ಕಾಟೇರ, ರಾಬರ್ಟ್ ಸಿನಿಮಾ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ನಟಿ ಸೋನಲ್ (Actress Sonal) ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಯಾಂಡಲ್‌ವುಡ್ ತಾರೆಯರಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡುವುದರಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ:ಧನುಷ್ ನಟನೆಯ ಬಾಲಿವುಡ್ ಸಿನಿಮಾದಲ್ಲಿ ಕೃತಿ ಸನೋನ್ ನಾಯಕಿ
ಸೋನಲ್ ಜೊತೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ಡೈರೆಕ್ಟರ್ ತರುಣ್ ಸುಧೀರ್ ಈಗ ಸಿನಿಮಾ ಸೆಲೆಬ್ರಿಟಿಗಳ ಮನೆಗೆ ಹೋಗಿ ಮದುವೆ ಪತ್ರಿಕೆ ನೀಡಿದ್ದಾರೆ. ವಸಂತನಗರದಲ್ಲಿರುವ ಶ್ರೀಮುರಳಿ ಮನೆಗೆ ಭೇಟಿ ನೀಡಿ ಮದುವೆಯ ಕರೆಯೋಲೆ ಕೊಟ್ಟು ಬಂದಿದ್ದಾರೆ ತರುಣ್.
ಜೆಪಿ ನಗರದಲ್ಲಿರುವ ಆಪ್ತರಾದ ಸುದೀಪ್ (Sudeep) ಮನೆಗೆ ಭೇಟಿ ಕೊಟ್ಟು ಮದುವೆಗೆ ಕರೆದಿದ್ದಾರೆ. ಬಳಿಕ ಸುದೀಪ್ ಜೊತೆ ಕೆಲ ಸಮಯ ಕಳೆದಿದ್ದಾರೆ.
ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ನಿವಾಸಕ್ಕೆ ಭೇಟಿ ನೀಡಿ ಮದುವೆ ಪತ್ರಿಕೆ ನೀಡಿದ ಬಳಿಕ ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ದಂಪತಿಗೂ ಮದುವೆಗೆ ಬರಲು ಪ್ರೀತಿಯಿಂದ ಕರೆಯೋಲೆ ಕೊಟ್ಟಿದ್ದಾರೆ.
ದರ್ಶನ್ ಸಹೋದರ ದಿನಕರ್ ಮನೆಗೆ ಭೇಟಿ ನೀಡಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅದಷ್ಟೇ ಅಲ್ಲ, ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್ ದಂಪತಿ, ಹಂಸಲೇಖ, ಸುಮಲತಾ, ಜಗ್ಗೇಶ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಲವ್ಲಿ ಸ್ಟಾರ್ ಪ್ರೇಮ್ ಕುಟುಂಬಕ್ಕೆ ಮದುವೆ ಪತ್ರಿಕೆ ನೀಡಿದ್ದಾರೆ. ಈ ವೇಳೆ, ಎಲ್ಲಾ ಸ್ಟಾರ್ಸ್‌ಗೆ ಪರಿಸರ ಸ್ನೇಹಿ ಆಹ್ವಾನ ಪತ್ರಿಕೆ ನೀಡಿದ್ದು, ಎಲ್ಲರ ಗಮನ ಸೆಳೆದಿದೆ.
ಇದಷ್ಟೇ ಅಲ್ಲ, ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿರುವ ಆರ್. ಅಶೋಕ್, ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ, ಡಿ.ಕೆ ಶಿವಕುಮಾರ್ ಅವರಿಗೂ ತರುಣ್ ಸುಧೀರ್ ವಿವಾಹದ ಪತ್ರಿಕೆ ನೀಡಿದ್ದಾರೆ.
ಇನ್ನೂ ತರುಣ್ ಸುಧೀರ್ ಮತ್ತು ಸೋನಲ್ ಜೋಡಿ ಇದೇ ಆಗಸ್ಟ್ 10, 11ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 10ರಂದು ಸಂಜೆ 6:30 ನಂತರ ಆರತಕ್ಷತೆ ಕಾರ್ಯಕ್ರಮ, ಆ.11ರಂದು ಬೆಳಗ್ಗೆ 10:50 ರಿಂದ 11:35ರ ಶುಭ ಮುಹೂರ್ತದಲ್ಲಿ ಮದುವೆ ನಡೆಯಲಿದೆ. ಹಿಂದೂ ಸಂಪ್ರದಾಯದಂತೆ ಮದುವೆ ಜರುಗಲಿದೆ.