ಲಕ್ನೋ: ಭಾರತೀಯ ರೈಲ್ವೇ ಅಭಿವೃದ್ಧಿ ಪಡಿಸಿದ ಸ್ವಯಂ ಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ(ಎಟಿಪಿ)ಯ ಹೊಸ ‘ಕವಚ’ ತಂತ್ರಜ್ಞಾನವನ್ನು ಶುಕ್ರವಾರ ಪರೀಕ್ಷಿಸಲಾಯಿತು. ಪರೀಕ್ಷೆಯನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಶ್ಣವ್ ಕೂಲಂಕುಶವಾಗಿ ವೀಕ್ಷಿಸಿ ತಂತ್ರಜ್ಞಾನವನ್ನು ಶ್ಲಾಘಿಸಿದ್ದಾರೆ.
ಒಂದೇ ಹಳಿಯಲ್ಲಿ ಪರಸ್ಪರ ಮುಖಾಮುಖಿಯಾಗಿ ಚಲಿಸುತ್ತಿರುವ ರೈಲುಗಳನ್ನು ಹೇಗೆ ಸ್ವಯಂ ಚಾಲಿತವಾಗಿ ನಿಯಂತ್ರಣಕ್ಕೆ ತರಬಹುದು ಎಂಬುದನ್ನು ಅಶ್ವಿನಿ ವೈಶ್ಣವ್ ವೀಕ್ಷಿಸಿದ್ದು, ಅದರ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ
Advertisement
SPAD test, tried crossing signal at red. Kavach is protecting and not allowing the Loco to move.#BharatKaKavach pic.twitter.com/x6Ys9iz9xJ
— Ashwini Vaishnaw (@AshwiniVaishnaw) March 4, 2022
Advertisement
ಶೂನ್ಯ ಅಪಘಾತಗಳ ಗುರಿಯೊಂದಿಗೆ ನಿರ್ಮಿಸಲಾದ ಕವಚ ತಂತ್ರಜ್ಞಾನವನ್ನು ಶುಕ್ರವಾರ ಸಿಕಂದರಾಬಾದ್‍ನಲ್ಲಿ ನೇರ ಪರೀಕ್ಷೆಗೆ ಒಳಪಡಿಸಲಾಯಿತು. ಅಶ್ವಿನಿ ವೈಷ್ಣವ್ ಅವರಿಗೆ ರೈಲಿನ ಚಾಲಕ ಹಾಗೂ ಸಿಬ್ಬಂದಿ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದರು.
Advertisement
Watch the action!!
Collision was avoided with the help of Kavach with two trains/loco approaching each other on same track.
Loco was stopped automatically by Kavach at a distance of around 380 metres between them.#BharatKaKavach pic.twitter.com/DdWu6YP2Q1
— Central Railway (@Central_Railway) March 4, 2022
Advertisement
ಕೇಂದ್ರ ರೈಲ್ವೇ ಸಚಿವ ಇದ್ದ ರೈಲಿನ ಹಳಿಯ ವಿರುದ್ಧ ದಿಕ್ಕಿನಲ್ಲಿ ಇನ್ನೊಂದು ರೈಲು ಬರುತ್ತಿದ್ದು, ಈ ಸಂದರ್ಭದಲ್ಲಿ ರೈಲಿನ ಚಾಲಕ ರೈಲನ್ನು ನಿಲ್ಲಿಸಲು ಪ್ರಯತ್ನ ಪಟ್ಟಿಲ್ಲವೆಂದಾದರೂ ರೈಲು ತಾನಾಗೇ ನಿಲ್ಲುವುದನ್ನು ವೀಡಿಯೋದಲ್ಲಿ ಕಾಣಬಹುದು. ಇದನ್ನೂ ಓದಿ: ರಾಯರ ಪಟ್ಟಾಭಿಷೇಕ: ಮಂತ್ರಾಲಯಕ್ಕೆ ಭೇಟಿ ಕೊಟ್ಟ ಸುದೀಪ್
Amalgamation of technologies for Smooth Functioning!
Technologies such as
– Relay Based
– UHF Radio
– RFID
– GSM
– GPS
will collectively aid in effective and smooth functioning of KAVACH#BharatKaKavach #AatmaNirbharBharat pic.twitter.com/tiMNP8xsgT
— Central Railway (@Central_Railway) March 4, 2022
ಅಶ್ವಿನಿ ವೈಶ್ಣವ್ ಟ್ವಿಟ್ಟರ್‍ನಲ್ಲಿ ಎಸ್‍ಪಿಎಡಿ ಪರೀಕ್ಷೆ, ರೈಲು ಕೆಂಪು ಸಿಗ್ನಲ್ ದಾಟಲು ಪ್ರಯತ್ನಿಸಿದೆ. ಆದರೆ ಕವಚ ರೈಲನ್ನು ತಡೆಯುತ್ತದೆ ಎಂದು ಬರೆದಿದ್ದಾರೆ.