ಹಾಸನ: ಕೊರೊನಾ ಕಾರಣದಿಂದ ಈ ವರ್ಷವೂ ಕೂಡ ಕತ್ತರಿಘಟ್ಟ ಜಾತ್ರಾಮಹೋತ್ಸವವನ್ನು ರದ್ದು ಪಡಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
\
Advertisement
ಚನ್ನರಾಯಪಟ್ಟಣ ತಾಲೂಕಿನ ಉದಯಪುರ ಸಮೀಪ ಇರುವ ಕತ್ತರಿಘಟ್ಟ ಗ್ರಾಮದಲ್ಲಿ ಇದೇ ತಿಂಗಳು 17 ಮತ್ತು 18 ರಂದು ಜಾತ್ರಾಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಕತ್ತರಿಘಟ್ಟ ಗ್ರಾಮದ ಶ್ರೀ ಲಕ್ಷ್ಮಿದೇವಿ ಜಾತ್ರಾಮಹೋತ್ಸವವು ಕತ್ತರಿಘಟ್ಟ ಜಾತ್ರಾಮಹೋತ್ಸವ ಎಂದೇ ಪ್ರಸಿದ್ಧಿಯಾಗಿದೆ. ಇದನ್ನೂ ಓದಿ: ನಾಯಿ ಹಿಡಿಯಲು ಹೋಗಿ ಬೋನಿನಲ್ಲಿ ಲಾಕ್ ಆಯ್ತು ಚಿರತೆ!
Advertisement
Advertisement
ಪ್ರತಿ ವರ್ಷ ಸಾವಿರಾರು ಜನ ಈ ಜಾತ್ರೆಯಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ ಹಾಸನದಲ್ಲಿ ಕೊರೊನಾ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಜಾತ್ರಾಮಹೋತ್ಸವ ನಡೆಸದಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – 71 ನದಿಗಳಲ್ಲಿ ಸ್ವಚ್ಛತಾ ಕಾರ್ಯ
Advertisement
ಗ್ರಾಮಸ್ಥರು ಜಾತ್ರಾಮಹೋತ್ಸವ ರದ್ದು ಮಾಡಲು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಕಾರಣದಿಂದ ಕಳೆದೆರೆಡು ವರ್ಷದಿಂದ ಜಾತ್ರೆ ಸರಿಯಾಗಿ ನಡೆದಿಲ್ಲ. ಹೀಗಿರುವಾಗ ಈ ವರ್ಷವೂ ಜಾತ್ರಾಮಹೋತ್ಸವ ರದ್ದು ಮಾಡುವುದು ಸರಿಯಲ್ಲ. ರೋಗದ ವಿರುದ್ಧ ಹೋರಾಡಲು ದೈವಿಶಕ್ತಿಯೂ ಬೇಕಾಗಿದ್ದು, ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಜಾತ್ರಾಮಹೋತ್ಸವ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.