ಬಾಲಿವುಡ್ ಸ್ಟಾರ್ ಜೋಡಿ ಕತ್ರೀನಾ ಕೈಫ್ (Katrina Kaif) ಹಾಗೂ ವಿಕ್ಕಿ ಕೌಶಲ್ (Vicky Kaushal) ದಂಪತಿ ತಮ್ಮ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ.
ಸ್ಟಾರ್ ದಂಪತಿ ಮಗನಿಗೆ `ವಿಹಾನ್’ ಎಂದು ಹೆಸರಿಟ್ಟಿದ್ದಾರೆ. ಇದುವರೆಗೂ ಮಗನ ಫೋಟೋವನ್ನ ರಿವೀಲ್ ಮಾಡಿರಲಿಲ್ಲ ತಾರಾಜೋಡಿ. ಇದೀಗ ಇನ್‌ಸ್ಟಾಗ್ರಾಂನಲ್ಲಿ ಮಗನ ಕೈ ಫೋಟೋವನ್ನಷ್ಟೇ ತೋರಿಸಿ ಮಗನ ಹೆಸರನ್ನ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಕೊರಗಜ್ಜ ಚಿತ್ರದ ಹಾಡುಗಳಿಗೆ ರೀಲ್ಸ್: ನಿರ್ದೇಶಕ ಸುಧೀರ್ ಅತ್ತಾವರ್ ಸ್ಪಷ್ಟನೆ
ಗರ್ಭಿಣಿಯಾಗೋದಕ್ಕೂ ಮುನ್ನ ಕತ್ರೀನಾ ಕೈಫ್ ಕುಕ್ಕೆ ಸುಬ್ಯಹ್ಮಣ್ಯಕ್ಕೆ ತೆರಳಿ ಆಶ್ಲೇಷ ಬಲಿ ಪೂಜೆ ಮಾಡಿಸಿದ್ದರು. ಬಳಿಕ ಗರ್ಭಿಣಿಯಾಗಿದ್ದ ಕತ್ರೀನಾಗೆ ಕಳೆದ ನವೆಂಬರ್‌ನಲ್ಲಿ ಗಂಡು ಮಗು ಜನಿಸಿದೆ. ಇದೀಗ ಮಗನ ಹೆಸರನ್ನ ರಿವೀಲ್ ಮಾಡಿರುವ ಕತ್ರೀನಾ, ವಿಹಾನ್ ಹೆಸರು ಹಾಗೂ ಹೆಸರಿನ ಅರ್ಥ ಬೆಳಕಿನ ಕಿರಣ ಅನ್ನೋದಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

