ಕತ್ರಿನಾ ಜೊತೆಗೆ ವಿಕ್ಕಿ ಕೌಶಲ್ ಎಂಗೇಜ್‍ಮೆಂಟ್?

Public TV
1 Min Read
katrina vikki 1

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ನಡುವಿನ ಸಂಬಂಧದ ಬಗ್ಗೆ ವಿಕ್ಕಿ ಕೌಶಲ್ ಸ್ಪಷ್ಟನೆ ನೀಡಿದ್ದಾರೆ.

Vicky kaushal

ಇತ್ತೀಚೆಗಷ್ಟೇ ಬಿಡುಗಡೆಗೊಂಡ ಸರ್ದಾರ್ ಉಧಮ್ ಸಿನಿಮಾದ ಸಕ್ಸಸ್ ಖುಷಿಯಲ್ಲಿ ವಿಕ್ಕಿ ಕೌಶಲ್ ತೇಲುತ್ತಿದ್ದಾರೆ. ಸದ್ಯ ಇದೇ ಖುಷಿಯಲ್ಲಿ ಖಾಸಗಿ ವಾಹಿನಿಗೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ವಿಕ್ಕಿ ಕೌಶಲ್, ಕತ್ರಿನಾ ಜೊತೆಗೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:  ಕತ್ರಿನಾ, ವಿಕ್ಕಿ ಎಂಗೇಜ್ಮೆಂಟ್ ಸೀಕ್ರೆಟ್

FotoJet 10 2

ಪಾಪರಾಜಿಗಳನ್ನು ದೂಸಿ, ‘ಈ ಎಲ್ಲದಕ್ಕೂ ಸಮಯ ಬರುತ್ತದೆ. ಆಗ ತಾನು ಉತ್ತರಿಸಲಿದ್ದೇನೆ’ ಸದ್ಯದಲ್ಲೇ ನಿಶ್ಚಿತಾರ್ಥವನ್ನೂ ಮಾಡಿಕೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಕ್ಕಿಯವರ ಈ ಮಾತು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸುತ್ತಿದ್ದು, ಕತ್ರಿನಾ ವಿಕ್ಕಿ ಸದ್ಯದಲ್ಲೇ ಎಂಗೇಜ್‍ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನುತ್ತಿದ್ದಾರೆ. ಇದನ್ನೂ ಓದಿ: ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್ 

ಅಕ್ಟೋಬರ್ 16ರಂದು ವಿಕ್ಕಿ ಕೌಶಲ್ ಅಭಿನಯಿಸಿದ್ದ ಸರ್ದಾರ್ ಉಧಮ್ ಸಿನಿಮಾಕ್ಕೆ ಕತ್ರಿನಾ ಕೈಫ್ ಇನ್‍ಸ್ಟಾಗ್ರಾಮ್‍ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ವಿಕ್ಕಿ ಮತ್ತು ಕತ್ರಿನಾ ಇಬ್ಬರು ಡೇಟಿಂಗ್‍ನಲ್ಲಿದ್ದಾರೆ ಎಂಬ ವದಂತಿಗಳಿಗೆ ಸಾಕ್ಷಿ ಎಂಬಂತೆ ಸರ್ದಾರ್ ಉಧಮ್ ವಿಶೇಷ ಪ್ರದರ್ಶನಕ್ಕೆ ಕತ್ರಿನಾ ಆಗಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *