ಬೆಂಗಳೂರು: ಪರಭಾಷಿಕರು ಕನ್ನಡ ಸಿನಿಮಾಗಳನ್ನು ನೋಡಿ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡುತ್ತಿವೆ. ಸ್ಯಾಂಡಲ್‍ವುಡ್‍ನ ಕಟಕ ಚಿತ್ರತಂಡ ಮಾಡಿರೋ ಪ್ರಯತ್ನ ಅಂತಹ ಮೋಡಿಗೆ ಸಾಕ್ಷಿಯಾಗಿದೆ.
ರವಿ ಬಸ್ರೂರ್ ನಿರ್ದೇಶನದ ಕಟಕ್ ಸಿನಿಮಾ ಬರೋಬ್ಬರಿ 14 ಭಾಷೆಗಳಲ್ಲಿ ತನ್ನ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಿನಿಮಾ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಹಳ್ಳಿಯಲ್ಲಿ ನಡೆಯುವ ವಾಮಾಚಾರದ ಸುತ್ತ ಹೆಣೆದ ಕಥೆಯನ್ನು ಕಟಕ್ ಹೊಂದಿದೆ. ಹಾರರ್, ಸಸ್ಪೆನ್ಸ್ ಎಲಿಮೆಂಟ್ಸ್ ಇರೋ ಈ ಸಿನಿಮಾ ಸದ್ಯ ಕನ್ನಡದಲ್ಲಿ ಮಾತ್ರವಲ್ಲ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಬರೋಬ್ಬರಿ 14 ಬಾಷೆಗಳಲ್ಲಿ ಡಬ್ ಆಗಲಿದೆ. ಸಿನಿಮಾದ ಎರಡು ಕಲರ್‍ಫುಲ್ ಹಾಡುಗಳು ಕೂಡ ಪಾತ್ರಗಳ ಕಣ್ಣೀರಿನ ಕಥೆಯನ್ನು ಹೇಳುತ್ತಿವೆ.
ಈ ಸಿನಿಮಾದಲ್ಲಿ ಅಶೋಕ್, ಸ್ಪಂದನ, ಶ್ಲಾಘಾ ನಟಿಸಿದ್ದಾರೆ. ಎನ್.ಎಸ್.ರಾಜಕುಮಾರ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಹದಿನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಿರೋ ಟ್ರೇಲರ್‍ಗಳು ಪರಭಾಷಿಗರನ್ನೂ ಮೋಡಿ ಮಾಡಿದ ನಂತರ ಉಳಿದೆಲ್ಲಾ ಭಾಷೆಗಳಲ್ಲಿ ಕಟಕ ಸಿನಿಮಾ ಡಬ್ ಆಗಲಿದೆ.