ಚಿತ್ರದುರ್ಗ: ಜಿಲ್ಲೆಯ ಕವಾಡಿಗರಹಟ್ಟಿಯಲ್ಲಿ (Kavadigarhatti) ಕಲುಷಿತ ನೀರು (Polluted Water) ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಕವಾಡಿಗರಹಟ್ಟಿ ಕಲುಷಿತ ನೀರು ದುರಂತ ಪ್ರಕರಣವಾಗಿ ಹೊರಹೊಮ್ಮುತ್ತಿದೆ. ಜುಲೈ 31ರಿಂದ ಇಲ್ಲಿಯವರೆಗೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ನೂರಾರು ಜನರು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ದಿನೇ ದಿನೇ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ.
Advertisement
Advertisement
ಕಲುಷಿತ ನೀರು ಸೇವಿಸಿದ ಪರಿಣಾಮ ಕವಾಡಿಗರಹಟ್ಟಿಯ ರುದ್ರಪ್ಪ (50) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಾಸ್ ಎಂದು ಕರೆಯದ್ದಕ್ಕೆ ಯುವಕನ ಮೇಲೆ ಪುಡಿರೌಡಿಗಳಿಂದ ಹಲ್ಲೆ
Advertisement
ಕವಾಡಿಗರಹಟ್ಟಿಯ ತಮ್ಮ ಮನೆಯಲ್ಲಿಯೇ ಪಾರ್ವತಮ್ಮ (75) ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಪಾರ್ವತಮ್ಮ 2 ವರ್ಷಗಳ ಹಿಂದೆ ಪಾರ್ಶ್ವವಾಯುಗೆ ಒಳಗಾಗಿದ್ದರು. 2 ದಿನದ ಹಿಂದೆ ಅವರಿಗೆ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ಪಾರ್ವತಮ್ಮ ಕುಟುಂಬಸ್ಥರೆಲ್ಲರೂ ಅಸ್ವಸ್ಥರಾಗಿ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದರು. ಆದರೆ ಪಾರ್ವತಮ್ಮ ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
Advertisement
ಕಲುಷಿತ ನೀರು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಎಇಇ ಮಂಜುನಾಥ್ ಗಿರಡ್ಡಿ, ಜೆಇ ಕಿರಣ್, ವಾಲ್ ಮ್ಯಾನ್ ಪ್ರಕಾಶ್ ಬಾಬುನನ್ನು ಅಮಾನತು ಮಾಡಲಾಗಿದೆ. ನಗರಸಭೆ ಪೌರಾಯುಕ್ತ ಶ್ರೀನಿವಾಸ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಗುತ್ತಿಗೆ ಆಧಾರಿತ ನೌಕರ ಕವಾಡಿಗರಹಟ್ಟಿ ನೀರಗಂಟಿ ಸುರೇಶ್‌ನನ್ನು ಕೆಲಸದಿಂದ ವಜಾಗೊಳಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಪುತ್ರ ಯತೀಂದ್ರಗೆ ವರುಣದಲ್ಲಿ ಫುಲ್ ಡಿಮ್ಯಾಂಡ್
Web Stories