ಶ್ರೀನಗರ: ಕಾಶ್ಮೀರದ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲೆಂದು ಶ್ರೀನಗರ ಶಾಲ್ಮರ್ ಏರಿಯಾದಿಂದ ದೆಹಲಿಗೆ 900 ಕಿಮೀ ದೂರದ ಕಾಲ್ನಡಿಗೆ ಯಾತ್ರೆ ಹಮ್ಮಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾನೆ.
ಫಹೀಮ್ ನಾಜೀರ್, ಪ್ರಧಾನಿ ಮೋದಿಯವರ ಕಟ್ಟಾ ಅಭಿಮಾನಿಯಾಗಿದ್ದಾನೆ. ನರೇಂದ್ರ ಮೋದಿಯವರನ್ನು ಭೇಟಿಯಾಗುವುದು ತನ್ನ ಕನಸು. ನಾನು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ. ಸದ್ಯ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದೇನೆ. ಕೆಲವು ವರ್ಷಗಳ ಹಿಂದೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿಯವರು ಭಾಷಣ ಮಾಡುತ್ತಿದ್ದರು. ಆಗ ಸಮೀಪದ ಮಸೀದಿಯಲ್ಲಿ ಆಜಾನ್ ಶುರುವಾಯಿತು ಮಸೀದಿಯಿಂದ ಆಜಾನ್ ಕೇಳಿಬರುತ್ತಿದ್ದಂತೆ ಪ್ರಧಾನಿ ಮೋದಿ ಭಾಷಣ ನಿಲ್ಲಿಸಿದ್ದರು. ಅದನ್ನು ನೋಡಿ ತುಂಬಾ ಖುಷಿಯಾಯಿತು. ಅಂದಿನಿಂದಲೂ ಮೋದಿಯವರೆಂದರೆ ನನಗೆ ಪಂಚಪ್ರಾಣ ಎಂದು ಯುವಕ ಹೇಳಿದ್ದಾನೆ. ಇದನ್ನೂ ಓದಿ: ಕೆಜಿಎಫ್ ಟೀಂ ಅಲ್ಲ ಅದು ಫ್ಯಾಮಿಲಿ: ಶ್ರೀನಿಧಿ ಶೆಟ್ಟಿ
Advertisement
Advertisement
ಅಂದು ಪ್ರಧಾನಿ ನರೇಂದ್ರ ಮೋದಿಯವರ ನಡೆಯಿಂದ ತುಂಬಾ ಸ್ಫೂರ್ತಿ ಪಡೆದೆ. ಅಂದಿನಿಂದಲೂ ಅವರ ಅಭಿಮಾನಿಯಾದೆ. ಪ್ರಧಾನಿಯವರನ್ನು ಭೇಟಿಯಾಗಲೆಂದು ಎರಡು ಬಾರಿ ದೆಹಲಿಗೆ ಹೋದೆ. ಆದರೆ ಎರಡೂ ಬಾರಿಯೂ ಭೇಟಿ ಸಾಧ್ಯವಾಗದೆ ಬಂದೆ. ಇದೀಗ ಕಾಲ್ನಡಿಗೆಯಲ್ಲೇ ಹೊರಟಿದ್ದೇನೆ ಎಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಳಿಯ ಉಧಾಂಪುರದಲ್ಲಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾನೆ.
Advertisement
Advertisement
ಜಮ್ಮು-ಕಾಶ್ಮೀರದಲ್ಲಿ ಇರುವ ನಿರುದ್ಯೋಗ ಸಮಸ್ಯೆ ಬಗ್ಗೆ ಅವರಿಗೆ ತಿಳಿಸುತ್ತೇನೆ. ಹಾಗೇ, ಯುವಕರಿಗೆ ಹೆಚ್ಚೆಚ್ಚು ಅವಕಾಶ ಕೊಡಿ ಎಂದು ಮೋದಿ ಅವರ ಬಳಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾನೆ ಇದನ್ನೂ ಓದಿ: ಈಗ ತಕ್ಷಣ ನಾನು ನಿಮಾನ್ಸ್‌ಗೆ ಹೋಗಿ ಚಿಕಿತ್ಸೆ ಪಡೆಯುತ್ತೇನೆ: ಡಿಕೆಶಿ
ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರಕ್ಕೆ ಬಂದಾಗಲೂ ಅವರನ್ನು ಭೇಟಿಯಾಗಲು ಪ್ರಯತ್ನ ಮಾಡಿದೆ. ಆದರೆ ಅವರ ಭದ್ರತೆ ಕಾರಣಕ್ಕೆ ನನಗೆ ಅವಕಾಶ ಸಿಗಲಿಲ್ಲ. ಆದರೆ ನಾನೀಗ ಪ್ರಧಾನಿಯವರನ್ನು ಭೇಟಿಯಾಗಲೇಬೇಕು ಎಂಬ ಉದ್ದೇಶದಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದೇನೆ. ಈ ಬಾರಿ ಖಂಡಿತ ನನಗೆ ಅವರು ಸಿಗುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾನೆ.