿಯಮಗಳನ್ನು ಬದಲಾಯಿಸುತ್ತಿದ್ದರು. ಹಾಗಾಗಿ ಕವಿತಾ, ಆಂಡ್ರ್ಯೂ ಮೇಲೆ ಕೋಪಗೊಂಡಿದ್ದರು. ಶಶಿ ಈ ನಿಯಮಗಳ ಬಗ್ಗೆ ಸರಿಯಾಗಿ ಮಾತನಾಡಿಲ್ಲ. ಶಶಿ ಸರಿಯಾಗಿ ಮಾತನಾಡಿದ್ದರೆ, ನಾನು ರಾತ್ರಿಯಿಡಿ ಜೈಲಲ್ಲಿ ಕಾಲ ಕಳೆಯುತ್ತಿರಲಿಲ್ಲ ಎಂದು ಶಶಿ ವಿರುದ್ಧ ಗರಂ ಆಗಿದ್ದಾರೆ.

ಅಧಿಕಾರಿಗಳಿಗೆ ಅಧಿಕಾರ ಇರುವುದರಿಂದ ಅವರು ನಿಯಮಗಳನ್ನು ಬದಲಾಯಿಸುತ್ತಿದ್ದಾರೆ. ಅಡುಗೆ ಮಾಡುವ ವಿಚಾರದಲ್ಲಿ ಇಡೀ ತಂಡ ತೆಗೆದುಕೊಂಡ ನಿರ್ಧಾರ ಪರವಾಗಿ ನಾನು ನಿಂತೆ. ನಾನು ಯಾವುದೇ ಸ್ವಂತ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಶಶಿ, ಕವಿತಾಗೆ ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *